ಬೆಂಗಳೂರು, ಅ.29- ಕನ್ನಡಿಗರ ಅಚ್ಚುಮೆಚ್ಚಿನ ಸುಪುತ್ರ, ಕರ್ನಾಟಕ ರತ್ನ ಪುನಿತ್ ರಾಜಕುಮಾರ್ ನಮ್ಮನ್ನೆಲ್ಲ ಆಗಲಿ ಇಂದಿಗೆ ಎರಡು ವರ್ಷ ಕಳೆದೇ ಹೋಯಿತು. ಆದರೆ ಅವರ ನೆನಪುಗಳು ಪ್ರತಿಯೊಬ್ಬರ ಮನಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ. ಎರಡು ವರ್ಷಗಳ ಹಿಂದೆ ಇದೇ ತಿಂಗಳು ಇದೇ ದಿನ ಅಚಾನಕ್ಕಾಗಿ ಯಾರಿಗೂ ಹೇಳದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಜಕುಮಾರನಿಗೆ ಮಿಡಿದ ಹೃದಯಗಳು ಅಗಣಿತ.
ತಮ್ಮ ಮನೆಯಲ್ಲಿ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಶೋಕವನ್ನು ವ್ಯಕ್ತಪಡಿಸಿದರು. ಯಾರೇ ಒಬ್ಬ ಗಣ್ಯ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಒಂದು ಅಥವಾ ಎರಡು ಮೂರು ತಿಂಗಳೊಳಗೆ ಜನ ಮರೆತು ಹೋಗುತ್ತಾರೆ ಆದರೆ ಅಪ್ಪು ವಿಷಯದಲ್ಲಿ ಹಾಗಾಗಲಿಲ್ಲ. ಎರಡು ವರ್ಷ ಕಳೆದರೂ ಮರೆಯಲು ಇಷ್ಟಪಡದ ಅಭಿಮಾನಿಗಳು, ಪ್ರತಿದಿನ ಪ್ರತಿಕ್ಷಣ ನೆನೆಯುತ್ತಾ ದೊಡ್ಮನೆ ಹುಡುಗನಿಗೆ ಈ ರೀತಿಯ ಸಾವು ನ್ಯಾಯವಲ್ಲ ಎಂದು ಇಂದಿಗೂ ದೇವರನ್ನು ಜನ ಶಪಿಸುತ್ತಾರೆ. ಕೆಲ ಅಭಿಮಾನಿಗಳಂತೂ ಜೊತೆಯಲ್ಲಿಯೇ ಪಯಣ ಬೆಳೆಸಿದ್ದು ಉಂಟು.
ಅಪ್ಪು ಈಗ ಕೇವಲ ಮಾನವನಲ್ಲ ದೇವಮಾನವ. ಲಕ್ಷಾಂತರ ದೇವರ ಮನೆಗಳಲ್ಲಿ ಪರಮಾತ್ಮನಾಗಿದ್ದಾನೆ. ತನಗಾಗಿ ಗುಡಿ ಗೋಪುರ ಕಟ್ಟಿಸಿಕೊಂಡಿದ್ದಾನೆ. ಪ್ರತಿಯೊಂದು ಊರು, ಬೀದಿ, ಜಾತ್ರೆಗಳಲ್ಲಿ ಕಟೌಟ್‍ಗಳ ಮೂಲಕ ರಾರಾಜಿಸುತ್ತಿದ್ದಾರೆ. ಕೆಲವು ಜಾತ್ರೆ ತೇರುಗಳಲ್ಲಿ ದೇವರೊಂದಿಗೆ ಅಪ್ಪು ಪೋಟೋ ಇಟ್ಟು ಪೂಜಿಸಿದ್ದು ಉಂಟು. ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ ಅಜರಾಮರವಾಗಿ ಕನ್ನಡಿಗರು ಎದೆಯಲ್ಲಿ ಹಾರದ ಜ್ಯೋತಿಯಾಗಿ ಮಿನುಗುತ್ತಿದ್ದಾರೆ.
ಬೆಂಗಳೂರು ನಗರ ಅಷ್ಟೇ ಅಲ್ಲದೆ ಪ್ರತಿಯೊಂದು ಊರು ಗಲ್ಲಿಗಳಲ್ಲಿ ಇಂದು ಅಪ್ಪು ಸ್ಮರಣೆ ನಡೆಯುತ್ತಿದೆ. ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ಬ್ಲಡ್ ಡೊನೇಷನ್ ಕ್ಯಾಂಪ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಬಡ ಶಾಲಾ ಮಕ್ಕಳಿಗೆ ಆರ್ಥಿಕ ನೆರವು, ಪುಸ್ತಕಗಳ ವಿತರಣೆ ಯಂತಹ ನೂರಾರು ಸಮಾಜಸೇವಾ ಕಾರ್ಯಗಳು ಪುನೀತ್ ಅವರ ಹೆಸರಿನಲ್ಲಿ ನಡೆಯುತ್ತಿವೆ.
ಪುನೀತ್ ರಾಜಕುಮಾರ್ ಬದುಕಿದ್ದಾಗ ಸಮಾಜಕ್ಕಾಗಿ ಅವರ ಜೀವ ಸದಾ ಮಿಡಿಯುತ್ತಿತ್ತು. ಅದು ಅಂದು ಯಾರಿಗೂ ಗೊತ್ತಾಗಿರಲಿಲ್ಲ. ಸ್ವಂತ ಮನೆಯವರಿಗೂ ಹೇಳಿಕೊಂಡಿರಲಿಲ್ಲ ಅಂದರೆ ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ನಂಬಿದವರು. ಕೊನೆಯವರೆಗೂ ಹಾಗೆಯೇ ಬದುಕಿದ್ದರು. ಅವರು ಮಾಡಿದ ದಾನ ಧರ್ಮಕ್ಕೆ ಇಡೀ ಭಾರತ ಶಿರಭಾಗಿ ನಮಿಸಿತ್ತು.
ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿಯಲ್ಲೂ, ಸಾಮಾಜಿಕ ಚಿಂತನೆ ಮೆರೆದಿದ್ದಾರೆ. ಗಿಡ ಬೆಳೆಸಿ ಕಾಡನ್ನು ಉಳಿಸಿ ಮುಂದಿನ ಪೀಳಿಗೆ ಸುಖವಾಗಿ ಬದುಕಲು ವನ್ಯ ಸಂಪತ್ತು ಮುಖ್ಯ. ನಾವೆಲ್ಲರೂ ಕೈಜೋಡಿಸಬೇಕು. ಪ್ರಕೃತಿಯೊಂದಿಗೆ ಕಾಲ ಕಳೆದಾಗ ನಮ್ಮನ್ನು ನಾವು ಒರೆತುಕೊಳ್ಳಬಹುದು ಎಂಬ ಮಹತ್ತರ ಸಂದೇಶವನ್ನು ನಮ್ಮನ್ನ ಅಗಲಿ ಹೋಗುವಾಗ ಸಾರಿದ್ದಾರೆ. ಈಗ ಅಭಿಮಾನಿಗಳು ಅಪ್ಪು ಹೇಳಿದಂತೆ ಗಿಡಗಳನ್ನು ಹಂಚುವ ಕಾರ್ಯದಲ್ಲಿ ತೊಡಗುತ್ತಾ ನೀಡುವ ಪ್ರಕ್ರಿಯೆಯನ್ನು ಶುರುಮಾಡಿಕೊಂಡಿದ್ದಾರೆ.
ಯುವರತ್ನನ ಅಗಲಿಕೆ, ಇರುವ ತನಕ ಸಂತೋಷದಿಂದ, ಸಾಮರಸ್ಯದಿಂದ ಬದುಕಿ, ಅಭಲರಿಗೆ ನೆರವಾಗುತ್ತಾ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂಬ ದೊಡ್ಡ ಪಾಠ ಕಲಿಸಿದೆ. ಈಗ ಎಲ್ಲಾ ಕಡೆ ಅಪ್ಪು ಅಂತಹ ದೊಡ್ಡ ಮನುಷ್ಯನೇ ಎಲ್ಲವನ್ನು ಬಿಟ್ಟು ಹೋದ ನಾವು ಅವರ ದೂಳು ಸಮಾನ, ಯಾವಾಗ ಬೇಕಾದರೂ ಉಸಿರು ನಿಲ್ಲಬಹುದು, ಜೀವನನ ನಶ್ವರ ಎಂದು ಹೇಳುತ್ತಾ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ.
ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು
ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.. 2ನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸಮಾ ನಿರ್ಮಾಣ ಮಾಡಲಾಗಿದೆ. ರಾಜ್ ಕುಟುಂಬಸ್ಥರು ಸಮಾ ನಿರ್ಮಿಸಿದ್ದು ಸ್ಮಾರಕ ನಿರ್ಮಾಣ ಕೆಲಸ ನಡೆದಿದೆ.
ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸïನಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಮೇಲೆ ಪುನೀತ್ ರಾಜ್ ಕುರ್ಮಾ ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲ್ಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಅಣ್ಣಾವ್ರ ಸ್ಮಾರಕದ ರೀತಿಯಲ್ಲೇ ಪುನೀತ್ ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಪುನೀತ್ ಅಗಲಿಕೆಯ ನೋವು ಇನ್ನು ಕುಟುಂಬಸ್ಥರನ್ನು ಕಾಡುತ್ತಿದೆ. ಬೆಳಗ್ಗೆ 9 ಗಂಟೆಗೆ ಪುನೀತ್ ರಾಜïಕುಮಾರ್ ಕುಟುಂಸ್ಥರು ಸಮಾ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜïಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಿದರು ರಾಘಣ್ಣ, ಶಿವಣ್ಣ ಸೇರಿದಂತೆ ಕುಟಂಬಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಳೆದ 1 ತಿಂಗಳಿನಿಂದ ಅಪ್ಪು ಸಮಾ ನಿರ್ಮಾಣ ಕೆಲಸ ನಡೆಯುತ್ತಿತ್ತು. ರಾಜ್ ಕುಮಾರ್ ಸ್ಮಾರಕದ ರೀತಿಯಲ್ಲೇ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಅಪ್ಪು 2ನೇ ವರ್ಷದ ಪುಣ್ಯ ಸ್ಮರಣೆಯನ್ನು ಸಾರ್ಥಕವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ಸ್ಮಾರಕದ ಬಳಿ ನಿರಂತರ ಅನ್ನದಾನ ಇರಲಿದೆ. ಅಪ್ಪು ನೆನಪಲ್ಲಿ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರ ಕೂಡ ಆಯೋಜಿಸಲಾಗಿದೆ.