Wednesday, February 5, 2025
Homeರಾಷ್ಟ್ರೀಯ | Nationalಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 7 ಮಾವೋವಾದಿಗಳ ಎನ್‌ಕೌಂಟರ್‌

ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 7 ಮಾವೋವಾದಿಗಳ ಎನ್‌ಕೌಂಟರ್‌

Major Success for Security Forces on Chhattisgarh-Telangana Border, 7 Naxals Killed

ಹೈದರಾಬಾದ್,ಡಿ.1– ಮುಲುಗು ಜಿಲ್ಲೆಯ ಎತುರ್ನಗರಂ ಚಲ್ಪಾಕ ಅರಣ್ಯ ಪ್ರದೇಶದಲ್ಲಿ ಇಂದು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.ಮೃತರನ್ನು ಕುರುಸಂ ಮಾಂಗು ಅಲಿಯಾಸ್ ಭದ್ರು ಅಲಿಯಾಸ್ ಪಾಪಣ್ಣ (35), ಏಗೊಳಪು ಮಲ್ಲಯ್ಯ ಅಲಿಯಾಸ್ ಮಧು (43), ಮುಸ್ಸಕಿ ದೇವಳ ಅಲಿಯಾಸ್ ಕರುಣಾಕರ್ (22), ಮುಸ್ಸಕಿ ಜಮುನಾ (23), ಜೈಸಿಂಗ್ (25), ಕಿಶೋರ್ (22) ಮತ್ತು ಕಾಮೇಶ್ (23) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಎರಡು ಎಕೆ 47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸತ್ತವರಲ್ಲಿ ಭದ್ರು ಎಂದು ಕರೆಯಲ್ಪಡುವ ಕುರ್ಸಮ್ ಮಂಗು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದು, ಅವರು ಕಾನೂನುಬಾಹಿರ ಸಿಪಿಐ (ಮಾವೋವಾದಿ)ನ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದರು.

ಈ ಕುರಿತು ಜಿಲ್ಲಾ ಎಸ್ಪಿ ಮುಲುಗು ಎಸ್ಪಿ ಡಾ.ಶಬರೀಶ್, ಏತೂರುನಗರಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್ಕೌಂಟರ್ ನಡೆದಿದೆ ಎಂದು ಹೇಳಿದ್ದಾರೆ.
ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೂಡ ತೆಲಂಗಾಣದಲ್ಲಿ ಭಾರಿ ಎನ್ಕೌಂಟರ್ ನಡೆದಿತ್ತು. ಭದ್ರಾದ್ರಿ-ಮುಳುಗು ಜಿಲ್ಲೆಗಳ ಗಡಿಯಲ್ಲಿರುವ ಗುಂಡಾಲ ಮತ್ತು ಕರಿಕಗುಡೆಂ ಮಂಡಲಗಳಲ್ಲಿ ಭಾರೀ ಎನ್ಕೌಂಟರ್ ನಡೆದಿತ್ತು.

ನೀಲಾದ್ರಿಪೇಟ್ ಅರಣ್ಯ ಪ್ರದೇಶದಲ್ಲಿ ಗ್ರೇಹೌಂಡ್‌್ಸ ಪಡೆಗಳು ಕಾಡಿನಲ್ಲಿ ಕೂಂಬಿಂಗ್ ಕೈಗೆತ್ತಿಕೊಂಡಾಗ ಮಾವೋವಾದಿಗಳ ದಾಳಿಗೆ ಪೊಲೀಸರು ಒಳಗಾಗಿದ್ದರು. ಇದರಿಂದ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದು ಗುಂಡಿನ ದಾಳಿಯಲ್ಲಿ ಲಚ್ಚಣ್ಣ ದಳಕ್ಕೆ ಸೇರಿದ ಆರು ಮಾವೋವಾದಿಗಳು ಹತರಾಗಿದ್ದರು.

RELATED ARTICLES

Latest News