Friday, November 15, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಮುಡಾ ಹಗರಣ : ಮೈಸೂರು ಮಹಾನಗರ ಪಾಲಿಕೆಯ ನೌಕರ ವಜಾ

ಮುಡಾ ಹಗರಣ : ಮೈಸೂರು ಮಹಾನಗರ ಪಾಲಿಕೆಯ ನೌಕರ ವಜಾ

Muda scam: Mysore Municipal Corporation employee Suspended

ಮೈಸೂರು, ನ. 15-ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ನೌಕರನನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಇ.ಡಿ ಅಧಿಕಾರಿಗಳು ಮುಡಾ ಹಗರಣದ ಭಾಗಿ ಆಗಿರುವ ಆರೋಪ ಎದುರಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ಕುಮಾರ್ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇ.ಡಿ ವಿಚಾರಣೆ ಬೆನ್ನಲ್ಲೇ ಕುಮಾರ್ನನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರುಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಕುಮಾರ್ ಪಾಲಿಕೆ ನೌಕರನಾಗಿ ಕೆಲಸ ಆರಂಭಿಸಿದ್ದ. ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದ. ನಾಲ್ಕು ದಿನಗಳ ಹಿಂದೆ ಬಿ.ಕೆ.ಕುಮಾರ್ ನನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಮುಡಾದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ವೇಳೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ.

ಹಿಂದಿನ ಕಮಿಷನರ್ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ.
ಮುಡಾದಲ್ಲಿ ಸಂರಕ್ಷಿಸಿ ಇಡಲಾಗಿದ್ದ 8 ಸಾವಿರ ಸೈಟ್ಗಳ ಬಗ್ಗೆ ಅಧಿಕಾರಿ ಕುಮಾರ್ ಮಾಹಿತಿ ನೀಡಿದ್ದ. ಈ ಸೈಟ್ಗಳನ್ನು 50-50 ನಿಯಮದಲ್ಲಿ ಆಯುಕ್ತರು ಮಂಜೂರು ಮಾಡಿದ್ದರು. ಹಿಂದಿನ ಆಯುಕ್ತರಾದ ನಟೇಶ್ ಹಾಗೂ ದಿನೇಶ್ಕುಮಾರ್ಗೆ ಅಕ್ರಮದಲ್ಲಿ ಸಹಾಯ ಮಾಡಿದ ಆರೋಪ ಈತನ ಮೇಲಿದೆ.

ಈತ ಮುಡಾದಲ್ಲಿ ಕೆಲಸ ಮಾಡುತ್ತಾ ಮಹಾನಗರ ಪಾಲಿಕೆಯಿಂದಲೂ ಸಂಬಳ ಪಡೆಯುತ್ತಿದ್ದ. ಎರಡೂ ಸರ್ಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ಕರ್ತವ್ಯನಿರ್ವಹಿಸಿ ಎರಡೆರಡು ವೇತನ ಪಡೆದು ಕಾನೂನು ಉಲ್ಲಂಘನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ.

RELATED ARTICLES

Latest News