ನವದೆಹಲಿ,ನ.26- ಭಾರತೀಯ ಸಂವಿಧಾನವು ಜೀವಂತ ಮತ್ತು ಅತ್ಯಂತ ಪ್ರಗತಿಪರ ದಾಖಲೆಯಾಗಿದ್ದು, ಅದರ ಮೂಲಕ ದೇಶವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣಿಸಿದ್ದಾರೆ.
ದೇಶಕ್ಕೆ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸತ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಸಭೆಯಲ್ಲಿ 15 ಮಹಿಳಾ ಸದಸ್ಯರನ್ನು ಕೊಡುಗೆಯನ್ನು ಸರಿಸಿದರು.
ನಮ ಸಂವಿಧಾನವು ಜೀವಂತ ಮತ್ತು ಪ್ರಗತಿಪರವಾಗಿದೆ. ಮಹಿಳಾ ಮೀಸಲಾತಿಯು ಕಾನೂನು ಮತ್ತು ಪ್ರಜಾಪ್ರಭುತ್ವದಲ್ಲಿ ಮಹಿಳಾ ಸಬಲೀಕರಣದ ಹೊಸ ಯುಗವನ್ನು ಪ್ರಾರಂಭಿಸಿದೆ. ಸಂವಾದಾತಕ ಚಟುವಟಿಕೆಗಳು, ಸಂಪನೂಲಗಳ ಮೂಲಕ ಸಂವಿಧಾನದ ಪರಂಪರೆಯೊಂದಿಗೆ ತೊಡಗಿಸಿಕೊಳ್ಳಲು ನಾಗರಿಕರನ್ನು ಸಕ್ರಿಯಗೊಳಿಸುವುದಕ್ಕಾಗಿ ವಿಶೇಷವಾದ ಯೋಜನೆಗಳನ್ನು ಹಮಿಕೊಳ್ಳಲಾಗಿದೆ.