Thursday, November 21, 2024
Homeಜಿಲ್ಲಾ ಸುದ್ದಿಗಳು | District Newsಅಡಿಕೆಗೆ ರೋಗಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳತ್ತ ರೈತರ ಒಲವು

ಅಡಿಕೆಗೆ ರೋಗಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳತ್ತ ರೈತರ ಒಲವು

Dakshina Kannada

ದಕ್ಷಿಣಕನ್ನಡ,ನ.10- ಕರಾವಳಿ, ಮಲೆನಾಡು ಭಾಗದ ಕೃಷಿಕರ ಪಾಲಿಗೆ ವರವಾಗಿದ್ದ ಅಡಿಕೆ ಬೆಳೆಗೆ ರೋಗಬಾಧೆ ಹೆಚ್ಚಾಗಿದ್ದು, ವಾಣಿಜ್ಯ ಬೆಳೆ ಅಡಿಕೆಯನ್ನೇ ನಂಬಿಕೊಂಡಿದ್ದ ರೈತರು ಈಗ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ.

ರಾಮಪತ್ರೆ ಗಿಡಗಳನ್ನು ಬೆಳೆಯಲು ಕರಾವಳಿ ರೈತರು ಹೆಚ್ಚಿನ ಆಸಕ್ತಿ ತೋರಿದ್ದು, ಉತ್ತಮ ಗುಣಮಟ್ಟದ ರಾಮಪತ್ರೆ ಸಸಿಗಳನ್ನು ವಿತರಿಸುವ ಕಾರ್ಯ ಸರ್ಕಾರದಿಂದ ನಡೆಯಬೇಕೆಂಬುದು ಕರಾವಳಿ ಭಾಗದ ಕೃಷಿಕರ ಮನವಿಯಾಗಿದೆ.ಅರಣ್ಯ ಇಲಾಖೆಯೂ ಕೃಷಿಕರಿಗೆ ರಾಮಪತ್ರೆ ಗಿಡಗಳನ್ನು ನೀಡುತ್ತಿದ್ದು, ಈ ಗಿಡಗಳನ್ನು ನೆಟ್ಟ 5 ವರ್ಷಕ್ಕೆ ಫಸಲು ಬರಲು ಆರಂಭಿಸುತ್ತದೆ.

ಸ್ಥಳೀಯ ಭಾಷೆಯಲ್ಲಿ ಇದನ್ನು ಕಾಣಾಜೆ ಎಂದು ಕರೆಯಲಾಗುತ್ತದೆ. ಈ ರಾಮಪತ್ರೆಯನ್ನು ಈಗಾಗಲೇ ಸುಳ್ಯ ತಾಲೂಕಿನ ಹಲವು ರೈತರು ತಮ ತೋಟದಲ್ಲಿ ಬೆಳೆಯುತ್ತಿದ್ದಾರೆ.ಕೃಷಿಕರು ರಾಮಪತ್ರೆಯ ಕಾಯಿ ಕೊಯ್ದು, ಅದರ ಒಳಗಿರುವ ತಿರುಳನ್ನು ತೆಗೆದು ಮಾರಾಟ ಮಾಡುತ್ತಾರೆ. ಈ ತಿರುಳಿಗೆ ಸದ್ಯ ಮಾರುಕಟ್ಟೆ ಬೆಲೆ ಕೆಜಿಗೆ 800 ರೂ. ಇದೆ.

ರಾಮಪತ್ರೆ ಕಾಯಿಯ ತಿರುಳನ್ನು ಪೇಂಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ ತಿರುಳು ತೆಗೆದ ಬಳಿಕ ಸಿಗುವ ಕಾಯಿಗೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಈ ಕಾಯಿಗಳನ್ನು ಡಾಂಬರು ತಯಾರಿಕೆ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ. ಹೀಗಾಗಿ ತಿರುಳು ತೆಗೆದ ಬಳಿಕ ಉಳಿಯುವ ರಾಮಪತ್ರೆ ಕಾಯಿಗೆ ಪ್ರತಿ ಕಿಲೋಗೆ 25 ರೂ. ಬೆಲೆಯಿದೆ.

ರಾಮಪತ್ರೆ ಗಿಡಗಳನ್ನು ಎಲ್ಲಿ ಬೇಕಾದರೂ ಬೆಳೆಸಬಹುದು. ಅಲ್ಲದೇ ಈ ಗಿಡಗಳಿಗೆ ಅಡಿಕೆ ಸಸಿಗಳಂತೆ ಆರೈಕೆ ಮಾಡುವ ಅಗತ್ಯವಿಲ್ಲ. ಹೀಗಾಗಿ ಅಡಿಕೆ ರೋಗಗಳಿಂದ ಕಂಗೆಟ್ಟಿರುವ ಕೃಷಿಕರು ಉಪಬೆಳೆಯಾಗಿ ರಾಮಪತ್ರೆ ಬೆಳೆಯಲು ಮುಂದಾಗುತ್ತಿದ್ದಾರೆ.

RELATED ARTICLES

Latest News