Friday, November 15, 2024
Homeರಾಜಕೀಯ | Politics"ಕರಿಯ ಕುಮಾರಸ್ವಾಮಿ" ಎಂದು ನಾಲಿಗೆ ಹರಿಬಿಟ್ಟ ಜಮೀರ್ ವಿರುದ್ಧ ಜನಾಕ್ರೋಶ

“ಕರಿಯ ಕುಮಾರಸ್ವಾಮಿ” ಎಂದು ನಾಲಿಗೆ ಹರಿಬಿಟ್ಟ ಜಮೀರ್ ವಿರುದ್ಧ ಜನಾಕ್ರೋಶ

HD Kumaraswamy Vs Zameer Ahmed Khan

ಬೆಂಗಳೂರು,ನ.11– ಚುನಾವಣಾ ಕಾಲದಲ್ಲಿ ಒಂದಲ್ಲಾ ಒಂದು ವಿವಾದಿತ ಹೇಳಿಕೆಗಳ ಮೂಲಕ ಜನಾಕ್ರೋಶಕ್ಕೆ ಗುರಿಯಾಗುವ ಸಚಿವ ಜಮೀರ್ ಅಹಮದ್ಖಾನ್ ಉಪಚುನಾವಣಾ ವೇಳೆಯಲ್ಲೂ ತಮ ಚಾಳಿಯನ್ನು ಮುಂದುವರೆಸಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ಮತ್ತೊಮೆ ವಿವಾದ ಸೃಷ್ಟಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಯ ಪ್ರಚಾರದ ಸಂದರ್ಭದಲ್ಲಿ ಉರ್ದು ಭಾಷೆ ಯಲ್ಲಿ ಮಾತನಾಡಿರುವ ಜಮೀರ್ ಅಹಮದ್, ಕುಮಾರಸ್ವಾಮಿಯವರನ್ನು ಕರಿಯ ಎಂದು ಲೇವಡಿ ಮಾಡಿದ್ದಾರೆ.

ಇದು ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸಿ.ಪಿ.ಯೋಗೇಶ್ವರ್ ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಜನತಾದಳಕ್ಕೆ ಸೇರಲು ಇಷ್ಟವಿರಲಿಲ್ಲ. ಇದಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಗಿಂತಲೂ ಕಾಲಿಯಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಅಪಾಯಕಾರಿ.

ಅವರು ಬಿಜೆಪಿ ಜೊತೆ ಮೈತ್ರಿ ಮಾಡಿರುವುದು ಘರ್ ವಾಪಸ್ ಆದಂತಾಗಿದೆ ಎಂದು ದೂರಿದ್ದಾರೆ.ಕುಮಾರಸ್ವಾಮಿ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲಬಹುದು ಎಂದಿದ್ದಾರೆ. ಮುಸಲಾನ್ ಸಮುದಾಯ ಮನೆಮನೆಯಿಂದಲೂ ಹಣ ಸಂಗ್ರಹಿಸಿ ಅವರ ಇಡೀ ಕುಟುಂಬವನ್ನೇ ಖರೀದಿ ಮಾಡುವ ತಾಕತ್ತು ಹೊಂದಿದೆ ಎಂದು ಹೇಳುವ ಮೂಲಕ ಜಮೀರ್ ಅಹಮದ್ ಖಾನ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಜಮೀರ್ರವರ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಹಬ್ಬ. ಇಲ್ಲಿ ಪ್ರಜಾಸತಾತಕ ಮತ್ತು ಸಂಸದೀಯ ಭಾಷೆಗಳಲ್ಲೇ ಮತಯಾಚನೆ ಮಾಡುವುದು ಸತ್ಸಂಪ್ರದಾಯ. ಈವರೆಗೂ ಬಹುತೇಕ ಎಲ್ಲಾ ನಾಯಕರು ಹಿತಮಿತ ಭಾಷೆಯಲ್ಲಿಯೇ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಆದರೆ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವ ಅಬ್ಬರದಲ್ಲಿ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.

ಕುಮಾರಸ್ವಾಮಿಯವರನ್ನು ನಿಂದಿಸುವ ಮೂಲಕ ಜಮೀರ್ ಅಹಮದ್ ಖಾನ್ ಜನಾಂಗೀಯ ಭಾವನೆಗಳನ್ನು ಕೆಣಕಿದ್ದಾರೆ. ವರ್ಣದ ಆಧಾರಿತವಾಗಿ ನಿಂದನೆ ಮಾಡುವ ಮೂಲಕ ತಮ ಕೀಳು ಅಭಿರುಚಿಯನ್ನು ವ್ಯಕ್ತಪಡಿಸಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಉಪಚುನಾವಣಾ ಕಣದಲ್ಲಿ ಜಮೀರ್ ಅವರ ಹೇಳಿಕೆ ಬಹುಸಂಖ್ಯಾತರನ್ನು ಒಗ್ಗೂಡಿಸಲು ವೇದಿಕೆ ಕಲ್ಪಿಸಿಕೊಟ್ಟಿದೆ.

ಈ ಮೊದಲು ಇದೇ ರೀತಿಯ ಉದ್ಧಟ ಹಾಗೂ ಹದ್ದುಮೀರಿದ ಹೇಳಿಕೆಗಳ ಮೂಲಕ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಜಮೀರ್ ತುತ್ತಾಗಿದ್ದರು. ಕಾಂಗ್ರೆಸ್ ಆ ಸಂದರ್ಭದಲ್ಲಿ ಜಮೀರ್ ಅವರಿಂದ ಅಂತರ ಕಾಯ್ದುಕೊಂಡು ಮುಜುಗರದಿಂದ ಪಾರಾಗಲು ಯತ್ನಿಸಿತ್ತು. ಚನ್ನಪಟ್ಟಣದಲ್ಲಿ ಮೈಕ್ ಕೈಗೆ ಸಿಗುತ್ತಿದ್ದಂತೆ ಆವೇಶಭರಿತರಾಗಿ ಮಾತನಾಡಿರುವ ಜಮೀರ್, ಸಭ್ಯತೆಯ ಎಲ್ಲೆಯನ್ನು ಮೀರಿ ಪ್ರಚೋದನಾತಕ ಭಾಷಣ ಮಾಡಿದ್ದು, ಮತ್ತೊಮೆ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಬಹುಸಂಖ್ಯಾತರನ್ನು ಒಗ್ಗೂಡಿಸುವಂತೆ ಮಾಡಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಜಮೀರ್ ಅಹಮದ್ ಖಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಜಮೀರ್ ಅವರ ರಾಜೀನಾಮೆಗೆ ಆಗ್ರಹಿಸಿವೆ.
ಕುಮಾರಸ್ವಾಮಿಯವರನ್ನು ಕುರಿತು ಜಮೀರ್ ಬಳಸಿರುವ ಭಾಷೆಯನ್ನು ತೀವ್ರವಾಗಿ ಖಂಡಿಸಿ ಸಂಪುಟದಿಂದ ವಜಾ ಮಾಡುವಂತೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿವೆ.

ಈ ನಡುವೆ ಟ್ವೀಟ್ ಮಾಡಿರುವ ಜೆಡಿಎಸ್, ಜಮೀರ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದೆ.ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜೀಜು ಅವರು ಟ್ವೀಟ್ ಮಾಡಿ, ಸಚಿವ ಜಮೀರ್ ಅಹಮದ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಬಳಸಿರುವ ಭಾಷೆಯನ್ನು ಖಂಡಿಸಿದ್ದಾರೆ. ದಕ್ಷಿಣ ಭಾರತೀಯರು ಆಫ್ರಿಕರಂತೆ ಕಾಣುತ್ತಾರೆ.

ಈಶಾನ್ಯದವರು ಚೀನೀಯರು, ಉತ್ತರ ಭಾರತೀಯರು ಅರಬ್ಬರು ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಯವರ ಸಲಹೆಗಾರರು ಕರೆದಿರುವಂತೆಯೇ ಇದು ಜಮೀರ್ ಅವರು ಕಾಲಿಯಾ ಕುಮಾರಸ್ವಾಮಿ ಎಂದು ಕರೆದಿರುವುದು ಜನಾಂಗೀಯ ಹೇಳಿಕೆಯಾಗಿದೆ ಎಂದು ಟೀಕಿಸಿದ್ದಾರೆ.

RELATED ARTICLES

Latest News