Sunday, November 24, 2024
Homeರಾಜ್ಯರಾಜ್ಯಸರ್ಕಾರಕ್ಕೆ ಅಂತಿಮ ದಿನಗಳು ಬರುತ್ತಿವೆ : HD ಕುಮಾರಸ್ವಾಮಿ

ರಾಜ್ಯಸರ್ಕಾರಕ್ಕೆ ಅಂತಿಮ ದಿನಗಳು ಬರುತ್ತಿವೆ : HD ಕುಮಾರಸ್ವಾಮಿ

ಬೆಂಗಳೂರು,ಅ.31- ಸ್ವಯಂಕೃತ ಅಪರಾಧದಿಂದ ರಾಜ್ಯಸರ್ಕಾರಕ್ಕೆ ಅಂತಿಮ ದಿನಗಳು ಬರುತ್ತಿವೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಬೇಡ ಎಂದು ಹಲವು ಮಹಿಳೆಯರು ತಮಗೆ ಟ್ವೀಟ್ ಮಾಡಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ಕಾರ್ಯಕ್ರಮದಲ್ಲಿ ಹೇಳಿದ್ದು, ಇದು ಗ್ಯಾರಂಟಿ ಯೋಜನೆಯನ್ನು ರದ್ದುಪಡಿಸುವ ಮೊದಲ ಹಂತದ ಸಂದೇಶವಾಗಿದೆ ಎಂದು ಆರೋಪಿಸಿದರು.

5 ಗ್ಯಾರಂಟಿ ಯೋಜನೆಗಳಲ್ಲಿ ಒಂದೊAದನ್ನೇ ರದ್ದು ಮಾಡುವ ಕಾರ್ಯಕ್ರಮವನ್ನು ಸರ್ಕಾರ ಚಿಂತಿಸಿದೆ. ಅದಕ್ಕೆ ಪೂರಕವಾದ ವೇದಿಕೆ ಸಿದ್ಧ ಮಾಡುತ್ತಿದ್ದಾವೆ ಎಂಬ ಸಂದೇಶವನ್ನುರವಾನಿಸಿದ್ದಾರೆ ಎಂದ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ ಎಂದು ಹೇಳುತ್ತಿದ್ದವರು ಅನ್ನಭಾಗ್ಯ ಯೋಜನೆಯಲ್ಲೂ ಪ್ರತಿ ತಾಲೂಕಿನಲ್ಲಿ 3 ರಿಂದ 4 ಸಾವಿರ ಪಡಿತರ ಚೀಟಿಗಳನ್ನು ಕಡಿತ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 20 ಲಕ್ಷö ಪಡಿತರ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸï ಸರ್ಕಾರದ ನಿಜವಾದ ಬಣ್ಣ ದೂರವಾಗುವ ದಿನಗಳು ದೂರವಿಲ್ಲ. ನಮ ರಾಜ್ಯ ಸಂಪದ್ಭರಿತವಾಗಿದ್ದು, ಹಣಕ್ಕೆ ಕೊರತೆಯಿಲ್ಲ. ಆದರೆ ಆಡಳಿತದ ತಪ್ಪುಗಳಿಂದಾಗಿ ತೊಂದರೆಯಾಗಿದೆ. ರಾಜ್ಯದ ಜನತೆ ಎಂದೂ ಕೂಡ ಖಜಾನೆಯನ್ನು ಖಾಲಿ ಮಾಡಿದವರಲ್ಲ ಎಂದು ಅವರು ಹೇಳಿದರು.
ಮುಡಾ ಹಗರಣ, ವಾಲೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರವನ್ನು ಮರೆಮಾಚಲು ರೈತರ ಜಮೀನಿಗೆ ವಕ್ಫ್ ಆಸ್ತಿ ಎಂದು ನೋಟೀಸï ನೀಡಲಾಗಿದೆ ಎಂದು ಆರೋಪಿಸಿದರು.

ವಕ್ಫ್ ಆಸ್ತಿ ಎಂದು ನೋಟೀಸï ನೀಡುವುದನ್ನು ಆರಂಭಿಸಿದವರು ಯಾರು, ಎಲ್ಲಿಂದ ಪ್ರಾರಂಭವಾಯಿತು, ಈಗ ಯಾರು ಸ್ಪಷ್ಟನೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಅವರ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ವಿರೋಧಪಕ್ಷöಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿ-ಜೆಡಿಎಸï ಮೈತ್ರಿ ಶಾಶ್ವತ :
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಬಿಜೆಪಿ ನಾಯಕರು, ಮುಖಂಡರು ಪ್ರೀತಿವಿಶ್ವಾಸದಿಂದ ಜವಾಬ್ದಾರಿಯುತವಾಗಿ ತೊಡಗಿದ್ದಾರೆ. ಅರ್ಯಾರೂ ಕೂಡ ಬಲವಂತದಿAದ ಬಂದವರಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ-ಜೆಡಿಎಸï ನಡುವಿನ ಮೈತ್ರಿ ತಾತ್ಕಾಲಿಕವಲ್ಲ. ಇದು ಶಾಶ್ವತವಾದುದು. ಎರಡೂ ಪಕ್ಷöಗಳ ನಡುವಿನ ಮೈತ್ರಿ ಮುಂದುವರೆಯಲಿದೆ. ಆ ಬಗ್ಗೆ ಆತಂಕ ಬೇಡ ಎಂದರು.
ಈ ಕ್ಷೆöÃತ್ರದ ಕಾಂಗ್ರೆಸï ಅಭ್ಯರ್ಥಿಗೆ ಬಿಜೆಪಿಯ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತಿದ್ದರೂ ಪಕ್ಷö ತೊರೆದು ಹೋಗಿದ್ದಾರೆ. ಹೀಗಾಗಿ ಬಿಜೆಪಿ-ಜೆಡಿಎಸï ಈ ಕ್ಷೆöÃತ್ರವನ್ನು ಎನ್ಡಿಎ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಉಪಚುನಾವಣೆಯಲ್ಲಿ ಶ್ರಮ ವಹಿಸಿ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News