Friday, December 27, 2024
Homeರಾಷ್ಟ್ರೀಯ | Nationalಬಾಂಗ್ಲಾದಲ್ಲಿ ಹತ್ಯಾಕಾಂಡದ ಮಾಸ್ಟರ್‌ಮೈಂಡ್‌ ಯೂನಸ್‌‍ : ಶೇಖ್‌ ಹಸೀನಾ

ಬಾಂಗ್ಲಾದಲ್ಲಿ ಹತ್ಯಾಕಾಂಡದ ಮಾಸ್ಟರ್‌ಮೈಂಡ್‌ ಯೂನಸ್‌‍ : ಶೇಖ್‌ ಹಸೀನಾ

Sheikh Hasina calls Muhammad Yunus mastermind of mass killings in Bangladesh

ನವದೆಹಲಿ,ಡಿ.5- ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯಾಕಾಂಡದ ಮಾಸ್ಟರ್‌ಮೈಂಡ್‌ ಪ್ರಧಾನಿ ಯೂನಸ್‌‍ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ. ಪ್ರಧಾನಿ ಹ್ದುೆಗೆ ರಾಜೀನಾಮೆ ನೀಡಿ ದೇಶದಿಂದ ಫಲಾಯನ ಮಾಡಿದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಅವರು, ಬಾಂಗ್ಲಾ ಪ್ರಧಾನಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಯೂನಸ್‌‍ ಜನಾಂಗೀಯ ಹತ್ಯೆ ನಡೆಸಿದ್ದಾರೆ. ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

1975 ರಲ್ಲಿ ತನ್ನ ತಂದೆ ಶೇಖ್‌ ಮುಜಿಬ್‌‍-ಉರ್‌-ರೆಹಮಾನ್‌ ಹತ್ಯೆಯ ರೀತಿಯಲ್ಲಿಯೇ ಆ.5 ರಂದು ತನ್ನ ಮತ್ತು ತನ್ನ ಸಹೋದರಿ ಶೇಖ್‌ ರೆಹಾನಾ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು . ಯೂನಸ್‌‍ಗೆ ಅಧಿಕಾರದ ಹಸಿವು ಇದೆ, ಆದ್ದರಿಂದಲೇ ಇಂಥಹ ದಾಳಿಯನ್ನು ನಡೆಯಲು ಬಿಟ್ಟಿದ್ದಾರೆಂದು ಹೇಳಿದರು.

ಆಗಸ್ಟ್‌ನಲ್ಲಿ ನಡೆದ ಬೃಹತ್‌ ಸರ್ಕಾರಿ ವಿರೋಧಿ ಪ್ರತಿಭಟನೆಯಿಂದಾಗಿ ರಾಜೀನಾಮೆ ನೀಡಿದ ನಂತರ ಭಾರತದಲ್ಲಿ ಆಶ್ರಯ ಪಡೆದ ನಂತರ ಹಸೀನಾ ಅವರ ಮೊದಲ ಸಾರ್ವಜನಿಕ ಭಾಷಣ ಇದು. ಆ.5 ರಂದು ಬಾಂಗ್ಲಾದೇಶದ ಢಾಕಾದಲ್ಲಿರುವ ತಮ ಅಧಿಕೃತ ನಿವಾಸದ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದ ಅವರು, ಶಸ್ತ್ರಸಜ್ಜಿತ ಪ್ರತಿಭಟನಾಕಾರರನ್ನು ಕಳುಹಿಸಲಾಗಿತ್ತು.

ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರೆ, ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಇಂದು ನನ್ನ ಮೇಲೆ ನರಮೇಧದ ಆರೋಪ ಹೊರಿಸಲಾಗುತ್ತಿದೆ. ವಾಸ್ತವವಾಗಿ, ಯೂನಸ್‌‍ ಯೋಜಿತ ರೀತಿಯಲ್ಲಿ ನರಮೇಧದಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹತ್ಯಾಕಾಂಡದ ಹಿಂದಿನ ಪ್ರಮುಖ ಸಂಚುಕೋರ ಯೂನಸ್‌‍ ಎಂದಿದ್ದಾರೆ.

ಚಿನಯ್‌ ಕೃಷ್ಣ ದಾಸ್‌‍ ಬಂಧನದ ಕುರಿತು ಮಾತನಾಡಿ, ಹಿಂದೂ, ಬೌದ್ಧ, ಕ್ರಿಶ್ಚಿಯನ್‌ ಯಾರನ್ನೂ ಬಿಟ್ಟಿಲ್ಲ, ಹನ್ನೊಂದು ಚರ್ಚ್‌ಗಳನ್ನು ಕೆಡವಲಾಗಿದೆ. ದೇವಾಲಯಗಳು, ಬೌದ್ಧ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳು ಪ್ರತಿಭಟಿಸಿದಾಗ ಅವರನ್ನು ಬಂಧಿಸಲಾಗಿತ್ತು.

RELATED ARTICLES

Latest News