Thursday, December 19, 2024
Homeರಾಜ್ಯಆನ್‌ಲೈನ್‌ ಗೇಮಿಂಗ್‌ನಲ್ಲಿ 3 ಕೋಟಿ ಕಳೆದು ಕೊಂಡ ಸಾಫ್ಟ್ ವೇರ್ ಇಂಜಿನಿಯರ್

ಆನ್‌ಲೈನ್‌ ಗೇಮಿಂಗ್‌ನಲ್ಲಿ 3 ಕೋಟಿ ಕಳೆದು ಕೊಂಡ ಸಾಫ್ಟ್ ವೇರ್ ಇಂಜಿನಿಯರ್

ಬೆಂಗಳೂರು,ಡಿ.7- ಆನ್‌ಲೈನ್‌ ಗೇಮಿಂಗ್‌ನಲ್ಲಿ ಸಾಸಾಫ್ಟ್ ವೇರ್ಇಂಜಿನಿಯ ರೊಬ್ಬರು 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಕಳೆದುಕೊಂಡು ಈಗ ಪೊಲೀಸ್‌‍ ಠಾಣೆಯ ಮೆಟ್ಟಿಲೇರಿದ್ದಾರೆ.
ನಗರದ ನಿವಾಸಿ ನಿಶಾಂತ್‌ ಶ್ರೀವಾತ್ಸವ್‌ ಎಂಬುವರು ಪ್ಯಾಕೆಟ್‌ 52 ಆನ್‌ಲೈನ್‌ ಗೇಮಿಂಗ್‌ನಲ್ಲಿ ತೊಡಿಗಿಸಿಕೊಂಡು ಹಣ ಕಳೆದುಕೊಂಡಿದ್ದು, ಈ ಆ್ಯಪ್‌ ಅನ್ನು ನಿರ್ವಹಣೆ ಮಾಡುವ ನಿರ್ದೇಶ್‌ ನೆಟ್‌ವರ್ಕ್‌ ಪ್ರೈವೆಟ್‌ ಲಿಮಿಟೆಡ್‌ ಪಾರದರ್ಶಕತೆ ಯನ್ನು ಹೊಂದಿಲ್ಲ ಮತ್ತು ನಷ್ಟ ಪರಿಹಾರವನ್ನು ಸಮರ್ಪಕವಾಗಿ ಪಾವತಿಸುತ್ತಿಲ್ಲ ಎಂದು ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್‌‍ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಐಟಿ ಕಾಯ್ದೆ ಸೆಕ್ಷನ್‌ 66 ಹಾಗೂ ಭಾರತೀಯ ನ್ಯಾಯಸಂಹಿತೆ ಸೆಕ್ಷನ್‌ 318 (2) ರಡಿ ಪ್ರಕರಣ ದಾಖಲಾಗಿದೆ. ಪ್ಯಾಕೆಟ್‌ ಆ್ಯಪ್‌ನ ಸಿಇಒ ಮತ್ತು ಗೇಮ್ಸೌ ಕ್ರಾಫ್‌್ಟ ಕಂಪನಿಯ ಸಿಇಒ ಗಳನ್ನು ಆರೋಪಿಗಳೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಿಶಾಂತ್‌ ಶ್ರೀವಾತ್ಸವ್‌ ನೀಡಿರುವ ದೂರಿನ ಅನುಸಾರ ನಿರ್ದೇಶ್‌ ನೆಟ್‌ವರ್ಕ್‌್ಸ ನಿರ್ವಹಣೆ ಮಾಡುವ ಪ್ಯಾಕೆಟ್‌ 52 ಗೇಮಿಂಗ್‌ ವೇದಿಕೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ಚಟುವಟಿಕೆಗಳು ನಡೆದಿವೆ. ಇದರಿಂದಾಗಿ ತಮಗೆ 3 ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟವಾಗಿದೆ. ಇದರ ಜೊತೆಗೆ ಗೇಮ್ಸೌ ಕ್ರಾಫ್‌್ಟ ಸಿಇಒ ಮತ್ತು ಇತರರ ತಂಡವೂ ತಮಗಾದ ವಂಚನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ 26 ರಂದು ತಮಗೆ ಪ್ಯಾಕೆಟ್‌ 52 ಆ್ಯಪ್‌ನಲ್ಲಿ ಅಕೌಂಟ್‌ ಐಡಿಯನ್ನು ಸೃಷ್ಟಿಸಲಾಯಿತು. ಕಳೆದ ಡಿಸೆಂಬರ್‌ನಲ್ಲಿ ಬಹಳಷ್ಟು ವಂಚನೆ ಚಟುವಟಿಕೆಗಳ ಬಗ್ಗೆ ಆ್ಯಪ್‌ನ ಬಳಕೆದಾರರು ದೂರುಗಳನ್ನು ಹೇಳಲಾರಂಭಿಸಿದರು. ಇದನ್ನು ಪ್ಯಾಕೆಟ್‌ 52 ಒಪ್ಪಿಕೊಂಡಿದ್ದು, ತಮ ಆನ್‌ಲೈನ್‌ ವೇದಿಕೆಯಲ್ಲಿ ವಂಚನೆಗಳಾಗುತ್ತಿವೆ ಎಂದು ತಿಳಿಸಿದೆ. ಆದರೆ ಯಾವ ರೀತಿಯ ವಂಚಕ ಚಟುವಟಿಕೆಗಳು ಮತ್ತು ಅದರ ಸ್ವರೂಪಗಳು ಎಂಬುದರ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಲು ವಿಫಲವಾಗಿದೆ.

ಈ ವಂಚನೆಯ ಚಟುವಟಿಕೆಗಳು ಆಟಗಾರರಿಂದ ನಡೆಯುತ್ತಿವೆಯೇ ಅಥವಾ ಆ್ಯಪ್‌ನ ಮೂಲದಲ್ಲಿಯೇ ಇವೆಯೇ ಎಂಬುದು ಗೊತ್ತಾಗುತ್ತಿಲ್ಲ. ನಿರ್ದೇಶ್‌ ನೆಟ್‌ವರ್ಕ್‌್ಸ ಪ್ರೈವೆಟ್‌ ಲಿಮಿಟೆಡ್‌ ಇಂತಹ ಚಟುವಟಿಕೆಯ ವಿಷಯದಲ್ಲಿ ಪಾರದರ್ಶಕತೆಯ ಕೊರತೆಯನ್ನು ಪಾಲಿಸುತ್ತಿದೆ ಮತ್ತು ಸಂತ್ರಸ್ತ ಬಳಕೆದಾರರಿಗೆ ನನ್ನನ್ನೂ ಸೇರಿದಂತೆ ಅನೇಕರಿಗೆ ನೀಡುತ್ತಿರುವ ಪರಿಹಾರ ಅಲ್ಪಪ್ರಮಾಣದ್ದಾಗಿದೆ ಎಂದು ಅವರು ದೂರಿದ್ದಾರೆ. ತಾನು ಗಮನಿಸಿದಂತೆ ಪ್ಯಾಕೆಟ್‌ 52 ವೇದಿಕೆಯಲ್ಲಿ ಸಣ್ಣ ಪ್ರಮಾಣದ ಮೊತ್ತಗಳಲ್ಲಿ ಗೆಲುವು ಸಿಗುತ್ತಿದೆ. ಆದರೆ ಕಳೆದುಕೊಳ್ಳುವುದು ಭಾರಿ ಪ್ರಮಾಣದಲ್ಲಿರುತ್ತದೆ ಮತ್ತು ನಿಯಮಿತವಾಗಿ ಕೆಲವು ವ್ಯಕ್ತಿಗಳು ನಿರಂತರವಾಗಿ ದೊಡ್ಡ ಪ್ರಮಾಣವನ್ನು ಗೆಲ್ಲುತ್ತಿರುತ್ತಾರೆ ಎಂದು ಅವರು ದೂರಿದ್ದಾರೆ.

ಈ ಕುರಿತು ದೂರು ನೀಡಿದಾಗ ಪ್ಯಾಕೆಟ್‌ 52 ಗ್ರಾಹಕರ ಬೆಂಬಲಿತ ಸಹಾಯವಾಣಿ, ಸಣ್ಣ ಟೇಬಲ್‌ಗಳಲ್ಲಿ ಆಟವಾಡಿ, ಆಗ ಗೆಲುವಿನ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಸಲಹೆ ನೀಡಿತ್ತು. ಸಣ್ಣ ಟೇಬಲ್‌ಗಳ 2 ಕ್ಲಬ್‌ನಲ್ಲಿ 9 ಜನ ಕಾಣಿಸಿಕೊಂಡರು. ಇದರಲ್ಲಿಯೂ ಕೆಲವು ಅಹಜವಾದ ಚಟುವಟಿಕೆಗಳು ಕಂಡುಬಂದವು. ಹೀಗಾಗಿ ಸಣ್ಣ ಟೇಬಲ್‌ಗಳಲ್ಲಿ ಆಟಗಳೂ ಕೂಡ ತೃಪ್ತಿದಾಯಕವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ಯಾಕೆಟ್‌ 52 ವೇದಿಕೆ ಹ್ಯಾಂಡ್‌ ಹಿಸ್ಟರಿ ಅಂಶವನ್ನು ತೆಗೆದುಹಾಕಿತ್ತು. ಇದರಿಂದಾಗಿ ಆಟಗಾರರ ಹಿಂದಿನ ಮಾಹಿತಿಗಳು ತಿಳಿಯುತ್ತಿರಲಿಲ್ಲ. ಈ ಕುರಿತ ದತ್ತಾಂಶಗಳನ್ನು ಕೇಳಿದಾಗ ಕಂಪನಿ ನೀಡಲು ನಿರಾಕರಿಸಿದೆ. ಇದರಿಂದ ಯಾರು, ಯಾವ ರೀತಿಯ ಆಟವಾಡುತ್ತಿದ್ದಾರೆ, ಎಷ್ಟು ಗೆಲುವು ಕಂಡಿದ್ದಾರೆ, ಸೋಲು ಎಷ್ಟಾಗಿದೆ ಎಂಬ ಮಾಹಿತಿಯ ಪಾರದರ್ಶಕತೆಯ ಕೊರತೆಯಿತ್ತು ಮತ್ತು ಅನೈತಿಕ ಅಭ್ಯಾಸಗಳು ಸಹಜವಾಗಿದ್ದವು ಎಂದು ವಿವರಿಸಿದ್ದಾರೆ.

ಆಟದಲ್ಲಿ ಯಾವುದೇ ಠೇವಣಿ ಮತ್ತು ಸಮಯದ ಮಿತಿಯಿಲ್ಲ. ಹಣ ಹಿಂಪಡೆಯುವಿಕೆಗೆ ನಿರಂಕುಶ ನಿರ್ಬಂಧತೆ ಇದೆ ಮತ್ತು ನಕಲಿ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲಾಗುತ್ತಿದೆ. ಹೀಗಾಗಿ ಆಟಗಾರರನ್ನು ಶೋಷಣೆ ಮಾಡುತ್ತಿರುವುದು, ನೈತಿಕ ಗುಣದರ್ಜೆಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಅವರು ದೂರಿದ್ದಾರೆ. ಈ ರೀತಿಯ ದೂರುಗಳು ಪುನರಾವರ್ತನೆಯಾಗುತ್ತಿದೆ. ಪ್ಯಾಕೆಟ್‌ 52 ಹಾಗೂ ಗೇಮ್ಸೌ ಕ್ರಾಫ್‌್ಟ ಸಿಇಒಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.

RELATED ARTICLES

Latest News