ಬೆಂಗಳೂರು, ಡಿ.6- ರಾಹುಲ್ ಗಾಂಧಿ ಒಬ್ಬ ಮಹಾನ್ ದೇಶ ಭಕ್ತ. ಅವರನ್ನು ದೇಶದ್ರೋಹಿ ಎನ್ನುವವರೆ ನಿಜವಾದ ದೇಶದ್ರೋಹಿಗಳು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಂವಿಧಾನ ರಕ್ಷಣೆಯಾಗಬೇಕು, ಪ್ರಜಾಪ್ರಭುತ್ವ ರಕ್ಷಣೆಯಾಗಬೇಕು ಎಂದು ಹೋರಾಟ ನಡೆಸುತ್ತಿರುವ ವ್ಯಕ್ತಿ. ಅಂತಹವರನ್ನು ದೇಶದ್ರೋಹಿ ಎಂದು ಕರೆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಮತ್ತೊಂದು ಬಾಣಂತಿ ಸಾವಿಗೆ ಕಾರಣಗಳೇನು ಎಂದು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿನ ಸಾವುಗಳ ಬಗ್ಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಔಷಧ ನಿಯಂತ್ರಕರನ್ನು ಅಮಾನತು ಗೊಳಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಐದನೇ ಸಾವಿಗೆ ವೈದ್ಯರ ನಿರ್ಲಕ್ಷ್ಯವೋ ಅಥವಾ ಔಷಧಿ ಗುಣಮಟ್ಟ ಕಾರಣವೋ ಎಂಬುದನ್ನು ಪರಿಶೀಲನೆ ನಡೆಸ ಲಾಗುವುದು. ಬಳ್ಳಾರಿಯ ಘಟನೆಗಳ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇದೆ ಎಂದು ಹೇಳಿದರು.