Thursday, November 14, 2024
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಚೆಲುವ ನಾರಾಯಣಸ್ವಾಮಿಗೆ ವಜ್ರಖಚಿತ ರಾಜಮುಡಿ ಕಿರೀಟ ಧಾರಣೆ

ಚೆಲುವ ನಾರಾಯಣಸ್ವಾಮಿಗೆ ವಜ್ರಖಚಿತ ರಾಜಮುಡಿ ಕಿರೀಟ ಧಾರಣೆ

Melkote Cheluva Narayana Swamy diamond-studded Rajamudi

ಮೇಲುಕೋಟೆ,ನ.10– ಚೆಲುವ ನಾರಾಯಣಸ್ವಾಮಿಗೆ ರಾತ್ರಿ ವಜ್ರಖಚಿತ ರಾಜಮುಡಿ ಕಿರೀಟಧಾರಣೆ ಮಹೋತ್ಸವ ವೈಭವದಿಂದ ನೆರವೇರಿತು. ಜಿಲ್ಲಾ ಖಜಾನೆಯಿಂದ ಪೊಲೀಸ್‌‍ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದ ರಾಜಮುಡಿ ತಿರುವಾಭರಣಪೆಟ್ಟಿಗೆ ಪಾರ್ಕಾವಣೆ ಮಾಡಿ 7-15ಕ್ಕೆ ಸ್ವಾಮಿಗೆ ಧರಿಸಿ ವೈಭವದಿಂದ ಉತ್ಸವ ನೆರವೇರಿಸಲಾಯಿತು ಚತುರ್ವೀದಿಗಳಲ್ಲಿ ನಡೆದ ಉತ್ಸವ 9ಗಂಟೆಗೆ ಮುಕ್ತಾಯವಾಯಿತು.

ಕಾರ್ತಿಕ ಮಾಸದ ಜಾತ್ರಾ ಮಹೋತ್ಸವಕ್ಕಾಗಿ ಮೈಸೂರು ಮಹಾರಾಜ ರಾಜಒಡೆಯರ್‌ ಭಕ್ತಿಪೂರ್ವಕವಾಗಿ ಸಮರ್ಪಿಸಿದಸಿಂಹಲಾಂಚನವಿರುವ ಅಪರೂಪದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ರಾಜಲಾಂಛನ ಗಂಡುಬೇರುಂಡ ಪದಕ, ಹನ್ನೆರಡು ಆಳ್ವಾರುಗಳನ್ನು ಒಳಗೊಂಡ ಪದಪೀಠ, ಶಂಕ, ಚಕ್ರ, ಗದೆ, ಶಿರಚ್ಚಕ್ರ, ಅಭಯಹಸ್ತ, ಪಾದಜೋಡಿ ಕರ್ಣಕುಂಡಲ ಸೇರಿದಂತೆ 16 ಬಗೆಯ ವಜ್ರ, ಪಚ್ಚೆ, ರತ್ನ ಮುತ್ತುಗಳಿಂದ ಕೂಡಿದ ಐತಿಹಾಸಿಕಆಭರಣಗಳನ್ನುತೊಡಿಸಿ ದಿವ್ಯಪ್ರಬಂಧ ಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿಸಲಾಯಿತು.

ದೇವಾಲಯದ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಶ್ರೀನಿವಾಸ್‌‍ ರಾಜಮುಡಿ ಮತ್ತು ತಿರುವಾಭರಣಗಳನ್ನು ಪರಿಶೀಲಿಸಿ ಸ್ಥಾನೀಕರು ಅರ್ಚಕ ಪರಿಚಾರಕರ ವಶಕ್ಕೆ ನೀಡಿದರು. ಪಾಂಡವಪುರ ತಹಶೀಲ್ದಾರ್‌ ಸಂತೋಷ್‌ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲ. ಸ್ಥಾನೀಕರಾದ ಶ್ರೀನಿವಾಸನರಸಿಂಹನ್‌ ಗುರೂಜಿ, ಕರಗಂ ರಾಮಪ್ರಿಯ ತಿರುನಾರಾಯಣ ಅಯ್ಯಂಗಾರ್‌ ಸಂಪತ್ಕುಮಾರನ್‌, ಮುಕುಂದನ್‌ ಶ್ರೀರಾಮನ್‌ ಅರ್ಚಕ ವರದರಾಜಭಟ್ಟರ್‌ ಪರಿಚಾರಕ ಎಂ.ಎನ್‌ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.

ತಮಿಳುನಾಡು ಸರ್ಕಾರದ ಪರವಾಗಿ ಹಾಜರಾಗಿದ್ದ ಕಾಂಚೀಪುರಂ ವಿಭಾಗದ ಧಾರ್ಮಿಕದತ್ತಿ ಇಲಾಖೆಯ ಜಂಟಿ ಆಯುಕ್ತ ಕುಮಾರ ದೊರೈ ಶ್ರೀ ಪೆರೆಂಬೂದೂರು ರಾಮಾನುಜರ ದೇಗುಲದ ರಾಜು ಇಲಂ ಪೆರುವಲತಿ ಮತ್ತು ಚಕ್ರಪಾಣಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಗೌರವ ಸಮರ್ಪಣೆ ಮಾಡಿದರು.

RELATED ARTICLES

Latest News