Friday, November 15, 2024
Homeರಾಜ್ಯರೈತರಿಗೆ ವಕ್ಫ್ ನೋಟೀಸ್ ಖಂಡಿಸಿ ಸರ್ಕಾರದ ವಿರುದ್ದ ಬಿಜೆಪಿ ಭಿನ್ನಮತೀಯರಿಂದ ಜನಜಾಗೃತಿ ಅಭಿಯಾನ

ರೈತರಿಗೆ ವಕ್ಫ್ ನೋಟೀಸ್ ಖಂಡಿಸಿ ಸರ್ಕಾರದ ವಿರುದ್ದ ಬಿಜೆಪಿ ಭಿನ್ನಮತೀಯರಿಂದ ಜನಜಾಗೃತಿ ಅಭಿಯಾನ

Public awareness campaign by BJP against government condemning waqf notice to farmers

ಬೆಂಗಳೂರು,ನ.15- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ದ ನ.25ರಿಂದ ಡಿ.25ರವರೆಗೆ ಬೀದರ್ನಿಂದ ಜನಜಾಗೃತಿ ಅಭಿಯಾನ ಬಿಜೆಪಿ ಭಿನ್ನಮತೀಯರ ನೇತೃತ್ವದಲ್ಲಿ ನಡೆಯಲಿದೆ.

ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚಿಹ್ನೆಯಡಿ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಿರುವ ಭಿನ್ನಮತೀಯ ನಾಯಕರು ಸಾರ್ವಜನಿಕರು ವಕ್ಫ್ ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ 9035675734 ಈ ವಾಟ್ಸಪ್ ನಂಬರಿಗೆ ಸಂದೇಶ ಕಳುಹಿಸಲು ಮನವಿ ಮಾಡಿದ್ದಾರೆ.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಕುಮಾರಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಅಭಿಯಾನದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಈಗಾಗಲೇ ಬಹಳ ಸುದ್ದಿ ಯಲ್ಲಿರುವ ಜನರಿಗೆ ತೊಂದರೆ ಆಗುತ್ತಿರುವ ವಕ್ಫ ನಮೆಲ್ಲರ ಗಮನಕ್ಕೆ ಬಂದಿದೆ. ಯತ್ನಾಳ್ ಬಿಜಾಪುರದಲ್ಲಿ ಹೋರಾಟ ಪ್ರಾರಂಭ ಮಾಡಿದ್ದರು. ಯತ್ನಾಳ್ ಹೋರಾಟದ ಪರಿಣಾಮವಾಗಿ ಕೇಂದ್ರದ ವಕ್ಫ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಯತ್ನಾಳ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದ್ದರು ಎಂದು ತಿಳಿಸಿದರು.

ವಕ್ಫ ವಿಚಾರದಲ್ಲಿ ಸಾಕಷ್ಟು ದೂರು ಬಂದಿದೆ. ನವಂಬರ್ 25 ರಿಂದ ಡಿಸೆಂಬರ್ 25 ವರೆಗೂ ಜನ ಜಾಗೃತಿ ಅಭಿಯಾನ ಮಾಡುತ್ತೇವೆ. ಒಂದು ವಾರ್ ರೂಮ್ ಸಹ ಪ್ರಾರಂಭ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟ ಲಿಂಬಾವಳಿ, 1954 ರಿಂದ ಆರಂಭವಾದ ಗೆಜೆಟ್ ಆದೇಶವನ್ನು ರದ್ದು ಮಾಡಬೇಕು, ರೈತರು, ಮಠಗಳು, ಸರ್ಕಾರಿ ಜಾಗಗಳಿಗೆ ವಕ್‌್ಫ ಕ್ಲೈಮ್ ಮಾಡುತ್ತಿದೆ. ಆ ಜಾಗಗಳನ್ನು ಖಾಯಂ ವಾಪಸ್ ಕೊಡಬೇಕು ಹಾಗೂ ಅನ್ವರ್ ಮಾನ್ಪಾಡಿ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಬೀದರ್ ಜಿಲ್ಲೆಯಿಂದ ಅಭಿಯಾನ ಪ್ರಾರಂಭವಾಗಿ ಕಲಬುರಗಿ, ಯಾದಗಿರಿ, ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮೂಲಕ ಸಾಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರೈತರು, ಮಠಗಳಿಗೆ ವಕ್‌್ಫ ಆದೇಶದಿಂದ ಅನ್ಯಾಯವಾಗುತ್ತಿದೆ. ನಾವು ಕೇಳುತ್ತಿರುವುದು ಕ್ರಿಮಿನಲ್ ಪ್ರಕರಣಗಳು ರದ್ದಾಗಿ ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು ಎಂದು ಮನವಿ ಮಾಡಿದರು.

ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಮೂಲಕ ಜಂಟಿ ಸಂಸದೀಯ ಸಮಿತಿಗೆ ವರದಿಯನ್ನು ನೀಡುತ್ತೇವೆ. ಈಗಾಗಲೇ ಕೇಂದ್ರ ಸರ್ಕಾರ ವಕ್‌್ಫ ತಿದ್ದುಪಡಿ ತರಲು ಮುಂದಾಗಿದೆ. ಎಷ್ಟೋ ಮಾಹಿತಿ ಯಾವುದೇ ಸರ್ಕಾರಕ್ಕೂ ಇಲ್ಲ ಎಂದರು.

ರಾಜ್ಯದಲ್ಲಿ ಮೊದಲಿಗೆ 1 ಲಕ್ಷ ಎಕರೆ ಜಮೀನು ನಮದಿದೆ ಎಂದರು. ಈಗ 6 ಲಕ್ಷ ಎಕರೆ ಭೂಮಿ ವಕ್‌್ಫಗೆ ತೆಗೆದುಕೊಳ್ಳಲು ಕ್ಲೈಮ್ ಮಾಡಿದ್ದಾರೆ. ಇಡೀ ದೇಶದಲ್ಲಿ 38 ಲಕ್ಷ ಎಕರೆ ಜಮೀನು ನಮದೆನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಲೀಗಲ್ ಟೀಂ ಮೂಲಕ ಹೋರಾಟ ಮಾಡುತ್ತಿದ್ದೇವೆ. ಅದರ ಜೊತೆಗೆ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರದ ಜಮೀರ್ ಅಹದ್ ಖಾನ್ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮನ್ನು ಸೈತಾನ್ಗೆ ಹೋಲಿಸುತ್ತಿದ್ದಾರೆ. ಸಿಎಂ ಹೇಳಿದ್ದಾರೆಂದು ಅಧಿಕಾರಿಗಳಿಗೆ ದಮ್ಕಿ ಹಾಕುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಜಮೀರ್ ಬೆದರಿಕೆಗೆ ಬೆಚ್ಚಿ ಬಿದ್ದಿದ್ದಾರೆ ಎಂದು ದೂರಿದರು.

ಕೆಲವೊಂದಿಷ್ಟು ಮುಸ್ಲಿಂ ಸಮುದಾಯ ಕೂಡ ವಿರೋಧ ಮಾಡಿದೆ. ವಿಜಯಪುರ, ಧಾರವಾಡದಲ್ಲಿ ವಿರೋಧಿಸಿ ಧ್ವನಿ ಎತ್ತಿದ್ದಾರೆ. ಈ ಟ್ರಿಬ್ಯೂನಲ್ ರದ್ದು ಆಗಬೇಕು, ಬಿಜೆಪಿ ಕಾಲದನ್ನು ನಾವು ಸಮರ್ಥನೆ ಮಾಡುವುದಿಲ್ಲ ಎಂದರು.

ಬಿಜೆಪಿ ನೊಟೀಸ್ ಕೊಟ್ಟಿದ್ದರೆ, ಯಡಿಯೂರಪ್ಪ, ಬೊಮಾಯಿ ಯಾರೇ ವಕ್ಫ್ ನಿಂದ ನೊಟೀಸ್ ಕೊಟ್ಟರೂ ನಮ ಸಮರ್ಥನೆ ಇಲ್ಲವೇ ಇಲ್ಲ. ನಮದು ಈಗ ಹೋರಾಟ ಟ್ರುಬ್ಯುನಲ್ ರದ್ದಾಗಬೇಕು ಅಷ್ಟೇ ನೊಟೀಸ್ ಕೊಡದೇನೆ ವಕ್‌್ಫ ಎಂದು ನಮೂದು ಮಾಡಿದ್ದಾರೆ ಎಂದು ಕಿಡಿಕಾರಿದರು.

ಜನಜಾಗೃತಿ ಅಭಿಯಾನಕ್ಕೆ ಕೇಂದ್ರದ ಅನುಮತಿ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಈಗಾಗಲೇ ನಮ ಗೃಹಸಚಿವರು, ಪ್ರಧಾನಿಯವರು ಧ್ವನಿಗೂಡಿಸಿದ್ದಾರೆ. ಹೀಗಾಗಿ ನಮ ಅಭಿಯಾನಕ್ಕೆ ಹೈಕಮಾಂಡ್ ಬಂಬಲ ವಿಚಾರವೇ ಬರುವುದಿಲ್ಲ ಎಂದರು.
ಜನರ ಹಿತದೃಷ್ಟಿಯಿಂದ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಯಾರು ಬೇಕಾದರೂ ಬೆಂಬಲ ಕೊಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ, ಸಂಸದರಿಗೆ ಆಹ್ವಾನ ನೀಡಿದ ಯತ್ನಾಳ್, ಅವರು ಬಂದರೂ ಅಭಿಯಾನ ನಡೆಯುತ್ತದೆ, ಬರದಿದ್ದರೂ ಅಭಿಯಾನ ನಡೆಸುತ್ತೇವೆ ಎಂದರು.

ಬಿಜೆಪಿ ಹೋರಾಟನಾ ಯತ್ನಾಳ್ ಹೋರಾಟ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಇದು ಬಿಜೆಪಿಯಿಂದ ಮಾಡುತ್ತಿರುವ ಹೋರಾಟ. ನಮ ಹೋರಾಟಕ್ಕೆ ಕೇಂದ್ರ ಸಚಿವರು ಬಂದಿದ್ದರು. ಅವರು ಬಂದಿದ್ದು ನಮ ಹೋರಾಟಕ್ಕೆ ಬೆಂಬಲ ಇದೆ ಅಂತ ಅಲ್ಲವೇ ಎಂದು ಪ್ರಶ್ನಿಸಿದರು.

ಪ್ರಹ್ಲಾದ ಜೋಶಿ, ಶೋಭ ಕರಂದ್ಲಾಜೆ, ವಿ.ಸೋಮಣ್ಣ ಅವರೂ ಬಂದಿದ್ದರು. ಇದು ನಮ ನಾಯಕರ ಬೆಂಬಲ ಇದೆ ಅಂತಲ್ಲ. ರಾಜ್ಯಾಧ್ಯಕ್ಷರ ಸಮತಿ ವಿಚಾರ. ಅವರ ಮೌನವೇ ಸಮತಿ. ಬಿಜೆಪಿ ಸರ್ವಾಂತರಗಾಮಿ ಪಕ್ಷ, ಬಿಜೆಪಿ ಎಲ್ಲ ಕಡೆ ಬಿಜೆಪಿ ಇದೆ ಎಂದು ಹೇಳಿದರು.

RELATED ARTICLES

Latest News