ಏಲೂರು,ನ.3- ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸನಾತನ ಧರ್ಮವನ್ನು ರಕ್ಷಿಸುವ ಉದ್ದೇಶದಿಂದ ತಮ ಪಕ್ಷದೊಳಗಿನ ಸಮರ್ಪಿತ ವಿಭಾಗವಾದ ನರಸಿಂಹ ವಾರಾಹಿ ಬ್ರಿಗೇಡ್ ಅನ್ನು ಸ್ಥಾಪಿಸಿದ್ದಾರೆ.
ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಆದರೆ ನನ್ನ ನಂಬಿಕೆಯಲ್ಲಿ ನಾನು ದಢವಾಗಿರುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಹೀಗಾಗಿ, ನಾನು ನಮ ಪಕ್ಷದೊಳಗೆ ನರಸಿಂಹ ವಾರಾಹಿ ಎಂಬ ಹೆಸರಿನ ಸಮರ್ಪಿತ ವಿಭಾಗವನ್ನು ಸ್ಥಾಪಿಸುತ್ತಿದ್ದೇನೆ. ಸನಾತನ ಧರ್ಮದ ರಕ್ಷಣೆಗಾಗಿ ಬ್ರಿಗೇಡ್ ಎಂದು ಪವನ್ ಕಲ್ಯಾಣ್ ತಮ ಭಾಷಣದಲ್ಲಿ ತಿಳಿಸಿದ್ದಾರೆ.
ಜಗನ್ನಾಥಪುರ ಗ್ರಾಮದಲ್ಲಿ ಪವನ್ ಕಲ್ಯಾಣ್ ಅವರು ದೀಪಂ-2 ಉಚಿತ ಅಡುಗೆ ಅನಿಲ ಸಿಲಿಂಡರ್ ಯೋಜನೆಯನ್ನು ಉದ್ಘಾಟಿಸುತ್ತಿದ್ದಂತೆ ಈ ಘೋಷಣೆ ಹೊರಬಿದ್ದಿದೆ. ಹಿಂದಿನ ಸರಕಾರಕ್ಕೆ ಹೋಲಿಸಿದರೆ ಉತ್ಕೃಷ್ಟ ಕಲ್ಯಾಣ ಕಲ್ಪಿಸುವ ಭರವಸೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ, ದೀಪಂ-2 ಯೋಜನೆ ಮೂಲಕ ರಾಜ್ಯದ 1,08,39,286 ಅರ್ಹ ಫಲಾನುಭವಿಗಳಿಗೆ ಪ್ರತಿ ವರ್ಷ 2,684 ಕೋಟಿಯಂತೆ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದೇವೆ. ಐದು ವರ್ಷಗಳಲ್ಲಿ, ಇದು 13,425 ಕೋಟಿಗಳನ್ನು ಕಲ್ಯಾಣಕ್ಕೆ ಮೀಸಲಿಟ್ಟಿದೆ ಎಂದು ಜೆಎಸ್‌ಪಿ ಮುಖ್ಯಸ್ಥರು ಹೇಳಿದರು.
ನಮ ಸಮಿಶ್ರ ಸರ್ಕಾರವು ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಮಹಿಳೆಯರ ಮೇಲೆ ಹಲ್ಲೆ ಅಥವಾ ಕಿರುಕುಳದ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕೇವಲ 11 ಸ್ಥಾನ ಪಡೆದರೂ ವೈಎಸ್‌ಆರ್‌ಸಿಪಿ ಸದಸ್ಯರು ಮತ್ತು ಬೆಂಬಲಿಗರು ಸುಧಾರಿಸಿಲ್ಲ, ನಮ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳು ಕಳೆದಿವೆ, ಆದರೂ ಅವರು ಈಗಾಗಲೇ ಏನೋ ಅನಾಹುತ ಸಂಭವಿಸಿದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ವೈಎಸ್‌ಆರ್‌ಸಿಪಿ ನಾಯಕರನ್ನು ಟೀಕಿಸಿದರು. ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಮಾತನಾಡುವವರನ್ನು ಸಹಿಸುವುದಿಲ್ಲ ಎಂದು ಟಾಂಗ್ ನೀಡಿದರು.