Friday, November 15, 2024
Homeರಾಷ್ಟ್ರೀಯ | Nationalನಿಷೇಧಿತ ಸಂಘಟನೆಯ ಆರು ಉಗ್ರರ ಬಂಧನ

ನಿಷೇಧಿತ ಸಂಘಟನೆಯ ಆರು ಉಗ್ರರ ಬಂಧನ

ಇಂಫಾಲ, ನ.3 (ಪಿಟಿಐ) ಮಣಿಪುರದ ತೌಬಲ್‌ ಮತ್ತು ಬಿಷ್ಣುಪುರ್‌ ಜಿಲ್ಲೆಗಳಲ್ಲಿ ಎರಡು ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌‍ ಹೇಳಿಕೆ ತಿಳಿಸಿದೆ. ಕಂಗ್ಲೇಪಕ್‌ ಕಮ್ಯುನಿಸ್ಟ್‌ ಪಕ್ಷದ (ಪೀಪಲ್ಸ್‌‍ ವಾರ್‌ ಗ್ರೂಪ್‌) ಐವರು ಉಗ್ರಗಾಮಿಗಳನ್ನು ಅಪಹರಣ ಮತ್ತು ಸುಲಿಗೆಯಲ್ಲಿ ತೊಡಗಿರುವ ಆರೋಪದ ಮೇಲೆ ತೌಬಲ್‌ನ ಚರಂಗಪತ್‌ ಮಯೈ ಲೈಕೈಯಿಂದ ಬಂಧಿಸಲಾಗಿದೆ.

ಅವರನ್ನು ತೊಕ್ಚೋಮ್‌ ಬಿಕ್ರಮ್‌ ಸಿಂಗ್‌ (29), ಸಿನಮ್‌ ಬಿಜೆನ್‌ ಸಿಂಗ್‌ (37), ತಂಗ್ಜಮ್‌ ದೀಪಕ್‌ ಸಿಂಗ್‌ (30), ಲಂಬಾಮಯೂಮ್‌ ನವೋಬಿ ಸಿಂಗ್‌ (26), ಮತ್ತು ಹುಯಿನಿಂಗ್ಸುಂಬಮ್‌ ಟೋನ್‌ ಸಿಂಗ್‌ (21) ಎಂದು ಗುರುತಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಬಂಧನದ ವೇಳೆ ಅವರ ವಶದಿಂದ ಕೈ ಗ್ರೆನೇಡ್‌‍, ಐದು ಬೇಡಿಕೆ ಪತ್ರಗಳು, ಐದು ಮೊಬೈಲ್‌ ಹ್ಯಾಂಡ್‌ಸೆಟ್‌ಗಳು, 13 ಸಿಮ್‌ ಕಾರ್ಡ್‌ಗಳು ಮತ್ತು ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಘಟನೆಯಲ್ಲಿ, ಪೊಲೀಸರು ಶನಿವಾರ ಬಿಷ್ಣುಪುರ ಜಿಲ್ಲೆಯ ಕುಂಬಿ ಪ್ರದೇಶದಿಂದ ಪ್ರೀಪಾಕ್‌ ಸಂಘಟನೆಗೆ ಸೇರಿದ ಒಬ್ಬ ಉಗ್ರಗಾಮಿಯನ್ನು ಬಂಧಿಸಿದ್ದಾರೆ. ನೊಂಗ್‌ಮೈಥೆಮ್‌ ಗುಣಮಣಿ ಅಲಿಯಾಸ್‌‍ ಅಲ್ಲು (32) ಎಂಬ ಉಗ್ರಗಾಮಿಯೂ ಸುಲಿಗೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News