ಬೆಂಗಳೂರು,ಅ.29– ವಾಣಿಜ್ಯ ತೆರಿಗೆ ಕಡಿಮೆ ಮಾಡಲು ಲಂಚ ಪಡೆಯುತ್ತಿದ್ದ ಕೋರಮಂಗಲದ ವಿಭಾಗ -5 ರ ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುತ್ತ ಬಲೆಗೆ ಬಿದ್ದಿದ್ದಾರೆ. ಮೂಲತ ಕೊಪ್ಪಳ ಜಿಲ್ಲೆ ,ಗಂಗಾವತಿಯ,ಪ್ರಸ್ತುತ ನಗರದ ಚಾಮರಾಜಪೇಟೆಯಲ್ಲಿ ವಾಸವಾಗಿರುವ ಶೇಖರ್ ಪಿ .ಪಾಟೀಲ್ ಬಲೆಗೆ ಬಿದ್ದ ಅಧಿಕಾರಿ.
ಮಹದೇವಪುರದ ವ್ಯಾಪಾರಿಯೊಬ್ಬರು ತೆರಿಗೆ ಮೊತ್ತ ಕಡಿಮೆ ಮಾಡಲು 80000 ಸಾವಿರ ಲಂಚ ಕೇಳಿ ನಂತರ 50,500ರೂ ಪಡೆಯುವಾಗ ಎಸ್‌ಪಿ ವಂಶಿಕೃಷ್ಣ ನೇತೃತ್ವದಲ್ಲಿ ಉಪ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ನಾಗೇಶ್, ಇನ್ಸ್ ಸ್ಪೆಕ್ಟರ್ ವಿಜಯಕೃಷ್ಣ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ