Thursday, November 14, 2024
Homeರಾಜ್ಯಫೈನಾನ್ಸಿಯರ್ಸ್ ಅಸೋಸಿಯೇಷನ್‌ ರಾಜ್ಯಾಧ್ಯಕ್ಷರಾಗಿ ಸಿ.ಕೆ.ಮೂರ್ತಿ ಪುನರಾಯ್ಕೆ

ಫೈನಾನ್ಸಿಯರ್ಸ್ ಅಸೋಸಿಯೇಷನ್‌ ರಾಜ್ಯಾಧ್ಯಕ್ಷರಾಗಿ ಸಿ.ಕೆ.ಮೂರ್ತಿ ಪುನರಾಯ್ಕೆ

CK Murthy re-elected as State President of Financiers Association

ಬೆಂಗಳೂರು,ನ.13- ಮಲ್ಲೇಶ್ವರದಲ್ಲಿರುವ ಅಖಿಲ ಕರ್ನಾಟಕ ಫೈನಾನ್ಸಿಯರ್‌ರ‍ಸ ಅಸೋಸಿಯೇಷನ್‌(ರಿ)ನ 2024-27ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಸಿ.ಕೆ.ಮೂರ್ತಿ ಅವರು ಕಮಿಟಿ ಒಮತದಿಂದ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಿಜೇಂದ್ರ.ಜಿ.ಆರ್‌, ಚಂದ್ರಶೇಖರ್‌ ಗುರುಶಿದ್ದಪ್ಪ ಹೂಗಾರ್‌, ಪ್ರಭಾಕರ ಇಷ್ಟಲಿಂಗಪ್ಪ ಬಣಗಾರ, ರಾಜ್ಯ ಕಾರ್ಯಾಧ್ಯಕ್ಷರಾಗಿ ನರಸಿಂಹಮೂರ್ತಿ.ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಶಿವರಾಂ, ಜಂಟಿ ಕಾರ್ಯದರ್ಶಿಗಳಾಗಿ ಲೀಲಾವತಿ.ಎ.ಜಿ, ಪ್ರಸನ್ನಕುಮಾರ್‌.ಕೆ.ಆರ್‌, ವೆಂಕಟೇಶ್‌.ಎಚ್‌.ಬಿ, ಖಜಾಂಚಿಯಾಗಿ ಸುರೇಶ್‌ ಬಾಬು.ಟಿ ಅವರುಗಳು ಚುನಾಯಿತರಾಗಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಚುನಾವಣೆ ಜರುಗಿತು. ಚುನಾವಣೆಯಲ್ಲಿ ಸಿ.ಕೆ.ಮೂರ್ತಿ ಅವರ ತಂಡ ಜಯಭೇರಿ ಬಾರಿಸಿದೆ. ಇದೇ ಸಂದರ್ಭದಲ್ಲಿ ಚುನಾಯಿತರಾದ ಎಲ್ಲಾ ಪದಾಧಿಕಾರಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಚುನಾವಣೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಿ.ಕೆ.ಮೂರ್ತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

Latest News