ಬೆಂಗಳೂರು,ಡಿ.6– ಬರೊಬ್ಬರಿ 694 ಕೋಟಿ ರೂ.ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.
ಇದೇ 25ಕ್ಕೆ ವಿವಿಧ ಕ್ಷೇತ್ರಗಳ ಟೆಂಡರ್ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ನಗರದಲ್ಲಿನ ರಸ್ತೆಗುಂಡಿ ಮುಚ್ಚಲು ಹೊಸ ಟೆಂಡರ್ ಕರೆಯಲು ಪಾಲಿಕೆ ಸಿದ್ದವಾಗಿದೆ.
ರಸ್ತೆ ಗುಂಡಿ ಮುಚ್ಚಲು ವಲಯವಾರು ಟೆಂಡರ್ ಕರೆಯಲು ಸಜ್ಜಾಗಿರುವ ಪಾಲಿಕೆ ಬಿಬಿಎಂಪಿ ಅನುದಾನ ದಲ್ಲೇ 389 _ಕೀ.ಮೀ ಉದ್ದದ ರಸ್ತೆ ಅಭಿವದ್ಧಿ ಪಡಿಸಲು ಟೆಂಡರ್ ಕರೆಯಲು ತೀರ್ಮಾನಿಸಿದೆ.
ಐದು ತಿಂಗಳೊಳಗೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವ ಷರತ್ತಿಗೊಳಪಟ್ಟು ನಗರದ ಒಂಬತ್ತು ವಲಯಗಳಲ್ಲಿನ ಕಾಮಗಾರಿಗೆ 694 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ.
ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಷ್ಟು ಅನುದಾನ;
1) ಮಹದೇವಪುರದ 82 ಕಿ.ಮೀ ಉದ್ದದ 30_ರಸ್ತೆಗಳ ಅಭಿವೃದ್ಧಿಗೆ 140 ಕೋಟಿ
2) ಯಲಹಂಕದ 69.45 ಕಿ.ಮೀ ಉದ್ದದ 36 ರಸ್ತೆಗಳ ಅಭಿವೃದ್ಧಿಗೆ 97.50ಕೋಟಿ
3) ಪೂರ್ವ ವಲಯದ 76 ಕಿ.ಮೀ ಉದ್ದದ 51_ರಸ್ತೆಗಳಿಗೆ 95_ ಕೋಟಿ
4) ದಕ್ಷಿಣ ವಲಯದ 35 ಕಿ.ಮೀ ಉದ್ದದ 30 ರಸ್ತೆಗಳಿಗೆ 95_ಕೋಟಿ
5) ಆರ್ ಆರ್ ನಗರ 16 ರಸ್ತೆಗಳಿಗೆ 95 ಕೋಟಿ
6) ಪಶ್ಚಿಮ 19ರಸ್ತೆಗಳಿಗೆ 71.50 ಕೋಟಿ
7) ಬೊಮನಹಳ್ಳಿ 22_ರಸ್ತೆಗಳಿಗೆ 34.60 ಕೋಟಿ
8) ಕೆ.ಆರ್ ಪುರ 8 ರಸ್ತೆಗಳಿಗಾಗಿ 19.55 35 ಕೋಟಿ
9) ದಾಸರಹಳ್ಳಿ 6 ರಸ್ತೆಗಳ ಅಭಿವೃದ್ಧಿಗಾಗಿ 14.10 20 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ
ಒಟ್ಟು 389.68 ಕಿ.ಮೀ ಉದ್ದದ ರಸ್ತೆಗಳನ್ನು 694_ ಕೋಟಿ ವೆಚ್ಚದಲ್ಲಿ ಅಭಿವದ್ಧಿಪಡಿಸ