Thursday, October 31, 2024
Homeರಾಜ್ಯಸಾಲು ಸಾಲು ರಜೆ ; ಊರು, ಪ್ರವಾಸಿತಾಣಗಳತ್ತ ಸಿಲಿಕಾನ್ ಸಿಟಿ ಜನರು

ಸಾಲು ಸಾಲು ರಜೆ ; ಊರು, ಪ್ರವಾಸಿತಾಣಗಳತ್ತ ಸಿಲಿಕಾನ್ ಸಿಟಿ ಜನರು

ಬೆಂಗಳೂರು,ಅ.31- ದೀಪಾವಳಿ, ಕನ್ನಡ ರಾಜ್ಯೋತ್ಸವ ಜೊತೆಗೆ ಸಾಲುಸಾಲು ರಜೆಯ ಹಿನ್ನೆಲೆಯಲ್ಲಿ ನಗರದ ಜನರು ತಮತಮ ಊರು ಹಾಗೂ ಪ್ರವಾಸಿತಾಣಗಳತ್ತ ಮುಖ ಮಾಡುತ್ತಿದ್ದು, ಎಲ್ಲೆಡೆ ಜನಸಂದಣಿ ಹಾಗೂ ಸಂಚಾರದಟ್ಟಣೆ ಉಂಟಾಗಿದೆ. ಕಳೆದ ರಾತ್ರಿಯಿಂದಲೇ ಜನರು ಪ್ರಯಾಣ ಬೆಳೆಸಿದ್ದು, ಒಮೆಲೇ ಕೆಎಸïಆರ್ಟಿಸಿ ಹಾಗೂ ಖಾಸಗಿ ಬಸï, ಸ್ವಂತ ವಾಹನಗಳಲ್ಲಿ ಹೊರಟಿದ್ದರಿಂದ ನಗರದ ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು.

ಇAದು ನರಕಚತುರ್ದಶಿ, ನಾಳೆ ಕನ್ನಡ ರಾಜ್ಯೋತ್ಸವ, ಶನಿವಾರ ಬಲಿಪಾಡ್ಯಮಿ, ಭಾನುವಾರ ವಾರಾಂತ್ಯ ರಜೆ ಹಿನ್ನೆಲೆಯಲ್ಲಿ ಸಾಲುಸಾಲು ರಜೆ ಬಂದಿದ್ದರಿAದ ಕೆಲವು ಜನರು ಪ್ರವಾಸಿತಾಣದತ್ತ ತೆರಳಿದರು. ಇನ್ನೂ ಕೆಲವರು ಊರುಗಳತ್ತ ಪ್ರಯಾಣ ಬೆಳೆಸಿದರು. ತುಮಕೂರು ರಸ್ತೆಯ ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸï, ಪೀಣ್ಯ, 8ನೇ ಮೈಲಿ, ನೆಲಮಂಗಲ ಟೋಲ್ಗೇಟ್ನಲ್ಲಿ ರಾತ್ರಿಯಿಡೀ ವಾಹನಸಂಚಾರ ಹೆಚ್ಚಾಗಿತ್ತು.
ಮೈಸೂರು ರಸ್ತೆ ಕೆ.ಆರ್.ಪುರ, ಬಳ್ಳಾರಿ ರಸ್ತೆಗಳಲ್ಲೂ ಸಹ ವಾಹನದಟ್ಟಣೆಯಿಂದ ಸವಾರರು ಹಾಗೂ ಪ್ರಯಾಣಿಕರು ಪರದಾಡಿದರು.

ನಿಲ್ದಾಣಗಳಲ್ಲಿ ಜನದಟ್ಟಣೆ :
ಹೆಚ್ಚಿನ ಜನರು ಬಸïಗಾಗಿ ಮೆಜೆಸ್ಟಿಕ್ ಕೆಎಸïಆರ್ಟಿಸಿ ಬಸï ನಿಲ್ದಾಣ, ಮೈಸೂರು ರಸ್ತೆ ಸೆಟಲೈಟ್ ಬಸï ನಿಲ್ದಾಣ, ಶಾಂತಿನಗರ, ಜಯನಗರ, ಚಂದ್ರ ಲೇ ಔಟ್ ಸೇರಿದಂತೆ ವಿವಿಧೆಡೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸïಆರ್ಟಿಸಿ ಬಸïಗಳು ಕಾರ್ಯಾಚರಣೆ ನಡೆಸಿದ್ದು, ಬಸïಗಳಿಗಾಗಿ ಜನರು ಬಂದಿದ್ದರಿAದ ಸುತ್ತಮುತ್ತ ಸಂಚಾರದಟ್ಟಣೆ ಉಂಟಾಗಿತ್ತು. ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣದಲ್ಲೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಕೆಎಸïಆರ್ಟಿಸಿ ವತಿಯಿಂದ 2 ಸಾವಿರ ವಿಶೇಷ ಬಸïಗಳು ಸಂಚರಿಸಿತ್ತು. ಇದರ ಜೊತೆಗೆ ಬಿಎಂಟಿಸಿ ಬಸïಗಳನ್ನು ಸಹ ಜಿಲ್ಲಾ ಕೇಂದ್ರಗಳಿಗೆ ಬಿಡಲಾಗಿದೆ.

ಒಟ್ಟೊಟ್ಟಿಗೆ ಸಾಲುಸಾಲು ರಜೆ ಸಿಕ್ಕಿದ್ದು, ಕುಟುಂಬ ಸಮೇತ ಪ್ರವಾಸಿತಾಣಗಳತ್ತ ತೆರಳಿದ್ದರಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹಣ್ಯ, ಮಂಗಳೂರು, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಕೊಡಗು, ಮೈಸೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡಿದ್ದರಿಂದ ಹೋಟೆಲ್ಗಳು, ರೂಂಗಳು ಭರ್ತಿಯಾಗಿದ್ದವು.
ರಜೆ ಹಿನ್ನೆಲೆಯಲ್ಲಿ ಸದಾ ಜನಜಂಗುಳಿಯಿAದ ತುಂಬಿ ತುಳುಕುತ್ತಿದ್ದ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

RELATED ARTICLES

Latest News