Saturday, November 23, 2024
Homeರಾಷ್ಟ್ರೀಯ | Nationalಗಡಿಗಳನ್ನು ಭದ್ರಪಡಿಸುವಂತೆ ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಅಷ್ಟೇ ಮುಖ್ಯ : ರಾಜನಾಥ್‌ ಸಿಂಗ್‌

ಗಡಿಗಳನ್ನು ಭದ್ರಪಡಿಸುವಂತೆ ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಅಷ್ಟೇ ಮುಖ್ಯ : ರಾಜನಾಥ್‌ ಸಿಂಗ್‌

Keeping country's Culture safe as vital as securing borders: Rajnath Singh

ಹೈದರಾಬಾದ್‌, ನ.19 – ಗಡಿಗಳನ್ನು ಸುರಕ್ಷಿತವಾಗಿರಿಸುವುದರಷ್ಟೇ ದೇಶದ ಸಂಸ್ಕೃತಿಯನ್ನು ಭದ್ರಪಡಿಸುವುದು ಮುಖ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.ಇಲ್ಲಿಗೆ ಆಗಮಿಸಿದ್ದ ಅವರು ರಾತ್ರಿ ಆಯೋಜಿಸಿದ್ದ ಕೋಟಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು. ನಮ ಏಕತೆ ದುರ್ಬಲಗೊಂಡಾಗ, ಆಕ್ರಮಣಕಾರರು ನಮ ನಾಗರಿಕತೆ ಮತ್ತು ನಮ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನವನ್ನು ಮಾಡಿದ್ದಾರೆ, ಇತಿಹಾಸದಿಂದ ಕಲಿಯುವ ಮೂಲಕ ಏಕತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ವಿಭಜಿಸುವವರು, ಅವರು ವಿವಿಧ ಧರ್ಮಗಳು, ಜಾತಿಗಳು ಮತ್ತು ಪಂಗಡಗಳು ಸೇರಿದಂತೆ ಹಲವು ರೀತಿಯಲ್ಲಿ ಒಡೆಯಲು ಪ್ರಯತ್ನಿಸುತ್ತಾರೆ ಆದರೆ, ನೀವು ವಿಭಜನೆಯಾಗಬಾರದು, ಇಡೀ ದೇಶ ಒಟ್ಟಿಗೆ ಇರಬೇಕು, ನಾವು ಒಗ್ಗಟ್ಟಿನಿಂದ ಇರಬೇಕು, ನಾವು ವಿಭಜನೆಯನ್ನು ತಪ್ಪಿಸಿದರೆ, ನಾವು ಅಭಿವೃದ್ಧಿಯತ್ತ ಸಾಗುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸುತ್ತೇವೆ ಎಮದು ಸಿಂಗ್‌ ಹೇಳಿದರು.

ಇದೇ ಏಕತೆಯನ್ನು ಖಾತ್ರಿಪಡಿಸುವ ಮೂಲಕ, ಭಾರತವು ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ಮೂಲಕ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆಳಕು ಹರಡಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಒತ್ತು ನೀಡಿದೆ. ದೇಶಕ್ಕೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಸಾಂಸ್ಕೃತಿಕ ಬೆಳವಣಿಗೆಯೂ ಮುಖ್ಯವಾಗಿದೆ ಎಂದರು.

ದೇಶದ ಗಡಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಆದರೆ, ನನ್ನ ದೃಷ್ಟಿಯಲ್ಲಿ, ದೇಶದ ಸಂಸ್ಕೃತಿಯನ್ನು ಸುರಕ್ಷಿತವಾಗಿರಿಸುವುದು ಗಡಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು. ಒಂದು ರಾಷ್ಟ್ರವು ತನ್ನ ಸಂಸ್ಕೃತಿಯನ್ನು ಕಳೆದುಕೊಂಡರೆ, ಆ ದೇಶವು ನರಳುತ್ತದೆ ಎಂದು ಎಚ್ಚರಿಸಿದರು.

ಭಾರತವು ಕೇವಲ ಒಂದು ರಾಜಕೀಯ ಅಸ್ತಿತ್ವವಲ್ಲ ಆದರೆ ಅದು ಸಾವಿರಾರು ವರ್ಷಗಳ ಸಾಂಸ್ಕೃತಿಕ ಗುರುತನ್ನು ಹೊಂದಿದೆ, ಇದರಿಂದಾಗಿ ನಾವು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದ್ದೇವೆ ಮತ್ತು ಅಂಗೀಕರಿಸಲ್ಪಟ್ಟಿದ್ದೇವೆ.ದೇಶದ ಜನರಲ್ಲಿ ಅವರ ಸಂಸ್ಕೃತಿಯ ಬಗ್ಗೆ ದ್ವೇಷ ತುಂಬಿದರೆ, ಆ ದೇಶವು ಒಂದು ಸಮಯದಲ್ಲಿ ವಿಭಜನೆಯಾಗುತ್ತದೆ ಎಂದು ಅವರು ಹೇಳಿದರು.

ನಮ ಸಂಸ್ಕೃತಿಯನ್ನು ಕೀಳು ಎಂದು ತೋರಿಸಲು ಪ್ರಯತ್ನಿಸಿದ್ದಾರೆ ಆದರೆ ದೇಶವಾಸಿಗಳ ಜಾಗೃತಿಯಿಂದಾಗಿ ಆ ಹಂತವು ಈಗ ಕೊನೆಗೊಂಡಿದೆ,ದೇಶದಲ್ಲಿ ಈಗ ಸಾಂಸ್ಕೃತಿಕ ಪುನರುಜ್ಜೀವನ ನಡೆಯುತ್ತಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

RELATED ARTICLES

Latest News