Sunday, November 24, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌‍ ಕಳಪೆ ಸಾಧನೆ : ಪೃಥ್ವಿರಾಜ್‌ ಚವಾಣ್‌ ಆತಂಕ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌‍ ಕಳಪೆ ಸಾಧನೆ : ಪೃಥ್ವಿರಾಜ್‌ ಚವಾಣ್‌ ಆತಂಕ

Cong face with clean image, Prithviraj Chavan gets shock defeat in polls

ಮುಂಬೈ,ನ.24-ಮಹಾ ರಾಷ್ಟ್ರ ವಿಧಾನ ಸಭೆ ಚುನಾವನೆಯಲ್ಲಿ ಕಾಂಗ್ರೆಸ್‌‍ನ ಹೀನಾಯ ಸೋಲು ಆಘಾತಕಾರಿ,ಇದು ಎಂದೆಂದಿಗೂ ಅತ್ಯಂತ ಕೆಟ್ಟ ಸೋಲು ಎಂದು ಮಾಜಿ ಸಿಎಂ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚವಾಣ್, ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಮಹಾಯುತಿ ಸರ್ಕಾರದ ಲಡ್ಕಿ ಬಹಿನ್ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಮತದಾರರನ್ನು ಆಕರ್ಷಸಿದೆ ಆದರೆ ಧ್ರುವೀಕರಣವು ರಾಜ್ಯದ ನಗರ ಭಾಗಗಳಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಭವಿಷ್ಯವನ್ನು ಹೊಡೆದಿದೆ ಎಂದು ಬಣ್ಣಿಸಿದ್ದಾರೆ.

ಕೇಸರಿ ಅಲೆ ಅಥವಾ ಇವಿಎಂ ದೕಷ ಇದೆಯೇ ಎಂದು ಹೇಳುವುದು ಕಷ್ಟ ಎಂದು ಕರಾದ್ ದಕ್ಷಿಣ ಕ್ಷೇತ್ರದಿಂದ ಸೋಲು ಕಂಡಿರುವ ಚವಾಣ್ ಹೇಳಿದರು. 288 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಫಲಿತಾಂಶ ಚವಾಣ್ ಸೇರಿದಂತೆ ಹಲವಾರು ದೊಡ್ಡ ನಾಯಕರು ಸೋತಿದ್ದಾರೆ. ಎಂವಿಎ ಭಾಗವಾಗಿ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ 16 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಹೀನಾಯ ಸೋಲನ್ನು ದಾಖಲಿಸಿದೆ.

ಚವಾಣ್ ಅವರು ಸತಾರಾ ಜಿಲ್ಲೆಯ ಕರಡ್ ದಕ್ಷಿಣ ಕ್ಷೇತ್ರವನ್ನು 5,000 ರಿಂದ 6,000 ಮತಗಳಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದೆ ು. ಆದರೆ, ಜಿಲ್ಲೆಯ ಎಲ್ಲಾ ಎಂವಿಎ ಅಭ್ಯರ್ಥಿಗಳು ಸುಮಾರು 40,000 ಮತಗಳ ಅಂತರದಿಂದ ಸೋತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿಯ ಅತುಲ್‌ ಭೋಸ್ಲೆ ಅವರು ಕರಾಡ್ ದಕ್ಷಿಣದಲ್ಲಿ 39,355 ಮತಗಳ ಅಂತರದಿಂದ ಸೋಲಿಸಿದ್ದಾರೆ ಇದು ಆಘಾತಕಾರಿ ಸೋಲು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇದುವರೆಗಿನ ಅತ್ಯಂತ ಕೆಟ್ಟ ಸೋಲು ಎಂದು ಮರುಗಿದ್ದಾರೆ.

ಕಾಂಗ್ರೆಸ್‌‍ ನಾಯಕತ್ವದೊಂದಿಗೆ ರಾಜ್ಯದ ಫಲಿತಾಂಶಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳುತ್ತಿದ್ದೇನೆ,ರಾಜ್ಯಉಸ್ತುವಾರಿ ರಮೇಶ್‌ ಚೆನ್ನಿತ್ತಲಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಚವಾಣ್‌ ಹೇಳಿದರು. ನನ್ನ ಕ್ಷೇತ್ರದ ಜನರನ್ನು ಭೇಟಿ ಮಾಡಲು ಎರಡು ದಿನ ಕರಾದ್‌ನಲ್ಲಿ ಇರುತ್ತೇನೆ ಎಂದು ಚವಾಣ್‌ ಹೇಳಿದರು.

RELATED ARTICLES

Latest News