ಇಸ್ಲಮಾಬಾದ್,ನ.15– ಮುಂದಿನ ವರ್ಷ ನಡೆಯಲಿರುವ ಬಹುನಿರೀಕ್ಷಿತ ಚಾಂಪಿಯನ್ಸ್ ಟೋಫಿ ಕ್ರಿಕೆಟ್ ಟೂರ್ನಮೆಂಟಿನ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಪ್ರಕಟಿಸಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿ ಈಗಾಗಲೇ ಉತ್ತರ ಪಾಕಿಸ್ತಾನದ ಸ್ಕರ್ಡು ನಗರದಿಂದ ಇಂದು ಕರಾಚಿ ತಲುಪಿದೆ.
ಚಾಂಪಿಯನ್್ಸ ಟ್ರೋಫಿಯ ಪ್ರದರ್ಶನ, ಪಾಕಿಸ್ತಾನದ ಆಯ್ದ ನಗರಗಳಲ್ಲಿ ನಡೆಯಲಿದೆ ಎಂದು ಪಿಸಿಬಿ ಹೇಳಿದೆ. ಭಾರತ, ಪಾಕಿಸ್ತಾನದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ, ಐಸಿಸಿ ಇನ್ನೂ ವೇಳಾಪಟ್ಟಿಯನ್ನು ಅಂತಿಮಗೊಳಿಸಿಲ್ಲ.
ಒಂದು ವೇಳೆ, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಪಾಲ್ಗೊಳ್ಳುವಿಕೆಯಿಂದ ಹಿಂದಕ್ಕೆ ಸರಿದರೆ ಐಸಿಸಿಗೆ ನೂರಾರು ಕೋಟಿ ಮತ್ತು ಪಾಕಿಸ್ತಾನಕ್ಕೆ ಸುಮಾರು 1,800 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಸಿಸಿಐ, ಈಗಾಗಲೇ ಹೈಬ್ರಿಡ್ ಮಾದರಿಗೆ ಒತ್ತಡ ಹೇರುತ್ತಿದೆ.
ಹಿಂಬಾಗಿಲಿನಲ್ಲಿ ಭಾರತದ ಜೊತೆ ಮಾತುಕತೆ ನಡೆಯುತ್ತಿದೆ ಎನ್ನು ಆರೋಪವನ್ನು ಪಾಕ್ ಕ್ರಿಕೆಟ್ ಅಽಕಾರಿಗಳು ತಳ್ಳಿ ಹಾಕಿದ್ದಾರೆ. ರಾಜಕೀಯ ಮತ್ತು ಕ್ರೀಡೆ, ಎರಡನ್ನೂ ಒಂದಕ್ಕೊಂದು ಬೆರೆಸಬಾರದು ಎನ್ನುವ ನಮ್ಮ ಹಿಂದಿನ ನಿಲುವನ್ನೇ ನಾವು ಮತ್ತೆ ಹೇಳುತ್ತಿದ್ದೇವೆ ಎಂದೇನೋ ಪಾಕ್ ಕ್ರಿಕೆಟ್ ಬೋರ್ಡ್ ಅಽಕಾರಿಗಳು ಹೇಳುತ್ತಿದ್ದಾರೆ.
ಕೆಲವೊಂದು ಮೂಲಗಳ, ಪ್ರಕಾರ ಒಂದು ಪಂದ್ಯವನ್ನಾದರೂ ಪಾಕಿಸ್ತಾನದಲ್ಲಿ ಟೀಂ ಇಂಡಿಯಾ ಆಡಲಿ ಎನ್ನುವ ಹೊಸ ಸೂತ್ರವನ್ನು ಬಿಸಿಸಿಐ ಮುಂದೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಲಾಹೋರಿನ ಗದ್ದಾಫಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಯೋಜಿಸುತ್ತೇವೆ ಎನ್ನುವ ಪ್ರಸ್ತಾವನೆಯನ್ನು ಇಡಲಾಗಿದೆ.
ಉಳಿದ ಪಂದ್ಯಗಳು ಮತ್ತು ಸೆಮಿಫೈನಲ್ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿ. ಒಂದು ಲೀಗ್ ಹಂತದ ಪಂದ್ಯವನ್ನು ಭಾರತ ತಂಡ ಪಾಕ್ ನಲ್ಲಿ ಮತ್ತು ಫೈನಲ್ ಪಂದ್ಯವನ್ನೂ ಭಾರತ ಆಡಬೇಕು ಎನ್ನುವುದು ನಮ್ಮ ಆಸೆ. ಅದೂ ಲಾಹೋರ್ ನಲ್ಲಿ ನಡೆಯಲಿ ಎನ್ನುವ ಹೊಸ ಸೂತ್ರ ಮುಂದಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಕರಡು ವೇಳಾಪಟ್ಟಿಯ ಪ್ರಕಾರ, ಎರಡು ಪಂದ್ಯವನ್ನು ಭಾರತ ತಂಡ ಪಾಕಿಸ್ತಾನದಲ್ಲಿ ಆಡಿದರೆ, ಉಳಿದ ಪಂದ್ಯಗಳನ್ನು ಶ್ರೀಲಂಕಾ ಅಥವಾ ಯುಎಇನಲ್ಲಿ ಆಡಲಿದೆ. ಆದರೆ, ಈ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿ ಇದ್ದು, ಇದು ಮೊದಲು ಐಸಿಸಿಗೆ ಸಲ್ಲಿಕೆಯಾಗಬೇಕಿದೆ.