Friday, November 15, 2024
Homeರಾಜ್ಯಸಿಎಂಗೆ ರೈತರ ಬಗ್ಗೆ ಕಳಕಳಿ ಇದ್ದರೆ ವಕ್ಫ್ ಗೆಜೆಟ್‌ ನೊಟಿಫಿಕೇಶನ್‌ ರದ್ದುಪಡಿಸಲಿ: ಬೊಮ್ಮಾಯಿ

ಸಿಎಂಗೆ ರೈತರ ಬಗ್ಗೆ ಕಳಕಳಿ ಇದ್ದರೆ ವಕ್ಫ್ ಗೆಜೆಟ್‌ ನೊಟಿಫಿಕೇಶನ್‌ ರದ್ದುಪಡಿಸಲಿ: ಬೊಮ್ಮಾಯಿ

ಹುಬ್ಬಳ್ಳಿ,ನ.3-ಅನ್ವರ್‌ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್ಆಸ್ತಿ ಕಬಳಿಸಿರುವ ಕಾಂಗ್ರೆಸ್‌‍ ನಾಯಕರಿಂದ ವಕ್ಫ್ ಆಸ್ತಿ ವಶಪಡಿಸಿಕೊಳ್ಳುವಂತೆ ವಕ್ಫ್ ಬೋರ್ಡ್‌ ಗೆ ಹೇಳಿದ್ದೆ ವಿನಹ ರೈತರ ಆಸ್ತಿಯನ್ನಲ್ಲಾ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಸಚಿವ ಜಮೀರ್‌ ಅಹಮದ್‌ ಅವರು ನನ್ನ ಹಳೆಯ ವಿಡಿಯೊ ಬಿಡುಗಡೆ ಮಾಡಿ, ನಾನು ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್ ಗೆ ಹೇಳಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ವಕ್ಫ್ ಸಮಾರಂಭದಲ್ಲಿ ಮಾತನಾಡಿದ್ದೆ. ವಕ್ಫ್ಬೋರ್ಡ್‌ ನ ಯಾವುದೇ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಯಾವ ಕಾಂಗ್ರೆಸ್‌‍ನ ದೊಡ್ಡ ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಫ್ ಆಸ್ತಿ ನುಂಗಿದ್ದಾರೆ ಎಂದು ಅನ್ವರ್‌ ಮಾನಿಪ್ಪಾಡಿ ವರದಿಯಲ್ಕಿ ಸ್ಪಷ್ಟವಾಗಿದೆ. ನಾವು ರೈತರಿಗೆ ಯಾವುದೇ ನೊಟಿಸ್‌‍ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ ಎಂದು ಹೇಳಿದರು.
ಸಚಿವ ಜನೀರ್‌ ಅವರು ರೈತರಿಗೆ ನೊಟಿಸ್‌‍ ಕೊಡುವ ಮೊದಲು ಕಾಂಗ್ರೆಸ್‌‍ ನಾಯಕರು ಎಲ್ಲಿ ವಕ್ಫ್ ಆಸ್ತಿ ಹಡಪ್‌ ಮಾಡಿದ್ದಾರೆ ಅದನ್ನು ರಿಕವರಿ ಮಾಡಲಿ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೊಟಿಸ್‌‍ ವಾಪಸ್‌‍ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೊಟಿಸ್‌‍ ವಾಪಸ್‌‍ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್‌‍ ಕೊಡುವುದಿಲ್ಲ ಅನ್ನುವುದು ಏನ್‌ ಗ್ಯಾರೆಂಟಿ. ಅದರ ಬದಲು ವಕ್‌್ಪ ನಲ್ಲಿ ಏನ್‌ ಗೆಜೆಟ್‌ ನೋಟಿಫಿಕೇಶ್‌ ಆಗಿದೆ ಅದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಬಗ್ಗೆ ನಿಜವಾಗಲೂ ಕಾಳಜಿ, ರೈತರ ಆಸ್ತಿ ಉಳಿಸಬೇಕೆಂದಿದ್ದರೆ ಅವರ ಮೇಲೆ ಗೌರವ ಇದ್ದರೆ, ಸಿಎಂ ಕೂಡಲೆ ವಕ್‌್ಪ ಗೆಜೆಟ್‌ ನೊಟಿಫಿಕೇಶ್‌ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್‌‍ ಕೊಡಬಾರದು ಎಂದು ಆಗ್ರಹಿಸಿದರು.
ನಮ ಅವಧಿಯಲ್ಲಿ ಯಾವುದೋ ಮುಸಲಾನರ ಹೆಸರಿನಲ್ಲಿದ್ದ ಆಸ್ತಿಯನ್ನು ಇನ್ಯಾರೊ ಕಬಳಿಸಿರುವುಕ್ಕೆ ನೊಟಿಸ್‌‍ ಕೊಟ್ಟಿರುತ್ತಾರೆ. ನಾವು ರೈತರಿಗೆ ಯಾವುದೇ ನೊಟಿಸ್‌‍ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News