Friday, November 15, 2024
Homeರಾಷ್ಟ್ರೀಯ | Nationalಚಳಿಗಾಲ : ಬಾಲರಾಮನನ್ನು ಬೆಚ್ಚಗಿಡಲು ರಾಮಮಂದಿರದಲ್ಲಿ ಸಿದ್ಧತೆ

ಚಳಿಗಾಲ : ಬಾಲರಾಮನನ್ನು ಬೆಚ್ಚಗಿಡಲು ರಾಮಮಂದಿರದಲ್ಲಿ ಸಿದ್ಧತೆ

Designer Woollen Wear To Keep Ram Lalla In Ayodhya Warm This Winter

ಲಕ್ನೋ,ನ.11- ಚಳಿಗಾಲ ಸಮೀಪಿಸಿದ್ದು, ಅಯೋಧ್ಯೆ ರಾಮಮಂದಿರದ ಬಾಲರಾಮನನ್ನು ಬೆಚ್ಚಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ನವೆಂಬರ್‌ 20 ರಿಂದ ಬರುವ `ಅಘರ್‌ ಕಿ ಪಂಚಮಿ’ಯಿಂದ ರಾಮಲಲ್ಲಾನಿಗೆ ಚಾದರ, ಪಶಿನಾ ಶಾಲು ಹೊದಿಸಿ ಅಲಂಕಾರ ಮಾಡಲಾಗುವುದು.

ಹೀಟರ್‌ ಅಳವಡಿಕೆ ಮಾಡಿ ಮೂರ್ತಿಗೆ ಬಿಸಿ ನೀರಿನ ಅಭಿಷೇಕ ಮಾಡುವುದು. ಬಾಲರಾಮನಿಗೆ ಮೊಸರು ನೈವೇದ್ಯದ ಬದಲು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಣ ಹಣ್ಣುಗಳ ನೈವೇದ್ಯ ಇರುತ್ತದೆ.

ಚಳಿಗಾಲದ ಉಡುಗೆಯನ್ನು ದೆಹಲಿ ಮೂಲದ ವಿನ್ಯಾಸಕರು ಹೊಲಿಯುತ್ತಿದ್ದಾರೆ. ನ.20ರಿಂದ, ರಾಮಲಲ್ಲಾ ಮೂರ್ತಿಗೆ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಲಾಗುವುದು ಮತ್ತು ಗರ್ಭಗುಡಿಯಲ್ಲಿ ಹೀಟರ್‌ಗಳನ್ನು ಅಳವಡಿಸಿ ಅದನ್ನು ಬೆಚ್ಚಗಿಡಲಾಗುತ್ತದೆ. ಹವಾಮಾನ ವೈಪರೀತ್ಯದ ಸಮಯದಲ್ಲಿ ಗರ್ಭಗುಡಿಯಲ್ಲಿ ಬ್ಲೋವರ್‌ನಿಂದ ಬೆಚ್ಚಗಿನ ಗಾಳಿಯನ್ನು ಸಹ ಒದಗಿಸಲಾಗುತ್ತದೆ.

ರಾಮಲಲ್ಲಾ ಬಾಲಕ. ಹೀಗಾಗಿ, ಅವನ ಆರೈಕೆ ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ಬಾಲಕ ರಾಮನಿಗೆ ವಿಶೇಷ ಗಮನ ಕೊಡಲಾಗುವುದು.ದೇವಾಲಯದ ಟ್ರಸ್ಟ್‌ನ ವಕ್ತಾರ ಓಂಕಾರ್‌ ಸಿಂಗ್‌, ರಾಮಲಲ್ಲಾ ರಾಮಮಂದಿರದಲ್ಲಿ ರಾಜಕುಮಾರನಾಗಿ ಕುಳಿತಿದ್ದಾನೆ. ಆದ್ದರಿಂದ ಅವನ ಬಟ್ಟೆಗಳು ಅವನ ರಾಜಪ್ರಭುತ್ವಕ್ಕೆ ಹೊಂದಿಕೆಯಾಗಬೇಕು ಎಂದು ಸಿಂಗ್‌ ಹೇಳಿದರು.

RELATED ARTICLES

Latest News