ಮುಂಬೈ, ನ. 3- ಭಾರತ ನೆಲದಲ್ಲಿ ಟೀಮ್ ಇಂಡಿಯಾ ವಿರುದ್ಧ 3-0 ಸರಣಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಇತಿಹಾಸ ಸೃಷ್ಟಿಸಿದೆ. ಆ ಮೂಲಕ ತವರಿನ ಅಂಗಳದಲ್ಲಿ 18 ಸತತ ಸರಣಿ ಜಯಿಸಿದ್ದ ಭಾರತ ತೀವ್ರ ಮುಖಭಂಗ ಅನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಅಂತಿಮ ಹಾಗೂ ತೃತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್‌್ಸನಲ್ಲಿ ಗೆಲುವಿಗೆ 147 ರನ್ ಸುಲಭ ಗುರಿ ಪಡೆದಿದ್ದ ಟೀಮ್ ಇಂಡಿಯಾ ರಿಷಭ್‌ಪಂತ್ (64 ರನ್) ಅವರ ಏಕಾಂಗಿ ಹೋರಾಟದ ನಡುವೆಯೂ ರೋಹಿತ್ ಶರ್ಮಾ ಪಡೆ 121 ರನ್ ಗಳಿಸಲಷ್ಟೇ ಶಕ್ತವಾಗಿ 25 ರನ್‌ಗಳಿಂದ ಸೋಲು ಕಂಡಿದೆ.
2012ರಲ್ಲಿ ಇಂಗ್ಲೆಂಡ್ ವಿರುದ್ಧ 2-1ರಿಂದ ಸೋಲು ಕಂಡ ನಂತರ ಇದೇ ಮೊದಲ ಬಾರಿ ತವರಿನಲ್ಲಿ ಟೀಮ್ ಇಂಡಿಯಾ ಸರಣಿ ಸೋಲು ಕಂಡಿದೆ. ಅದು 2011ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಕ್ಷಿಯಾಗಿದ್ದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್‌ಶರ್ಮಾ ಪಡೆ ಸೋಲು ಕಂಡಿರುವುದು ವಿಪರ್ಯಾಸವೇ ಸರಿ.
ನ್ಯೂಜಿಲೆಂಡ್ ಪರ ದ್ವಿತೀಯ ಇನಿಂಗ್‌್ಸನಲ್ಲಿ ಅಜಾಜ್ ಪಟೇಲ್ 6 ವಿಕೆಟ್ ಪಡೆದರೆ, ಗ್ಲೆನ್ ಫಿಲಿಪ್‌್ಸ 3 ಹಾಗೂ ಮ್ಯಾಟ್ ಹೆನ್ರಿ ಒಂದು ವಿಕೆಟ್ ಪಡೆದು ಭಾರತದ ಸೋಲಿಗೆ ಕಾರಣರಾದರು. ಸರಣಿಯಲ್ಲಿ 244 ರನ್ ಗಳಿಸಿದ ವಿಲ್‌ಯಂಗ್ ಸರಣಿಶ್ರೇಷ್ಠ ಹಾಗೂ ಅಂತಿಮ ಟೆಸ್ಟ್‌ನಲ್ಲಿ 11 ವಿಕೆಟ್ ಪಡೆದ ಅಜಾಜ್‌ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.