ನವದೆಹಲಿ, ನ. 11: ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಜೆ.ಬಿ.ಕಪಲಾನಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಗಾಂಧಿವಾದಿ ಆಚಾರ್ಯ ಕಪಲಾನಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯುನ್ನತ ವ್ಯಕ್ತಿ ಮತ್ತು ಬುದ್ಧಿವಂತಿಕೆ, ಸಮಗ್ರತೆ ಮತ್ತು ಧೈರ್ಯದ ಸಾಕಾರ ರೂಪವಾಗಿದ್ದರು ಎಂದು ಮೋದಿ ಎಕ್ಸ್ ನಲ್ಲಿ ಹೇಳಿದರು.
ಅವರು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಆಳವಾಗಿ ಬದ್ಧರಾಗಿದ್ದರು ಎಂದು ಮೋದಿ ಹೊಗಳಿದರು.ಆಚಾರ್ಯ ಕಪಲಾನಿ ಅನ್ಯಾಯದ ವಿರುದ್ಧ ಹೋರಾಡಲು ಹೆದರಲಿಲ್ಲ. ಸಮದ್ಧ, ಬಲವಾದ ಮತ್ತು ಬಡವರು ಮತ್ತು ಅಂಚಿನಲ್ಲಿರುವವರು ಸಶಕ್ತರಾಗಿರುವ ಭಾರತದ ಅವರ ಉದಾತ್ತ ದಷ್ಟಿಕೋನವನ್ನು ಈಡೇರಿಸುವ ನಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ.
ಸ್ವಾತಂತ್ರ್ಯದ ನಂತರ, ಅವರು ಕಾಂಗ್ರೆಸ್ ತೊರೆದು ವಿರೋಧ ಪಕ್ಷದ ಪ್ರಮುಖ ವ್ಯಕ್ತಿಯಾದರು ಎಂದಿದ್ದಾರೆ ಅದೇ ರೀತಿ ಅವರು ಭಾರತದ ಮೊದಲ ಶಿಕ್ಷಣ ಸಚಿವ ಆಜಾದ್ ಅವರಿಗೆ ಗೌರವ ನಮನ ಸಲ್ಲಿಸಿದರು