ಬೆಂಗಳೂರು,ಡಿ.2– ಸರ್ಕಾರದ ಯಾವುದೇ ಗೊಡ್ಡು ಬೆದರಿಕೆಗೆ ಒಕ್ಕಲಿಗ ಸಮಾಜ ಹೆದರುವುದಿಲ್ಲ. ಕಾನೂನು ಪಾಲನೆ ಮಾಡುವುದನ್ನು ನಾವು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅದು ನಮ ಸಮುದಾಯ ದವರಿಗೂ ಗೊತ್ತು ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸ್ವಾಮೀಜಿಗಳ ವಿರುದ್ಧ ರಾಜ್ಯ ಸರ್ಕಾರ ದುರದ್ದೇಶ ಪೂರ್ವಕವಾಗಿ ಎಫ್ಐಆರ್ ಹಾಕಿದ್ದಾರೆ. ನಿಮ ಬೆದರಿಕೆಗೆ ಯಾರು ಹೆದರುವುದಿಲ್ಲ. ಸಂವಿಧಾನ, ದೇಶದ ಕಾನೂನಿನ ಬಗ್ಗೆ ಶ್ರೀಗಳಿಗೆ ಅರಿವಿದೆ ಎಂದು ಹೇಳಿದರು.
ಪೊಲೀಸರು ಚಂದ್ರಶೇಖರ ಸ್ವಾಮೀಜಿಗಳ ಹೇಳಿಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ, ಅವರ ಪಕ್ಷದ ಪದಾಧಿಕಾರಿಗಳಿಗೆ ಕಾನೂನು ಯಾವುದೋ ಒಂದು ಸಂದರ್ಭದಲ್ಲಿ ನೆನಪಾಗುತ್ತದೆ. ಅದಕ್ಕಾಗಿ ಮನಬಂದಂತೆ, ಇಷ್ಟ ಬಂದಂತೆ ಸಿಎಂ, ಡಿಸಿಎಂ ಮಾತನಾಡುತ್ತಾರೆ. ಇವರೇ ಈ ರೀತಿ ಮಾತನಾಡಿದರೆ ಇವರ ಕೆಳಗಿರುವವರು ಇನ್ನು ಹೇಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಇವರಿಗೆ ವಕ್ಫ್ ವಿಚಾರದಲ್ಲಿ ಬಾಯಿ ಇಲ್ಲ. ಚಂದ್ರಶೇಖರ ಸ್ವಾಮೀಜಿಗಳು ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹೇಳಿದರು. ನಿಮ ಓಲೈಕೆ ರಾಜಕಾರಣ ಕಂಡು ಮಾತನಾಡಿದರು. ಮಾರನೇ ದಿನ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತೀರಾ? ನೀವು ನಿಜವಾದ ಕಾನೂನು ಪಾಲಕರೇ ಆಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದರು.
ನಿಮ ಹಾಗೆ ಸ್ವಾಮೀಜಿಗಳು ಭಂಡರಲ್ಲ ಕೇಸ್ ಹಾಕಿದೀರ, ಬನ್ನಿ ಹೇಳಿಕೆ ತಗೊಳ್ಳಿ ಎಂದಿದ್ದಾರೆ ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಹೇಳಿದ್ದಿರಿ ಈಗ ಏನಾಯ್ತು? ನಿಮ ಬೆದರಿಕೆಗೆ ಸಮಾಜ ಹೆದರಲ್ಲ, ಕಾನೂನು ಪಾಲನೆ ಏನು ಅಂತ ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.
ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು, ಪೇಪರ್ ಕೊಡಿ ಎಂದು ಹೇಳಿದವರು ಈಗ ಏನು ಹೇಳುತ್ತಿದ್ದಾರೆ? ಸಮುದಾಯ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಕೊಡುತ್ತಾರೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಎಚ್ಚರಿಕೆ ಕೊಟ್ಟರು.
ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ನಿಮ ಬೆದರಿಕೆಗೆ ಸಮಾಜ ಹೆದರುವುದಿಲ್ಲ. ಕಾನೂನು ಪಾಲನೆ ಏನು ಎಂದು ನಮಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ಗೆ ಶೋಕಾಸ್ ನೊಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ವರಿಷ್ಠರು ನೊಟೀಸ್ ಕೊಟ್ಟಿದ್ದಾರೆ. ಸಂಬಂಧಪಟ್ಟವರು ನೊಟೀಸ್ ಗೆ ಉತ್ತರ ಕೊಡಲಿದ್ದಾರೆ. ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಒಗ್ಗಟ್ಟು, ಶಿಸ್ತು ಕಾಪಾಡಿಕೊಳ್ಳೋದು ಎಲ್ಲರಿಗೂ ಅನ್ವಯ ಆಗುತ್ತದೆ. ನೊಟೀಸ್ ಗೆ ಸಂಬಂಧಪಟ್ಟವರು ಉತ್ತರಿಸಲಿದ್ದಾರೆ ಎಂದರು.