Friday, December 27, 2024
Homeಮನರಂಜನೆಬೀದಿಗೆ ಬಂದ ಮೋಹನ್‌ಬಾಬು ಕೌಟುಂಬಿಕ ಕಲಹ, ಪತ್ರಕರ್ತನ ಮೇಲೆ ಕೈ ಮಾಡಿದ ಹಿರಿಯ ನಟ

ಬೀದಿಗೆ ಬಂದ ಮೋಹನ್‌ಬಾಬು ಕೌಟುಂಬಿಕ ಕಲಹ, ಪತ್ರಕರ್ತನ ಮೇಲೆ ಕೈ ಮಾಡಿದ ಹಿರಿಯ ನಟ

Differences in actor Mohan Babu's family surface

ಹೈದರಾಬಾದ್‌, ಡಿ 10 (ಪಿಟಿಐ) ಕೌಟುಂಬಿಕ ಕಲಹದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಪತ್ರಕರ್ತನ ಮೇಲೆ ತೆಲುಗಿನ ಹಿರಿಯ ನಟ ಮೋಹನ್‌ ಬಾಬು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಜಲಪಲ್ಲಿಯಲ್ಲಿರುವ ಅವರ ಮನೆಗೆ ಮೋಹನ್‌ಬಾಬು ಕಿರಿಯ ಪುತ್ರ ಮನೋಜ್‌ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಅವರನ್ನು ಮನೆಯಿಂದ ಹೊರ ದಬ್ಬುತ್ತಾರೆ. ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಖಾಸಗಿ ಚಾನೆಲ್‌ನ ವಿಡಿಯೋ ಪತ್ರಕರ್ತನ ಮೇಲೆ ಮೋಹನ್‌ಬಾಬು ಹಲ್ಲೆ ನಡೆಸಿದ್ದಾರೆ.

ಮೋಹನ್‌ ಬಾಬು ಅವರು ಈ ಬೆಳವಣಿಗೆಯನ್ನು ವರದಿ ಮಾಡುತ್ತಿದ್ದ ವೀಡಿಯೊ ಪತ್ರಕರ್ತರಿಗೆ ಮೈಕ್‌ನಿಂದ ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಟಿವಿ ದಶ್ಯಗಳು ತೋರಿಸಿವೆ. ವಿಡಿಯೋ ಪತ್ರಕರ್ತನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮೋಹನ್‌ ಬಾಬು ಅವರ ಕುಟುಂಬದಲ್ಲಿನ ಭಿನ್ನಾಭಿಪ್ರಾಯ ಕುರಿತಂತೆ ಪೊಲೀಸರಿಗೆ ದೂರು ನೀಡಿದ ನಂತರ ಬಯಲಿಗೆ ಬಂದಿವೆ. ಮನೋಜ್‌ ಮತ್ತು ಅವರ ಪತ್ನಿ ಜಲಪಲ್ಲಿ ಅವರ ಮನೆಯನ್ನು ಬೆದರಿಕೆ ಮತ್ತು ಬಲವಂತದ ಮೂಲಕ ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಸಂಯೋಜಿತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ತಾನು ಆಸ್ತಿಯಲ್ಲಿ ಪಾಲು ಮಾಡದೆ ಸ್ವಾಭಿಮಾನಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಮನೋಜ್‌ ಸುದ್ದಿಗಾರರಿಗೆ ತಿಳಿಸಿದರು.ತನಗೆ ಮತ್ತು ತನ್ನ ಕುಟುಂಬಕ್ಕೆ ಪೊಲೀಸ್‌‍ ರಕ್ಷಣೆಯನ್ನು ಕೋರಿದ್ದೇನೆ ಮತ್ತು ನಂತರ ಈ ವಿಷಯದ ಕುರಿತು ಹಿರಿಯ ಪೊಲೀಸ್‌‍ ಅಧಿಕಾರಿಯನ್ನು ಭೇಟಿ ಮಾಡಿದ್ದೇನೆ ಎಂದು ಅವರು ಪುನರುಚ್ಚರಿಸಿದರು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಮನೋಜ್‌ ತನ್ನ ವಿರುದ್ಧ ತನ್ನ ತಂದೆ ಮಾಡಿದ ಆರೋಪಗಳನ್ನು ಆಧಾರರಹಿತ, ದುರುದ್ದೇಶಪೂರಿತ ಮತ್ತು ಸುಳ್ಳು ಎಂದು ಬಣ್ಣಿಸಿದ್ದಾರೆ.

ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮೋಹನ್‌ ಬಾಬು ಅವರ ಹಿರಿಯ ಪುತ್ರ ವಿಷ್ಣು ಹೇಳಿದ್ದಾರೆ. ಮೋಹನ್‌ ಬಾಬು ಅವರ ದೂರಿನ ಆಧಾರದ ಮೇಲೆ ಪೊಲೀಸರು ಈ ಹಿಂದೆ ಮನೋಜ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮೋಹನ್‌ ಬಾಬು ಅವರು ಸೋಮವಾರ ತಮ ದೂರಿನಲ್ಲಿ ಮನೋಜ್‌ ಮತ್ತು ಅವರು ಬಾಡಿಗೆಗೆ ಪಡೆದ ಕೆಲವು ಸಮಾಜವಿರೋಧಿಗಳು ಡಿಸೆಂಬರ್‌ 8 ರಂದು ತಮ ನಿವಾಸದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 30 ವ್ಯಕ್ತಿಗಳು ನಿವಾಸಕ್ಕೆ ಅತಿಕ್ರಮವಾಗಿ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಆವರಣದಿಂದ ಹೊರಹಾಕಿದ್ದಾರೆ ಎಂದು ಅವರ ಉದ್ಯೋಗಿಯೊಬ್ಬರು ಮಾಹಿತಿ ನೀಡಿದರು.

RELATED ARTICLES

Latest News