Saturday, November 30, 2024
Homeರಾಜಕೀಯ | Politicsಅಹಿಂದ ಸಮಾವೇಶವೇ ಅಥವಾ ಸಿದ್ದರಾಮಯ್ಯನವರ ಬೀಳ್ಕೊಡುಗೆ ಸಮಾರಂಭವೇ..? : ಜೆಡಿಎಸ್‌‍ ಲೇವಡಿ

ಅಹಿಂದ ಸಮಾವೇಶವೇ ಅಥವಾ ಸಿದ್ದರಾಮಯ್ಯನವರ ಬೀಳ್ಕೊಡುಗೆ ಸಮಾರಂಭವೇ..? : ಜೆಡಿಎಸ್‌‍ ಲೇವಡಿ

JDS On Siddaramaiah's Ahinda Samavesha

ಬೆಂಗಳೂರು, ನ.30- ಹಾಸನದಲ್ಲಿ ಡಿಸೆಂಬರ್‌ 5ರಂದು ನಡೆಯುವ ಕಾಂಗ್ರೆಸ್ಸಿನ ಅಡ್ರೆಸ್ಸೇ ಇಲ್ಲದ ಅಹಿಂದ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವಾ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್‌ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ ಎಂದು ಜೆಡಿಎಸ್‌‍ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, ಮನೆಯೊಂದು ಮೂವತ್ತೊಂದು ಬಾಗಿಲು ಎನ್ನುವಂತೆ ಆಗಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರದಲ್ಲಿ ಸಿಎಂ ಸಾಹೇಬರಿಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್‌ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು? ಎಂದು ಪ್ರಶ್ನಿಸಿದೆ.

ಜೆಡಿಎಸ್‌‍ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್‌‍ ಬಿಡುವ ಮುನ್ನ ಸಿದ್ದರಾಮಯ್ಯ ಶುರು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್‌‍, ರಾಜ್ಯದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ಹಗರಣಗಳಿಂದ ದೇಶವ್ಯಾಪಿ ಕಾಂಗ್ರೆಸ್‌‍ ಮುಜುಗರಕ್ಕೀಡಾಗುತ್ತಲೇ ಇದೆ. ಆ ಮುಜುಗರದಲ್ಲಿ ಸಿದ್ದು ಸರ್ಕಾರದ್ದು ಸಿಂಹಪಾಲು ಎಂದು ಟೀಕಿಸಿದೆ.

ವಾಲೀಕಿ ನಿಗಮ, ಮುಡಾ, ಪರಿಶಿಷ್ಟರ ಮೀಸಲು ಹಣ ಲೂಟಿ, ಅಬಕಾರಿ ಹಗರಣ ಸೇರಿ ಲಂಚಾವತಾರದಲ್ಲಿ ದಾಖಲೆ ಬರೆದಿರುವ ಸರ್ಕಾರದಲ್ಲಿ, ದಿನಕ್ಕೊಂದರ ಲೆಕ್ಕದಲ್ಲಿ ಹೊರ ಬರುತ್ತಿರುವ ಹಗರಣಗಳು ಹೈಕಮಾಂಡ್‌ ನಾಯಕರನ್ನೂ ಹೈರಾಣ ಮಾಡಿವೆ. ಹಸ್ತಿನಾವತಿಯಲ್ಲೂ ಇವರ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ ಎಂದು ಲೇವಡಿ ಮಾಡಿದೆ.

50:50 ಅನುಪಾತದ ಲೆಕ್ಕದಲ್ಲಿ ನಡೆದ ಅಧಿಕಾರ ಸೂತ್ರ ಬಿಗಡಾಯಿಸಿದ್ದು, ಕುರ್ಚಿ ಆಕಾಂಕ್ಷಿಗಳು ದೆಹಲಿಯಾತ್ರೆ ಜೊತೆಗೆ ಗುಪ್‌್ತ ಗುಪ್‌್ತ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಜೆಡಿಎಸ್‌‍ ಆರೋಪಿಸಿದೆ.

RELATED ARTICLES

Latest News