Wednesday, October 30, 2024
Homeರಾಷ್ಟ್ರೀಯ | Nationalಸಲ್ಮಾನ್ ಖಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ, 2 ಕೋಟಿ ರೂ. ಹಫ್ತಾಗೆ ಬೇಡಿಕೆ

ಸಲ್ಮಾನ್ ಖಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ, 2 ಕೋಟಿ ರೂ. ಹಫ್ತಾಗೆ ಬೇಡಿಕೆ

Salman Khan gets death threat again, message says pay ₹2 crore

ಮುಂಬೈ, ಅ. 30 (ಪಿಟಿಐ) – ಬ್ಯಾಡ್‌ ಬಾಯ್‌ ಸಲ್ಮಾನ್ ಖಾನ್‌ ಅವರಿಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ. ಈ ಬಾರಿ ಬೆದರಿಕೆ ಹಾಕಿರುವವರು ಎರಡು ಕೋಟಿ ರೂಪಾಯಿ ಹಫ್ತಾ ನೀಡಬೇಕು ಇಲ್ಲದಿದ್ದರೆ ಕೊಲೆ ಮಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಟ್ರಾಫಿಕ್‌ ಪೊಲೀಸರಿಗೆ ನಿನ್ನೆ ಅನಾಮಧೇಯ ಸಂದೇಶವೊಂದು ಬಂದಿದ್ದು, ಎರಡು ಕೋಟಿ ರೂಪಾಯಿ ನೀಡದಿದ್ದರೆ ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮುಂಬೈ ಟ್ರಾಫಿಕ್‌ ಪೊಲೀಸರ ವಾಟ್ಸಾಪ್‌ ಹೆಲ್ಪ್ ಲೈನ್‌ ಡೆಸ್ಕ್‌ಗೆ ಸಲಾನ್‌ ಖಾನ್‌ 5 ಕೋಟಿ ರೂಪಾಯಿ ಹಫ್ತಾ ನೀಡುವಂತೆ ಬೆದರಿಕೆ ಸಂದೇಶ ಬಂದಿತ್ತು.ಈ ಸಂಬಂಧ ಜೆಮ್‌ಶೆಡ್‌ಪುರದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಲಾನ್‌ ಖಾನ್‌ ಮತ್ತು ಎನ್‌ಸಿಪಿ ನಾಯಕ ಜೀಶಾನ್‌ ಸಿದ್ದಿಕ್‌ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಉತ್ತರ ಪ್ರದೇಶದ ನೋ್ಡಾದ ವ್ಯಕ್ತಿಯನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗಮನಾರ್ಹವಾಗಿ, ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನಿಂದ ಖಾನ್‌ಗೆ ಈ ಹಿಂದೆ ಕೊಲೆ ಬೆದರಿಕೆಗಳು ಬಂದಿದ್ದವು. ಗ್ಯಾಂಗ್‌ನ ಶಂಕಿತ ಸದಸ್ಯರು ಈ ವರ್ಷದ ಏಪ್ರಿಲ್‌ನಲ್ಲಿ ನಟನ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದರು.

RELATED ARTICLES

Latest News