ಬೆಂಗಳೂರು,ನ.22- ಹಿಂದೂಗಳಿಗೆ ಸೇರಿದ ದೇವಸ್ಥಾನ , ಮಠ, ಶಾಲೆಗಳು, ಸೇರಿದಂತೆ ಮತ್ತಿತರ ಜಮೀನುಗಳಿಗೆ ವಕ್ಫ್ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದು, ನಗರದ ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಅಶ್ವಥ್ ನಾರಾಯಣ, ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಸೇರಿದ್ದರು.
ನಮ ಭೂಮಿ, ನಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ ನಡೆದ ಪ್ರತಿಭಟನೆಯಲ್ಲಿ ವಕ್‌್ಫ ಬೋರ್ಡ್ ಮೂಲಕ ಹಿಂದೂಗಳ ಜಮೀನು, ದೇವಸ್ಥಾನ,
ಮಠಮಂದಿರಗಳ ಜಮೀನು ಕಬಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿ ಇನ್ನು ಮುಂದೆ ನೋಟಿಸ್ ನೀಡಿದರೆ ಬೀದಿಗಿಳಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಕ್ಫ್ ಬೋರ್ಡ್ ವಿಚಾರವಾಗಿ ಜನತೆಯು ಆತಂಕಗೊಂಡಿದ್ದಾರೆ. ಹೇಳದೇ ಕೇಳದೆ ರಾತ್ರೋರಾತ್ರಿ ನೋಟಿಸ್ ಕೊಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ದಂಗೆ ಏಳುವ ಪರಿಸ್ಥಿತಿ ಎದುರಾಗಿದೆ ಎಂದು ಎಚ್ಚರಿಕೆ ಕೊಟ್ಟರು.
ಇದೊಂದು ಸಣ್ಣವಿಚಾರ ಎಂದು ಸಚಿವರು ಹೇಳುತ್ತಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಎಲ್ಲಾಕೇಸ್ಗಳನ್ನು ವಾಪಸ್ ತೆಗೀತೀರಿ, ಕಾಂಗ್ರೆಸ್ ಬಂದಾಗ ಮುಸ್ಲಿಮರ ಓಲೈಕೆ ಆಗುತ್ತದೆ. ನಮ ಹೆಣ್ಣುಮಕ್ಕಳನ್ನ ಅಪಹರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕುಮಕ್ಕು ನೀಡುತ್ತಿದೆ ಎಂದು ದೂರಿದರು.
ನಾನು ಬಡವರ ಪರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ನೀನು ಯಾವ ಸೀಮೆ ಬಡವನ ಪರನಪ್ಪಾ?, ಅನ್ನ ಹಾಕುವ ರೈತನಿಗೂ ಕನ್ನ, ಸಿದ್ದರಾಮಯ್ಯನ ಕಾಟಕ್ಕೆ ಖಾಯಿಲೆ ಬಂತು ಅಂತಾ ಆಸ್ಪತ್ರೆಗೆ ಹೋದರೂ ಕನ್ನ, ಇವರು ಕನ್ನದ ರಾಮಯ್ಯ. ರೈತರ ಅನ್ನ ತಿಂದಿದ್ದಕ್ಕೆ ನಿಮಗೆ ಘೋರ ನರಕ ಗ್ಯಾರಂಟಿ ಎಂದು ಎಚ್ಚರಿಕೆ ಕೊಟ್ಟರು.
ಸಿದ್ದರಾಮಯ್ಯ ಬಂದ ಮೇಲೆ ಮುಸಲಾನರಿಗೆ ಎರಡು ಕೊಂಬು ಬಂದಿದೆ. ಅವರು ಮುಸಲಾನರ ಚಾಂಪಿಯನ್ ಅಗಲು ಹೊರಟಿದ್ದಾರೆ. ಈಗ ರೇಷನ್ ಕಾರ್ಡ್ ಜಿಹಾದ್ ಶುರು ಮಾಡಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಕೂಡಾ ಹಣ ಹೊಡೆಯುವ ವ್ಯವಸ್ಥೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಜಾಸ್ತಿ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ತೆರಿಗೆ ಹಾಕದ ವಸ್ತುವೇ ಇಲ್ಲ. ನದಿ ನೀರಿಗೂ ತೆರಿಗೆ ಹಾಕಲು ಹೊರಟಿದ್ದಾರೆ, ಮನೆ ಹಾಳ ಕಾಂಗ್ರೆಸ್ ನವರು ಬಡ ರೋಗಿಗಳ ಸೇವೆಯ ಮೇಲೂ ತೆರಿಗೆ ಹಾಕುತ್ತಿದ್ದಾರೆ ಏ ಮನೆ ಹಾಳ ಕಾಂಗ್ರೆಸ್ ನವರೇ ರಾಜ್ಯದಲ್ಲಿ ಬಿಜೆಪಿ ಆಡಳಿತ ಎಂಟೇ ವರ್ಷ, ಉಳಿದ ಎಲ್ಲಾ ವರ್ಷ ನೀವೇ ಆಡಳಿತ ಮಾಡಿದ್ದು ಎಂದು ಆರೋಪಿಸಿದರು.
ಇವರು ಮಾಡಿರುವ ಕೆಲಸಕ್ಕೆ ನರಕಕ್ಕೆ ಹೋದರೂ ನರಕದಲ್ಲೂ ಕಷ್ಟವೇ, ಮಠ, ದೇವಸ್ಥಾನ, ರೈತರ ಜಮೀನು ಉಳಿಯಬೇಕಾದರೆ ಸೂಪರ್ ಮ್ಯಾನ್ ನರೇಂದ್ರಮೋದಿ ಬರಬೇಕು. ಕಾಯ್ದೆ ತರುವಾಗ ಸಿದ್ದರಾಮಯ್ಯ ಇರುತ್ತಾರೋ ಹೋಗುತ್ತಾರೋ ಗೊತ್ತಿಲ್ಲ. ಪರಮೇಶ್ವರ್ ಅವರೇ ಬೇಗ ಕಾಂಗ್ರೆಸ್ ಭವನ ಕಟ್ಟಿ, ಯಾವಾಗ ಏನಾಗುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇಷ್ಟೆಲ್ಲಾ ಕರ್ಮ ಮಾಡಿದ ಮೇಲೆ ಸಿದ್ದರಾಮಯ್ಯ ಉಳಿಯುತ್ತಾರಾ? ಜಯನಗರ ಶಾಸಕ ಸಿ.ಕೆ.ರಾಮಮೂರ್ತಿಗೆ ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳಿದ್ದರಲ್ಲಾ ಡಿ.ಕೆ. ಶಿವಕುಮಾರ್ ಅವರೇ ನಿನ್ನೆ ನಿರ್ಮಲಾ ಸೀತಾರಾಮನ್ ಬಳಿ ಹೋದಾಗ ಅವರು ಕೂಡಾ ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳಿದ್ದರೆ ನಿಮ ಕಥೆ ಏನು? ಎಂದು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆ ಮಾತನಾಡಿ, ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ವಕ್‌್ಪ ಎಂಬ ಹೆಸರೇ ಇರಲಿಲ್ಲ. ಅರ್ಧ ಭಾರತದಷ್ಟು ಜಮೀನು ಇವತ್ತು ವಕ್‌್ಫ ಹೆಸರಲ್ಲಿದೆ. ಕಾನೂನುಬಾಹಿರವಾಗಿ ಕಾನೂನುಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಕೇವಲ ಸಾವಿರದಷ್ಟು ಎಕರೆ ಇದ್ದ ಜಮೀನು 38 ಲಕ್ಷ ಎಕರೆ ಹೇಗಾಯ್ತು? ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಮೀರ್ ಅವರು ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ಅವರಿಗೆ ಕಾನೂನಿನಲ್ಲಿ ಅದಾಲತ್ ಮಾಡೋಕೆ ಅವಕಾಶ ಇಲ್ಲ. ತಹಶೀಲ್ದಾರರು, ಡಿಸಿ ಅವರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ತಿರುಚಂದುರೈ ಇಂದು ಊರಿಗೆ ಊರೇ ವಕ್‌್ಫ ಆಗಿದೆ. ಚಾಲುಕ್ಯ ಕಾಲದ ಸೋಮೇಶ್ವರ ದೇಗುಲ, ಬೀರೇಶ್ವರ ಸ್ವಾಮಿ ದೇವಸ್ಥಾನ ವಕ್‌್ಫ ಗೆ ಸೇರಿದೆ. ಕಿತ್ತೂರು ರಾಣಿ ಚೆನ್ನಮ ಲಿಂಗಾಯತರಿಗೆ ದಾನ ಕೊಟ್ಟ ಜಮೀನನ್ನು ವಕ್‌್ಫ ಗೆ ಸೇರಿಸಲಾಗುತ್ತಿದೆ. ವಕ್‌್ಫ ಕಾನೂನು ಬದಲಾಗಬೇಕಿದೆ ಎಂದು ಒತ್ತಾಯಿಸಿದರು.
ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರೇಷನ್ ಕಾರ್ಡ್ ಕಿತ್ತು ಹಾಕಿದ್ದಾರೆ.. ಇದರಿಂದ ಸರ್ಕಾರದ ಯೋಜನೆ, ಕೇಂದ್ರದ ಯೋಜನೆಗಳಿಂದಲೂ ವಂಚಿತರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿ, 1995ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಅವರು ಒಂದು ಜಾಗವನ್ನು ನಮದು ಅಂದರೆ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ತೋಳದ ಬಳಿ ಹೋಗಿ ನ್ಯಾಯ ಕೇಳುವ ಕುರಿಮರಿ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ದಲಿತರು ಮನೆ ಕಟ್ಟಿರುವ ಜಾಗವನ್ನು ನಮದು ಎನ್ನುತ್ತಾರೆ. ವಕ್ಫ್ ಬೋರ್ಡ್ ಚೇರ್ ಮೇನ್ ಸಾದಿ, ವಿಧಾನಸೌಧ ಕೂಡ ವಕ್‌್ಫ ಆಸ್ತಿ ಎನ್ನುತ್ತಾರೆ. ಮುಸ್ಲಿಮರ ಮತಾಂಧತೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ. ಕರ್ನಾಟಕದ ನಂದನವನವನ್ನು ಸಶಾನ ಮಾಡಲು ಹೊರಟಿದ್ದಿರಿ ಎಂದು ಕಿಡಿಕಾರಿದರು.
ವಕ್‌್ಫ ಬೋರ್ಡ್ ಅಧಿಕಾರ ಕಡಿಮೆಯಾಗಬೇಕು. ಲೋಕಸಭೆಯ ಬಿಲ್ಗೆ ತಿದ್ದುಪಡಿ ಮಾಡಲು ಹೊರಟರೂ ಕ್ರಾಂತಿ ಆಗುತ್ತದೆ ಅನುತ್ತಾರೆ. ಸಂವಿಧಾನಕ್ಕೆ ಬೆದರಿಕೆ ಹಾಕುತ್ತೀರಾ? ಆ ಕಾಲ ಹೋಯ್ತು. ಇಲ್ಲಿ ಸಂವಿಧಾನ ನಂಬಿಕೊಂಡು ಬರುವವರಿಗೆ ಜಾಗವಿದೆ. ಸಂವಿಧಾನದ ಜಾಗದಲ್ಲಿ ಷರಿಯಾಗೆ ಜಾಗ ಕೊಡುವವರಿಗೆ ಜನ ಬುದ್ದಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ನೀವು ಯಾವ ಧ್ವನಿಯಲ್ಲಿ ಹೋರಾಟ ಮಾಡ್ತಿರೋ ಅದೇ ರೀತಿ ಅದನ್ನ ಎದುರಿಸುತ್ತೇವೆ. ಮತಾಂಧತೆಗೆ ಕುಮಕ್ಕು ಕೊಟ್ಟಿದ್ದೀರಿ, ಮತ್ತಷ್ಟು ಪಾಕಿಸ್ತಾನವನ್ನು ನೀವೇ ಸೃಷ್ಟಿಸುತ್ತಿದ್ದೀರಿ. ವಕ್‌್ಪ ಬೋರ್ಡ್ಗೆ ಯಾವ ಆಸ್ತಿ ಕೊಟ್ಟರು? ಯಾರು ಕೊಟ್ಟರು? ಎಂದು ಅವರು ಪ್ರಶ್ನಿಸಿದರು.