Friday, November 1, 2024
Homeರಾಷ್ಟ್ರೀಯ | Nationalವಾಣಿಜ್ಯ ಗ್ಯಾಸ್‌‍ ಸಿಲಿಂಡರ್‌ ದರ ಹೆಚ್ಚಳ

ವಾಣಿಜ್ಯ ಗ್ಯಾಸ್‌‍ ಸಿಲಿಂಡರ್‌ ದರ ಹೆಚ್ಚಳ

ನವದೆಹಲಿ,ನ.1- ದೀಪಾವಳಿ ಹಬ್ಬದ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ ದರ ಹೆಚ್ಚಾಗಿದೆ. ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರವನ್ನು 62 ರೂಪಾಯಿ ಏರಿಕೆ ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ಸಿಲಿಂಡರ್‌ ದರ 1,802 ರೂಪಾಯಿ ಎಂದು ವರದಿಯಾಗಿದೆ. 5 ಕೆ.ಜಿ. ಫ್ರೀ ಟ್ರೇಡ್‌ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಏರಿಕೆ ಕಂಡಿದ್ದು, 15 ರೂಪಾಯಿ ಹೆಚ್ಚಿಸಲಾಗಿದೆ.

14.2 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಯತಾಸ್ಥಿತಿಯಲ್ಲಿದೆ. ಸದ್ಯ ವಾಣಿಜ್ಯ ಬಳಕೆಯ ಸಿಲಿಂಡರ್‌ ದರಗಳನ್ನು ಮಾತ್ರವೇ ಹೆಚ್ಚಿಸಲಾಗಿದ್ದು, ಗಹ ಬಳಕೆ ಸಿಲಿಂಡರ್‌ಗಳ ದರ ಏರಿಕೆಯಾಗಿಲ್ಲ. ಇದರಿಂದ ದೇಶದ ಜನ ನಿಟ್ಟುಸಿರು ಬಿಡುವಂತಾಗಿದೆ.
ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪರಿಷ್ಕೃತ ದರವು ಇಂದಿನಿಂದಲೇ ದೇಶದಲ್ಲಿ ಜಾರಿಯಾಗಲಿದೆ. ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ ನಗರಗಳಲ್ಲಿ ಇಂದಿನಿಂದಲೇ ಈ ಪರಿಷ್ಕೃತ ದರ ಇರಲಿದೆ. ಕಳೆದ ಮೂರು ತಿಂಗಳಿನಿಂದಲೂ ವಾಣಿಜ್ಯ ಬಳಕೆ ಸಿಲಿಂಡರ್‌ ದರವು ಏರಿಕೆ ಕಾಣುತ್ತಲೇ ಇದೆ.

ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ಮೊದಲ ದಿನದಂದೇ ದರ ಏರಿದ್ದವು. ಇದೀಗ ನವೆಂಬರ್‌ ತಿಂಗಳ ಮೊದಲ ದಿನವೂ ದರ ಏರಿಕೆ ಕಂಡಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಳ, ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುತ್ತವೆ. ಅದರಂತೆ ಈ ತಿಂಗಳು ಕೂಡ ಸಿಲಿಂಡರ್‌ ದರ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿದ ಕೇಂದ್ರ ಸರ್ಕಾರ ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರ 1,879 ರೂಪಾಯಿ ಇದೆ. 47 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್‌ ದರ 4,695 ರೂಪಾಯಿ ಎನ್ನಲಾಗಿದೆ.

ಗಹ ಬಳಕೆಯ ಸಿಲಿಂಡರ್‌ ದರದಲ್ಲಿ ಇಲ್ಲಿಯೂ ಯಾವುದೇ ಬದಲಾವಣೆ ಇಲ್ಲ. ರಾಜ್ಯದಲ್ಲಿ ಗಹಬಳಕೆಯ 14.2 ಕೆ.ಜಿ ತೂಕದ ಸಿಲಿಂಡರ್‌ ದರ 805 ರೂಪಾಯಿ ಇದ್ದರೆ, 5 ಕೆ.ಜಿ ತೂಕದ ಸಿಲಿಂಡರ್‌ ದರ 300 ರೂಪಾಯಿಯಷ್ಟಿದೆ.

RELATED ARTICLES

Latest News