Wednesday, December 18, 2024
Homeಜಿಲ್ಲಾ ಸುದ್ದಿಗಳು | District Newsಘಾಟಿ ಸುಬ್ರಹಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕುಲ್ದೀಪ್‌ ಸೇನ್‌

ಘಾಟಿ ಸುಬ್ರಹಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕುಲ್ದೀಪ್‌ ಸೇನ್‌

Cricketer Kuldeep Sen offers special prayers to Ghati Subramanya Swamy Temple

ದೊಡ್ಡಬಳ್ಳಾಪುರ,ಡಿ.9- ಪಂಜಾಬ್‌ ಕಿಂಗ್ಸ್ ನ ವೇಗಿ ಬೌಲರ್‌ ಕುಲದೀಪ್‌ ರಾಂಪಾಲ್‌ ಸೇನ್‌ ಅವರು ಘಾಟಿ ಸುಬ್ರಹಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಂತಾರಾಷ್ಟ್ರೀಯ ಆಟಗಾರರಾಗಿರುವ ಮಧ್ಯಪ್ರದೇಶದ ಕುಲದೀಪ್‌ ರಾಂಪಾಲ್‌ ಸೇನ್‌ ಅವರು ಪ್ರಸ್ತುತ ತಮಿಳುನಾಡು ದೇಶೀಯ ಕ್ರಿಕೆಟ್‌ನಲ್ಲಿ ಮತ್ತು( ಐಪಿಎಲ್‌ )ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಂಜಾಬ್‌ ಕಿಂಗ್‌್ಸಗಾಗಿ ಆಡುತ್ತಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಯ್ಕೆಗೂ ಮುನ್ನ ಘಾಟಿ ಸುಬ್ರಹಣ್ಯ ದೇವರಿಗೆ ಹರಕ್ಕೆ ಹೊತ್ತಿದ್ದ ಕುಲ್ದೀಪ್‌ ಸೇನ್‌ ಅವರು, ಆಯ್ಕೆ ನಂತರ ಇಂದು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.

ಈ ವೇಳೆ ಅಖಿಲ ಕರ್ನಾಟಕ ಬ್ರಾಹಣ ಅರ್ಚಕರ ಮತ್ತು ಪುರೋಹಿತರ ಪರಿಷತ್‌ ವಿದ್ವಾನ್‌ ಎಸ್‌‍.ನವೀನ್‌, ದೇವಾಲಯದ ಸಿಬ್ಬಂದಿ ನಂಜಪ್ಪ, ಕಂಚಿ ವೆಂಕಟೇಶ್‌ ಮತ್ತಿತರರಿದ್ದರು.

RELATED ARTICLES

Latest News