ಮೈಸೂರು,ಡಿ.1- ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಬರೋಬ್ಬರಿ 1,84,47,361 ರೂ. ಕಾಣಿಕೆ ಸಂಗ್ರಹವಾಗಿದೆ . ನಂಜುಂಡೇಶ್ವರನ ದೇಗುಲದಲ್ಲಿ ಪ್ರತಿ ಹುಣ್ಣಿಮೆಗೆ ಒಮೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿಯೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಈ ಬಾರಿ ನಂಜುಂಡನಿಗೆ ಕೋಟ್ಯಂತರ ರೂ. ಕಾಣಿಗೆ ಬಂದಿದೆ.
ನಂಜನಗೂಡು ದೇಗುಲದ ದಾಸೋಹ ಭವನದಲ್ಲಿ ಹುಣಿಕೆ ನಡೆಸಿದ್ದು, ಸುಮಾರು 30ಕ್ಕೂ ಹೆಚ್ಚು ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ. ಹುಂಡಿಯಲ್ಲಿ ಹಣದ ಜೊತೆ 63 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ವಿದೇಶಿ ಕರೆನ್ಸಿಗಳೂ ಸಂಗ್ರಹ:
ಈ ಬಾರಿ ದೇವರ ದರ್ಶನಕ್ಕೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಕಾರಣ ದೇಗುಲದಲ್ಲಿ ಕರೆನ್ಸಿ ನೋಟುಗಳು ಹೆಚ್ಚಾಗಿ ಸಂಗ್ರಹವಾಗಿದೆ. 7 ದೇಶಗಳ ಕರೆನ್ಸಿಗಳು ಕಾಣಿಕೆಯಾಗಿ ಬಂದಿದ್ದು ಅದರಲ್ಲಿ ಅಮೆರಿಕದ 332 ಡಾಲರ್, ಯೂರೋಪ್‌ನ 25 ಯೂರೋಗಳು, ವಿಯೆಟ್ನಾಂನ 2000, ಯಾನ್ ದೇಶದ 5, ಸಿಂಗಪೂರ್ ನ 5 ಡಾಲರ್ ಹಾಗೂ ಫಿಲಿಪೈನ್‌್ಸ ದೇಶದ 50 ಕರೆನ್ಸಿಗಳು ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿದೆ .