ಇಂಧೋರ್, ಡಿ.5- ಪ್ರಸಕ್ತ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 349 ರನ್ ಸಿಡಿಸುವ ಮೂಲಕ ಟ್ವೆಂಟಿ-20 ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ತಂಡವೆಂಬ ವಿಶ್ವದಾಖಲೆಯನ್ನು ಬರೋಡಾ ತಂಡ ನಿರ್ಮಿಸಿದೆ.
ಇಂಧೋರ್ ನ ಎಮರಾಲ್್ಡ ಪ್ರೌಢಶಾಲೆ ಮೈದಾನದಲ್ಲಿ ಸಿಕ್ಕಿಮ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬರೋಡಾ ಪರ ಭಾನು ಪಾನಿಯಾ (134* ರನ್, 5 ಬೌಂಡರಿ, 15 ಸಿಕ್ಸರ್) ಅವರ ಭರ್ಜರಿ ಶತಕ, ಆರಂಭಿಕ ಆಟಗಾರ ಅಭಿಮನ್ಯು ಸಿಂಗ್ ರಜಪೂತ್ (53 ರನ್, 4 ಬೌಂಡರಿ, 5 ಸಿಕ್ಸರ್), ಶಿವಾಲಿಕ್ ಶರ್ಮಾ (55 ರನ್, 3 ಬೌಂಡರಿ, 6 ಸಿಕ್ಸರ್) ಹಾಗೂ ವಿಷ್ಣು ಸೋಲಾಂಕಿ (50 ರನ್, 2 ಬೌಂಡರಿ, 6 ಸಿಕ್ಸರ್) ಅವರುಗಳ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ದಾಖಲೆಯ 349 ರನ್ ಗಳಿಸಿತು.
ಟಿ20-ಐ ನಲ್ಲಿ ಅತಿ ಹೆಚ್ಚು ರನ್:
*ಜಿಂಬಾಬ್ವೆ- 344/4- ಗಂಭೀಯಾ ವಿರುದ್ಧ- 2024
- ನೇಪಾಳ- 314/3- ಮಾಂಗೋಲಿಯಾ ವಿರುದ್ಧ- 2023
- ಭಾರತ- 297/6- ಬಾಂಗ್ಲಾದೇಶ ವಿರುದ್ಧ- 2024
- ಎಸ್ಆರ್ಎಚ್- 287/3- ಆರ್ ಸಿಬಿ ವಿರುದ್ಧ- 2024
- ಜಿಂಬಾಬ್ವೆ- 286/5- ಸೆಲ್ಲೆಚಿಲ್ ವಿರುದ್ಧ- 2024
- ಭಾರತ- 283/1- ದಕ್ಷಿಣ ಆಫ್ರಿಕಾ ವಿರುದ್ಧ- 2024
ಬರೋಡಾಗೆ 263 ರನ್ ಜಯ:
350 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಸಿಕ್ಕಿಮ್ ತಂಡದ ಬ್ಯಾಟರ್ ಗಳು ಬರೋಡಾ ಬೌಲಿಂಗ್ ದಾಳಿ ಎದುರು ನಿಗದಿತ 20 ಓವರ್ ಗಳಲ್ಲಿ 86 ರನ್ ಗಳಿಗೆ ಸರ್ವಪತನ ಕಂಡು 263 ರನ್ ಗಳ ಅಂತರದಿಂದ ಸೋಲು ಕಂಡಿದೆ. ಬರೋಡಾ ಪರ ನಿನಾದ್ ರತ್ವಾ, ಮಹೇಶ್ ಪತಿಯಾ ತಲಾ ಎರಡು ವಿಕೆಟ್ ಪಡೆದರೆ, ಸಿಕ್ಕಿಮ್ ಪರ ರಾಬಿನ್ (20ರನ್) ಗರಿಷ್ಠ ಸ್ಕೋರರ್ ಎನಿಸಿದರು.