ಗೌರಿಬಿದನೂರು,ನ.13– ಟ್ರಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುವಾಗ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿದ್ದು, ತಾಲ್ಲೂಕಿನ ಮೇಳ್ಯಾ ಗ್ರಾಮದ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.ರೈತ ರಾಜು ಅವರು ತಮ ತೋಟದಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾಗ ಪುರಾತನ ವಿಗ್ರಹ ಪತ್ತೆಯಾಗಿದ್ದು, ಮೊದಲಿಗೆ ಈ ವಿಗ್ರಹವನ್ನು ವೀರಭದ್ರೇಶ್ವರ ಅಥವಾ ಚೆನ್ನಕೇಶವ ದೇವರ ವಿಗ್ರಹವೆಂಬ ಶಂಕೆ ವ್ಯಕ್ತಪಡಿಸಲಾಗಿತ್ತು.
ಗ್ರಾಮಸ್ಥರ ಪ್ರಕಾರ ಈ ವಿಗ್ರಹವು ವಿಜಯನಗರ, ಚೋಳ ಅಥವಾ ಗಂಗರ ಸಾಮ್ರಾಜ್ಯದ ಕಾಲದ ಛಾಯೆಯನ್ನು ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ.ಕಲ್ಲಿನ ಪುರಾತನ ವಿಗ್ರಹವನ್ನು ನೋಡಿದ ಗ್ರಾಮಸ್ಥರು ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ. ಈ ವಿಗ್ರಹವು ಭಾವಚಿತ್ರವಿಲ್ಲದ ಮೇಲೂ, ಗ್ರಾಮಸ್ಥರ ನಿಲುವಿನಲ್ಲಿ ಇದ್ದು, ತಕ್ಷಣವೇ ಅಧಿಕಾರಿಗಳಿಗೆ ಈ ಪತ್ತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಈ ವಿಗ್ರಹದ ಕುರಿತು ಪುರತತ್ವ ವಿಜ್ಙಾನಿ ನರಸಿಂಹಮೂರ್ತಿ ಈ ವಿಗ್ರಹ ನೊಳಂಬ ಹಾಗೂ ಗಂಗರ ಕಾಲದ ವಿಗ್ರಹ ಎಂದು ತಿಳಿಯುತ್ತಿದ್ದು ಇದು ಸೂರ್ಯ ದೇವರ ವಿಗ್ರಹ ಎಂದು ಗುರುತಿಸಿದ್ದಾರೆ. ಇನ್ನೂ ಈಗಾಗಲೇ ಈ ಭಾಗದಲ್ಲಿ ತನಿಖೆಯನ್ನು ನಡೆಸಿದ ವೇಳೆ ಇಲ್ಲಿ ಕಾಲಭೈರವನ ದೇವಸ್ಥಾನ ಇತ್ತು ಎಂದು ತಿಳಿದು ಬಂದಿತ್ತು. ಆದರೆ ಈಗ ಸಾವಿರ ವರ್ಷಗಳ ಇತಿಹಾಸವಿರುವ ವಿಗ್ರಹ ಪತ್ತೆಯಾಗಿದ್ದು ಸಂಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.