Thursday, October 31, 2024
Homeರಾಜ್ಯಬಿಜೆಪಿ ಯಾವ ಚುನಾವಣೆಯನ್ನೂ ನ್ಯಾಯಯುತವಾಗಿ ಗೆದ್ದಿಲ್ಲ : ಖರ್ಗೆ

ಬಿಜೆಪಿ ಯಾವ ಚುನಾವಣೆಯನ್ನೂ ನ್ಯಾಯಯುತವಾಗಿ ಗೆದ್ದಿಲ್ಲ : ಖರ್ಗೆ

ಬೆಂಗಳೂರು,ಅ.31- ಸಾವಿರಾರು ಮಂದಿಯ ಭದ್ರತೆ ಹೊಂದಿದ್ದರೂ ಜನರ ನಡುವೆ ಬರಲು ಹೆದರುವ ಪ್ರಧಾನಿಯಿಂದ ದೇಶದ ಏಕ್ಯತೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷö ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸï ನಾಯಕರು ಒಗ್ಗಟ್ಟಾಗಿದ್ದರೆ ನಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ದಿ.ಇಂದಿರಾಗಾAಧಿಯವರ ಪುಣ್ಯಸರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರ ಜನದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಯಾವ ಚುನಾವಣೆಯನ್ನೂ ನ್ಯಾಯಯುತವಾಗಿ ಗೆದ್ದಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷö ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷöರು ಮೊದಲು ಮಾತನಾಡಲಿ ಅನಂತರ ನಾನು ಮಾತನಾಡುತ್ತೇನೆ ಎಂದು ಹೇಳಿದರು. ನಾನು ಮಾತನಾಡಿದ ಮೇಲೆ ಬೇರೆ ಯಾರೂ ಮಾತನಾಡಬಾರದು, ಮಾತನಾಡುವುದಾದರೆ ಮೊದಲೇ ಮಾತನಾಡಿ ಎಂದು ಖರ್ಗೆ ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ತಮ ಮಾತು ಮುಗಿಸಲು ಅವಕಾಶ ಮಾಡಿಕೊಟ್ಟರು.

ನಂತರ ಭಾಷಣ ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಜನರಿಗೆ ದೀಪಾವಳಿ ಶುಭಾಶಯ ಹೇಳಿ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ ದಿನೋತ್ಸವದಲ್ಲಿ ಭಾಷಣ ಮಾಡುವುದನ್ನು ನೋಡಿz್ದÉ. ಅವರು ಭಾಷಣದಲ್ಲಿ ಸಂವಿಧಾನ ಉಳಿಸಿ ಎನ್ನುವ ಜನರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ನಗರ ನಕ್ಸಲೀಯರು ಎಂದೆಲ್ಲಾ ಟೀಕೆ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಇಂತಹ ಮಾತುಗಳ ಅಗತ್ಯವಿತ್ತೇ? ಮೋದಿ ತಮ ಸಾಧನೆಯನ್ನು ಹೇಳಿಕೊಳ್ಳಬಹುದಿತ್ತು. ಪಟೇಲರು ಮತ್ತು ಕಾಂಗ್ರೆಸï ದೇಶಕ್ಕೆ ನೀಡಿದ ಕೊಡುಗೆಯನ್ನು ಸರಿಸಬಹುದಿತ್ತು. ಅದನ್ನು ಬಿಟ್ಟು ಟೀಕೆ ಮಾಡಲು ಅಂತಹ ಕಾರ್ಯಕ್ರಮವನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದರು.

ದೇಶದ ಏಕ್ಯತೆ, ಸಮಗ್ರತೆಗಾಗಿ ಇಂದಿರಾಗಾAಧಿ, ರಾಜೀವ್ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ಗಾಂಧಿ ಏಕಾಂಗಿಯಾಗಿ ಮಕ್ಕಳ ನಡುವೆ ಹೋಗುತ್ತಾರೆ. ಸಲೂನ್, ಕಂಬಾರರು, ಕುಂಬಾರರು, ಗ್ಯಾರೇಜ್ ಸೇರಿದಂತೆ ಎಲ್ಲಿಗಾದರೂ ನಿರ್ಭೀತಿಯಿಂದ ಹೋಗುತ್ತಾರೆ. ಮೋದಿ ಸಾವಿರಾರು ಜನರ ಭದ್ರತೆ ಇಟ್ಟುಕೊಂಡಿದ್ದರು. ಜನರ ನಡುವೆ ಬರಲು ಹೆದರುತ್ತಾರೆ. ಮಕ್ಕಳನ್ನು ನಿಲ್ಲಿಸಿಕೊಂಡು ಟಿವಿಗೆ ಪೋಸು ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನಗಳು ಮುಂದಿದ್ದ ಕಾಂಗ್ರೆಸï ಏಕಾಏಕಿ 33ಕ್ಕೆ ಕುಸಿಯಿತು. ಇದು ನಮಗೆ ಆಶ್ಚರ್ಯವನ್ನುಂಟು ಮಾಡಿತು. ಮೋದಿ ಮತ್ತು ಬಿಜೆಪಿ ಯಾವ ಚುನಾವಣೆಯನ್ನೂ ನ್ಯಾಯಯುತವಾಗಿ ಗೆದ್ದಿಲ್ಲ. ಮತಪಟ್ಟಿಯಲ್ಲಿ ಒಂದಷ್ಟು ಹೆಸರುಗಳನ್ನು ಕಿತ್ತುಹಾಕುತ್ತಾರೆ. ಇಲ್ಲವೇ ಕ್ಷೆöÃತ್ರವೊಂದಕ್ಕೆ 20-30 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಸುತ್ತಾರೆ. ಇದು ಸತ್ಯ. ಆದರೂ ಸಾಬೀತು ಮಾಡಿ ಎಂದು ಸವಾಲು ಹಾಕುತ್ತಾರೆ ಎಂದರು.

ಮತಯAತ್ರಗಳಲ್ಲಿ ಹ್ಯಾಕಿಂಗ್ ಸೇರಿದಂತೆ ಏನು ಬೇಕಾದರೂ ಮಾಡಲು ಅವಕಾಶವಿದೆ ಎಂದು ಅಮೆರಿಕದ ಎಲಾನ್ಮಸ್ಕï ಹೇಳಿದ್ದಾರೆ. ಜಗತ್ತಿನಲ್ಲಿ ಐದಾರು ಸಣ್ಣಪುಟ್ಟ ದೇಶಗಳನ್ನು ಹೊರತುಪಡಿಸಿದರೆ, ಅಮೆರಿಕ, ಇಂಗ್ಲೆAಡ್, ಕೆನಡಾ, ಜರ್ಮನಿ, ಜಪಾನ್, ಫ್ರಾನ್ಸ್, ಇಟಲಿ ಸೇರಿದಂತೆ ಮುಂದುವರೆದ ಯಾವ ರಾಷ್ಟ್ರಗಳಲ್ಲೂ ಮತಯಂತ್ರಗಳನ್ನು ಬಳಸುತ್ತಿಲ್ಲ. ಮತಪತ್ರಗಳನ್ನೇ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸï ಗೆದ್ದಾಗ ಮತಯಂತ್ರಗಳ ಮೇಲೆ ದೋಷವಿರುವುದಿಲ್ಲ, ಬಿಜೆಪಿ ಗೆದ್ದಾಗ ಕಾಂಗ್ರೆಸïನವರು ಅನುಮಾನ ಪಡುತ್ತಾರೆ ಎಂದು ಟೀಕೆ ಮಾಡಲಾಗುತ್ತಿದೆ. ಅವರು ಯಾವ ರೀತಿಯ ಪ್ರೋಗ್ರಾಂಗಳನ್ನು ಬಳಸುತ್ತಾರೆ ಎಂದು ನಮಗೆ ಗೊತ್ತಿದೆ. ದೇಶಕ್ಕೆ ಮತಯಂತ್ರಗಳು ಬೇಡ. ಮತಪತ್ರಗಳು ಬೇಕು ಎಂದು ಪ್ರತಿಪಾದಿಸಿದರು.

ರಾಜ್ಯ ಕಾಂಗ್ರೆಸïನಲ್ಲಿ ವಿದ್ಯಾವಂತ, ಬುದ್ಧಿವಂತ, ಸೈದ್ಧಾಂತಿಕ ಗಟ್ಟಿತನ ಇರುವ ನಾಯಕರಿದ್ದಾರೆ. ನಾವು ಎಲ್ಲರೂ ಒಟ್ಟಾಗಿದ್ದರೆ ಯಾರೂ ನಮನ್ನು ಮುಟ್ಟಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯನವರ ವಿರುದ್ಧ ಆರೋಪ ಬಂದಾಗ ಬೇರೆಯವರು ಖುಷಿಪಡುವುದು, ಡಿ.ಕೆ.ಶಿವಕುಮಾರ್ರವರನ್ನು ಜೈಲಿಗೆ ಕಳುಹಿಸಿದಾಗ ಮತ್ತೊಬ್ಬರು ಸಂಭ್ರಮಿಸುವುದನ್ನು ಬಿಡಬೇಕು. ಯಾರಿಗೇ ನೋವಾದರೂ ಅದು ಎಲ್ಲರಿಗೂ ಆದ ನೋವು ಎಂದು ಭಾವಿಸಬೇಕು ಎಂದು ಸೂಚನೆ ನೀಡಿದರು.

ಕೆಲವರು ನಮಲ್ಲೇ ಒಡಕು ಮೂಡಿಸಲು ಪ್ರಯತ್ನಿಸುತ್ತಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಅವರ ನಡುವೆ ಹೋಗಿ ಬೇರೆ ರೀತಿಯ ಮಾತುಗಳಾಡಿ, ಹುರಿದುಂಬಿಸಿ ಅಪಸ್ವರದ ಮಾತುಗಳನ್ನಾಡಿಸಲು ಯತ್ನಿಸುತ್ತಾರೆ. ಇದಕ್ಕೆ ಕಿವಿಗೊಡಬೇಡಿ. ನಾನು ರಾಜ್ಯರಾಜಕಾರಣದಲ್ಲಿ ಹಸ್ತಕ್ಷೆöÃಪ ಮಾಡುವುದಿಲ್ಲ. ಸಣ್ಣ ಹೇಳಿಕೆ ನೀಡಿದರೂ ಅದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂದರು.

ಒಳಮೀಸಲಾತಿ ವಿಚಾರದಲ್ಲಿ ನೀವು ಮನಸು ಮಾಡಿದರೆ ಸಾಧ್ಯವೆಂದು ಹೇಳುತ್ತಾರೆ. ಇನ್ನೂ ಕೆಲವರು ಕೆಟ್ಟದಾಗಿ ಪತ್ರ ಬರೆಯುತ್ತಾರೆ. ಇಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿದ್ದಾಗ ನಾನು ಏಕೆ ಹಸ್ತಕ್ಷೆöÃಪ ಮಾಡಲಿ, ಇಂತಹ ವಿಚಾರವನ್ನು ನೀವೇ ಬಗೆಹರಿಸಿ ಎಂದು ಸೂಚಿಸಿದರು.

ಕರ್ನಾಟಕದಲ್ಲಿನ ಪಂಚಖಾತ್ರಿ ಯೋಜನೆಗಳನ್ನು ನೋಡಿ ನಾವು ರಾಷ್ಟ್ರಮಟ್ಟದಲ್ಲಿ ಅದರಲ್ಲೂ ಇತ್ತೀಚೆಗೆ ನಡೆಯುತ್ತಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಿಸುತ್ತಿz್ದÉÃವೆ. ನಿನ್ನೆ ಇಲ್ಲಿ ಒಬ್ಬರು ಒಂದು ಗ್ಯಾರಂಟಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿರುವುದನ್ನು ಹೇಳಿಕೆ ನೀಡಿರುವುದನ್ನು ಪತ್ರಿಕೆಯಲ್ಲಿ ನೋಡಿದೆ ಎನ್ನುತ್ತಿದ್ದಂತೆ ಮುಖ್ಯಮಂತ್ರಿಯಾದಿಯಾಗಿ ವೇದಿಕೆಯಲ್ಲಿದ್ದ ಸಚಿವರು ಯಾವುದನ್ನೂ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾತನಾಡುವಾಗ ಎಚ್ಚರ ವಹಿಸಲಿ ಎಂದು ಖರ್ಗೆಯವರು ಗಂಭೀರ ಸೂಚನೆ ನೀಡಿದರು.

RELATED ARTICLES

Latest News