Thursday, October 31, 2024
Homeರಾಜ್ಯಗ್ಯಾರಂಟಿ ಯೋಜನೆಗಳು ನಿಲುವುದಿಲ್ಲ : ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳು ನಿಲುವುದಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ.31- ಶಕ್ತಿ ಯೋಜನೆ ಸೇರಿದಂತೆ ಯಾವುದೇ ಪಂಚಖಾತ್ರಿಗಳನ್ನು ಪರಿಷ್ಕರಣೆ ಮಾಡುವ ಉದ್ದಾಶವಾಗಲಿ ಅಥವಾ ಪ್ರಸ್ತಾವನೆಯಾಗಲಿ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಸರ್ಕಾರದ ಮಟ್ಟದಲ್ಲಿ ಅಂತಹ ಯಾವುದೇ ಚರ್ಚೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಿಂದ 200 ನೋಟಿಸ್ :
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇರೆಬೇರೆ ಜಿಲ್ಲೆಗಳಲ್ಲಿ 200 ನೋಟಿಸ್ ಗಳನ್ನು ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ನೀಡಲಾಗಿತ್ತು. ಈಗ ಇಬ್ಬಂದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಹಾಗೂ ರಾಜ್ಯದ ಮೂರು ವಿಧಾನಸಭೆಗಳಿಗೆ ಉಪಚುನಾವಣೆ ಇರುವ ಕಾರಣಕ್ಕಾಗಿ ಬಿಜೆಪಿಯವರು ಇಲ್ಲಸಲ್ಲದ ವಿಚಾರಗಳನ್ನು ಪ್ರಸ್ತಾಪ ಮಾಡಿ ವಿವಾದ ಮಾಡುತ್ತಿದ್ದಾರೆ. ಮುಡಾದಲ್ಲಿ ನನ್ನ ವಿರುದ್ಧ ಯಾವ ಆರೋಪವೂ ಇಲ್ಲ. ಆದರೂ ವಿವಾದ ಮಾಡಿ ಗೊಂದಲ ಮೂಡಿಸಿದರು ಎಂದು ಟೀಕಿಸಿದರು.

ವಕ್ಫ್ ಆಸ್ತಿಗೆ ಸಂಬAಧಪಟ್ಟAತೆ ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ಅವರ ಕಾಲದಲ್ಲಿ ಯಾವ ಕಾರಣಕ್ಕೆ, ಏಕೆ ನೋಟೀಸï ಕೊಟ್ಟಿದ್ದರು?, ನೋಟೀಸï ಕೊಡುವುದನ್ನು ಶುರು ಮಾಡಿದ್ದಾ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೀಡಲಾಗಿರುವ ನೋಟೀಸïಗಳನ್ನು ಹಿಂಪಡೆಯುತ್ತೇವೆ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾವೆ. ಹೀಗಿದ್ದ ಮೇಲೆ ವಿವಾದ ಎಲ್ಲಿದೆ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಇರುವುದೇ ರಾಜಕೀಯ ಮಾಡಲು. ಅವರು ಎಂದಿಗೂ ಸತ್ಯ ಹೇಳುವುದಿಲ್ಲ. ಸುಳ್ಳು ಹೇಳುತ್ತಲೇ ಬಂದಿದ್ದಾರೆ. ವಕ್ಫ್ ವಿವಾದವನ್ನು ಮಹಾರಾಷ್ಟ್ರದಲ್ಲೂ ಬಳಕೆ ಮಾಡುವುದು ಅವರ ಉದ್ದಾಶ ಎಂದು ಹೇಳಿದರು. ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೆöÃತ್ರಗಳ ಉಪಚುನಾವಣೆಗೆ ನ.4ರಿಂದ 11ರವರೆಗೂ ನಾನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಶಿಗ್ಗಾವಿ ಕ್ಷೆöÃತ್ರದಲ್ಲಿ ಕಾಂಗ್ರೆಸïನಿAದ ಪಕ್ಷೆöÃತರರಾಗಿ ಸ್ಪರ್ಧಿಸಿದ್ದ ಕಾಂಗ್ರೆಸï ಅಜ್ಜಂಪೀರ್ ಖಾದ್ರಿ ನಾಮಪತ್ರ ಹಿಂಪಡೆದಿದ್ದಾರೆ. ಅವರನ್ನು ಕೂಡಿ ಹಾಕಿ ಬಲವಂತವಾಗಿ ನಾಮಪತ್ರ ವಾಪಸï ತೆಗೆಸಲಾಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿರುವುದು ಆಧಾರರಹಿತ. ಕುಮಾರಸ್ವಾಮಿ ಎಂದಿಗೂ ನಿಜ ಹೇಳುವುದಿಲ್ಲ, ಬರೀ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು.

RELATED ARTICLES

Latest News