Sunday, November 24, 2024
Homeರಾಜ್ಯನಾಗಮಂಗಲಕ್ಕೂ ವಕ್ಕರಿಸಿದ ವಕ್ಫ್ ಭೂತ..!

ನಾಗಮಂಗಲಕ್ಕೂ ವಕ್ಕರಿಸಿದ ವಕ್ಫ್ ಭೂತ..!

Waqf Land Dispute in Nagamangala

ಮಂಡ್ಯ, ಅ.30- ವಕ್ಫ್ ಮಂಡಳಿ ನೋಟೀಸ್ ಕಿಚ್ಚು ಈಗ ದಕ್ಷಿಣಕ್ಕೂ ಹರಡಿದ್ದು, ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರೈತರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಜಾಮಿಯಾ ವಕ್ಫ್ ಕಮಿಟಿಗೆ ಕೆಲವರು ಪತ್ರ ಬರೆದು ಸರ್ವೇ ನಂ 472ರಲ್ಲಿ 20 ಎಕರೆ ಜಮೀನು ಮಸೀದಿಗೆ, 34 ಎಕರೆ 12 ಗುಂಟೆ ಸೂಫಿ ಸಂತರಿಗೆ, ಸರ್ವೇ ನಂ. 73ರಲ್ಲಿ 6 ಎಕರೆ 6 ಗುಂಟೆ ಖಬರಸ್ಥಾನ್ಗೆ ಪಹಣಿ ಮಾಡಿಕೊಡುವಂತೆ ಪತ್ರದಲ್ಲಿ ಮನವಿ ಮಾಡಿಕೊಡಲಾಗಿದೆ.

ಆದರೆ ಇಲ್ಲಿ ಕೆಲವು ಭಾಗಗಳಲ್ಲಿ ಗೋಮಾಳ ಇದ್ದು, ಹಲವು ರೈತರಿಗೆ ಸೇರಿದ ಜಮೀನು ಇದ್ದು ಅಲ್ಲಿ ರೈತರು ಉಳಿಮೆ ಮಾಡುತ್ತಿದ್ದು, ಪ್ರಸ್ತುತ ಈ ಘಟನೆ ಆತಂಕ ಹೆಚ್ಚಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಮಠದ ಆಸ್ತಿ ವಕ್ಫ್ ಪಾಲಾಗುವ ಭೀತಿ ಎದುರಾಗುತ್ತಿದ್ದು, ಸಿಂದಗಿ ತಾಲೂಕಿನ ಯರಗಲ್ ಬಿಕೆ ಗ್ರಾಮದ ಸಿದ್ಧ ಶಂಕರಲಿಂಗ ಮಠದ ಆಸ್ತಿಗೆ ನೊಟೀಸ್ ನೀಡಲಾಗಿದೆ.

8.16 ಎಕರೆ ಜಮೀನು ನಮದು ಎಂದು ವಕ್‌್ಫ ಪ್ರತಿಪಾದಿಸಿದೆ. ಕಳೆದ 1952ರಲ್ಲಿ ಸಿಂದಗಿಯ ಕುಲಕರ್ಣಿ ಮನೆತವರಿಂದ ಮಠಕ್ಕೆ ದಾನವಾಗಿ ಈ ಜಾಗವನ್ನು ನೀಡಲಾಗಿತ್ತು. ಆದರೆ ಈಗ ಅದು ವಕ್‌್ಫ ಆಸ್ತಿ ಎಂದು ನೊಟೀಸ್ ನೀಡಲಾಗಿದೆ.

ಕಳೆದ 2018ರಲ್ಲಿ ಈ ವಕ್‌್ಫ ಹೆಸರು ಪಹಣಿಯಲ್ಲಿ ಸೇರಿದೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ಪಾಣಿಯಲ್ಲಿ ಅದು ಸುನ್ನಿ ವಕ್‌್ಫಬೋರ್ಡ್ ಸೇರ್ಪಡೆಯಾಗಿದ್ದು ಮಠದ ಪೀಠಾಧ್ಯಕ್ಷ ಸಿದ್ದರಾಜು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.ಇಂದು ಭಕ್ತರು ಕೂಡ ಅಲ್ಲಿ ಜಮಾಯಿದ್ದು, ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದ ಡಿಸಿ ಕಚೇರಿ ಬಳಿ ರೈತರು ಇಡೀ ರಾತ್ರಿ ಪ್ರತಿಭಟನೆ ನಡೆಸಿದ್ದು, ಕರಾಳ ದೀಪಾವಳಿ ಆಚರಿಸುತ್ತೇವೆ ಎಂದು ಗುಡುಗಿದ್ದಾರೆ.ಸಿಎಂ ಹಾಗೂ ಸಚಿವರ ಭಾವಚಿತ್ರದ ಬಳಿ ದೀಪವಿಟ್ಟು ಅಲ್ಲೇ ಅಡುಗೆ ಮಾಡಿ ಕೂಡಲೇ ನಮ ಪಹಣಿಯಲ್ಲಿ ಬಂದಿರುವ ವಕ್‌್ಫಬೋರ್ಡ್ ಹೆಸರನ್ನು ತೆಗೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ನೂರಾರು ರೈತರು ಪಟ್ಟು ಹಿಡಿದಿದ್ದಾರೆ. ಪೊಲೀಸರು ಹಾಗೂ ಕೆಲ ಅಧಿಕಾರಿಗಳು ಅವರ ಮನವಲಿಕೆಗೆ ಪ್ರಯತ್ನಿಸಿದರೂ ಸಹ ಅದು ಫಲನೀಡದೆ ರೈತರ ಆಕ್ರೋಶದ ಕಟ್ಟೆ ಹೊಡೆದಿದೆ.

ಇನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಚರ್ಮದ ಕಾರ್ಖಾನೆ ಮತ್ತು ಅದರ ಪಕ್ಕದ ಜಮೀನನ್ನು ವಕ್‌್ಫ ಮಂಡಳಿ ಸ್ವಾದೀನ ಪಡಿಸಿಕೊಳ್ಳಬೇಕು. ಮತ್ತು ಅದನ್ನು ಮುಸ್ಲಿಂ ಸಮುದಾಯಕ್ಕೆ ವಹಿಸಬೇಕು ಎಂದು ಅಲ್ಲಿನ ಮಸೀದಿ ಪತ್ರ ಬರೆದಿರುವುದು ಕೂಡ ರೈತರ ಮನ ಕೆರಳುವಂತೆ ಮಾಡಿದೆ.

ಈಗಾಗಲೇ ತಾಲೂಕು ಕಚೇರಿಗಳ ಬಳಿ ರೈತರು ಜಮಾಯಿಸುತ್ತಿದ್ದು, ಪಹಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಿ ನಮ ಪಹಣಿಯಲ್ಲೂ ವಕ್‌್ಫ ನಮೂದಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನು ವಕ್‌್ಫ ಮಂಡಳಿ ಹೆಸರಿಗೆ ದಾಖಲಾಗಿದೆ.

ಇದರ ಹಿಂದೆ ಕಾಂಗ್ರೆಸ್ ಹಾಗೂ ಸಚಿವ ಜಮೀರ್ ಅವರ ಕುಮಕ್ಕು ಕೆಲಸ ಮಾಡುತ್ತಿರುವುದು ಸ್ಪಷ್ಟ. ರಾಜ್ಯ ರೈತರನ್ನು ಭಯಭೀತರನ್ನಾಗಿ ಮಾಡಿ ಭೂಕಬಳಿಕೆಗೆ ಹುನ್ನಾರ ಎಂದು ಜೋಷಿ ಆರೋಪಿಸಿದ್ದಾರೆ.

RELATED ARTICLES

Latest News