Friday, December 13, 2024
Homeಬೆಂಗಳೂರುಸುಳ್ಳು ಕೇಸ್ ಹಾಕಿ ಪತ್ನಿ - ಸಂಬಂಧಿಕರಿಂದ ಕಿರುಕುಳ, ಮನನೊಂದ ಮ್ಯಾನೇಜರ್‌ ಆತಹತ್ಯೆ

ಸುಳ್ಳು ಕೇಸ್ ಹಾಕಿ ಪತ್ನಿ – ಸಂಬಂಧಿಕರಿಂದ ಕಿರುಕುಳ, ಮನನೊಂದ ಮ್ಯಾನೇಜರ್‌ ಆತಹತ್ಯೆ

Wife and relatives file false case, manager commits suicide

ಬೆಂಗಳೂರು,ಡಿ.10- ವಿನಾಃಕಾರಣ ಪತ್ನಿ ಹಾಗೂ ಆಕೆಯ ಸಂಬಂಧಿಕರು ಸುಳ್ಳು ಪ್ರಕರಣ ದಾಖಲಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದರಿಂದ ಮನನೊಂದು ಪ್ರತಿಷ್ಠಿತ ಕಂಪನಿವೊಂದರ ಮ್ಯಾನೇಜರ್‌ ಆತಹತ್ಯೆಗೆ ಶರಣಾಗಿರುವ ಘಟನೆ ಮಾರತ್ತಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೆಸ್ಟಿಜ್‌ ಶಾಂತಿ ನಿಕೇತನದಲ್ಲಿರುವ ಮಹೀಂದ್ರ ಕಂಪನಿಯ ಆರ್ಟಿಫಿಸಿಯಲ್‌ ಇಂಟಲಿಜನ್‌್ಸ ವಿಭಾಗದ ಡಿಜಿಎಂ ಸುಭಾಷ್‌ಅತುಲ್‌ (34) ಆತಹತ್ಯೆಗೆ ಶರಣಾದವರು.ಮುನ್ನೆಕೊಳ್ಳಾಲದ ಮಂಜುನಾಥ್‌ ಲೇಔಟ್‌ನ ಡೆಲ್ಫೀನಿಯಂ ಅರ್ಪಾಮೆಂಟ್‌ನ ಮೂರನೇ ಮಹಡಿಯ ಪ್ಲಾಟ್‌ನಲ್ಲಿ ಅತುಲ್‌ ಸುಭಾಷ್‌ಅವರು ನೆಲೆಸಿದ್ದರು. ಇವರು ಮೂಲತಃ ಉತ್ತರ ಪ್ರದೇಶದವರು.

ನಿನ್ನೆ ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಅವರು ತಮ ಪ್ಲಾಟ್‌ನ ಬೆಡ್‌ ರೂಮ್‌ನಲ್ಲಿ ಪ್ಯಾನಿಗೆ ಹಗ್ಗದಿಂದ ನೇಣುಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದಾಗಿ ಹೊಯ್ಸಳ ಕಂಟ್ರೋಲ್‌ ರೂಮ್‌ಗೆ ದೂರು ಬಂದಿದೆ.ಹೊಯ್ಸಳ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮನೆಯ ಒಳಗಿನಿಂದ ಲಾಕ್‌ಆಗಿರುವುದು ಗಮನಿಸಿ ತಕ್ಷಣ ಸ್ಥಳೀಯರ ಸಮುಖದಲ್ಲಿ ಡೋರ್‌ ಲಾಕ್‌ ಒಡೆದು ಒಳಗೆ ಹೋಗಿ ನೋಡಿದಾಗ ಮ್ಯಾನೇಜರ್‌ ಮೃತಪಟ್ಟಿರುವುದು ಕಂಡು ಬಂದಿದೆ.

ಉತ್ತರ ಪ್ರದೇಶದಲ್ಲಿರುವ ಅತುಲ್‌ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಅತುಲ್‌ ಅವರ ಸಹೋದರ ಬಿಕಾಸ್‌‍ಕುಮಾರ್‌ ಅವರು ನಗರಕ್ಕೆ ಬಂದು ತನ್ನ ಸಹೋದರನ ಸಾವಿಗೆ ಆತನ ಪತ್ನಿ, ಪತ್ನಿಯ ತಾಯಿ, ಸಹೋದರ, ಚಿಕ್ಕಪ್ಪ ಕಾರಣ. ವಿನಾಃಕಾರಣ ತನ್ನ ಸಹೋದರನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಪ್ರಕರಣಗಳ ಸೆಟಲ್‌ಮೆಂಟ್‌ಗಾಗಿ ಮೂರು ಕೋಟಿ ಹಣವನ್ನು ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಮನನೊಂದು ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾರತ್ತ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News