ಬೆಂಗಳೂರು, ಅ. 31- ನಗರದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಬಯೋಮೆಟ್ರಿಕ್ ವಂಚನೆ ವ್ಯಾಪಕವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎ.ಇ.ಪಿ.ಎಸ್ ಸಾಧನ(ಆಧಾರ್ ಎನೇಬಲ್ ಪಾವತಿ ವ್ಯವಸ್ಥೆ)ಯನ್ನು ಗ್ರಾಮೀಣ ಪ್ರದೇಶದ ಮತ್ತು ಅನಕ್ಷರಸ್ಥರಿಗೆ ಅನುಕೂಲ ಮಾಡಲು ಯಾವುದೇ ರೀತಿಯ ಒಟಿಪಿ, ಪಾಸ್ ವಾರ್ಡ್, ಪಿನ್ ಕೋಡ್ ಮೊಬೈಲ್ ನಂಬರ್, ನೆರವು ಇಲ್ಲದೆ ಹಣ ಪಡೆಯವು ಹಾಗೂ ವರ್ಗಾವಣೆ ಮಾಡಲು ಸರ್ಕಾರ ಈ ಸೇವೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ನನ್ನ ಶಕ್ತಿಯ ಮೂಲ ನನ್ನ ಅಜ್ಜಿ : ರಾಹುಲ್ ಗಾಂಧಿ
ಇದರಲ್ಲಿ ಕೇವಲ ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ಬಳಸಿ ವ್ಯವಹಾರ ಮಾಡಲಾಗುತ್ತದೆ. ಇದಕ್ಕಾಗಿ ಅನೇಕ ಕಡೆ ಮೈಕ್ರೋ ಎಟಿಎಂಗಳನ್ನೂ ಅಳವಡಿಸಲಾಗಿದೆ. ಇದನ್ನು ದುರೊಪಯೋಗ ಪಡೆಸಿಕೊಂಡಿರುವ ಸೈಬರ್ ವಂಚಕರು ಸರ್ಕಾರದ ನೊಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಕೃತ ವೆಬ್‍ಸೈಟ್ ಆದ ಕಾವೇರಿ ವೆಬ್‍ಸೈಟ್ ಮುಖಂತರ ಬಯೋಮೆಟ್ರಿಕ್ ಗಳನ್ನೂ ಸ್ಕ್ಯಾನ್ ಮಾಡಿಕೊಂಡು ತಾಂತ್ರಿಕವಾಗಿ ಬದಲಾಯಿಸಿ, ಸಿಲಿಕಾನ್ ಪೇಪರ್ ಮೇಲೆ ಅಚ್ಚು ಹಾಕಿ ಮೈಕ್ರೋ ಎಟಿಎಂಗಳ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ಕಳೆದ ಮೂರೂ ನಾಲ್ಕು ತಿಂಗಳಿನಲ್ಲಿ 116 ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ವಿವರಿಸಿದರು.
ಏಕೆಂದರೆ, ಈ ವಂಚನೆಯಲ್ಲಿ ಯಾವುದೇ ರೀತಿಯ ಒಟಿಪಿ, ಪಾಸ್ ವಾರ್ಡ್ ಇಲ್ಲದೆ ವಂಚನೆ ಆಗುವುದರಿಂದ ವಂಚಿತರ ಗಮನಕ್ಕೆ ಬರುವುದಿಲ್ಲ, ಕಾವೇರಿ ಪೋಟ್ರಲ್‍ನಲ್ಲಿ ಲ್ಯಾಂಡ್ ರೆಕಾಡ್ಸ್ ಮಾಹಿತಿ ಪಡೆದು ಬಯೋಮೆಟ್ರಿಕ್ ಮತ್ತು ಆಧಾರ್ ನಂಬರ್ ಬಳಸಿ ಮೈಕ್ರೋ ಎಟಿಎಂ ಮೂಲಕ ಹಣ ಪಡೆದು ವಂಚನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಪ್ರಕರಣವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿ ಗಮನಕ್ಕೆ ತರಲಾಗಿದೆ. ಬಯೋಮೆಟ್ರಿಕ್ ಮತ್ತು ಆಧಾರ್ ಸಂಖ್ಯೆ ಯಾರಿಗೂ ಕಾಣದಂತೆ ಮಾಡಲು ಸಲಹೆ ನೀಡಿದ್ದೇವೆ ಎಂದು ಆಯುಕ್ತರು ತಿಳಿಸಿದರು.