ಬೆಂಗಳೂರು, ಡಿ. 11: ನಿಧನರಾದ ಕರ್ನಾಟಕ ಮಾಜಿ ಸಿಎಂ ಎಸ್.ಎಂ.ಕಷ್ಣ ಅವರ ಪತ್ನಿ ಪ್ರೇಮ ಕಷ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಂತ್ವನ ಹೇಳಿದ್ದಾರೆ ಮಾತ್ರವಲ್ಲದೆ ಶೋಕ ಸಂದೇಶ ಕಳುಹಿಸಿದ್ದಾರೆ.
ಪ್ರೇಮ ಕಷ್ಣ ಜೀ ಅವರೇ ಎಸ್. ಎಂ ಕಷ್ಣ ನಿಧನದ ಸುದ್ದಿ ಕೇಳಿ ದುಃಖಿತನಾದೆ. ಅವರ ಅಗಲುವಿಕೆಯ ನಷ್ಟವು ನಿರ್ವಾತವನ್ನು ಸಷ್ಟಿಸಿದೆ. ಒಬ್ಬ ದೂರದಷ್ಟಿಯುಳ್ಳ ಮತ್ತು ಅಸಾಧಾರಣ ನಾಯಕರಾಗಿದ್ದ ಎಸ್ಎಂ ಕಷ್ಣ ಅವರನ್ನು ರಾಜಕೀಯ ವಲಯದಾದ್ಯಂತ ಎಲ್ಲರೂ ಗೌರವಿಸಿದರು ಮತ್ತು ಮೆಚ್ಚಿದ್ದರು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವರ ಅವಧಿಯನ್ನು ರಾಜ್ಯದ ಜನತೆ ಸದಾ ಸರಿಸುತ್ತಾರೆ. ಅವರು ಹಲವಾರು ಕ್ಷೇತ್ರಗಳ ಜನರ ಕಲ್ಯಾಣಕ್ಕಾಗಿ ಶ್ರಮಿಸಿದರು. ಮುಖವಾಗಿ, ಮೂಲಸೌಕರ್ಯ ಅಭಿವದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಗೆ ಅವರ ಕೊಡುಗೆಯು ಬೆಂಗಳೂರನ್ನು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡಿತು ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದದ್ದ ಜತೆಗೇ ಇತರ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದರು ಎಂಬುದು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅವರೊಬ್ಬ ಅಸಾಮಾನ್ಯ ಓದುಗ ಮತ್ತು ಆಳವಾದ ಚಿಂತಕರಾಗಿದ್ದರು. ಅವರೊಂದಿಗೆ ಹಲವಾರು ಬಾರಿ ಸಮಾಲೋಚನೆ ನಡೆಸಿದ್ದೇನೆ. ಆ ನೆನಪು ಸದಾ ಅಮರ ಎಂದು ಮೋದಿ ಉಲ್ಲೇಖಿಸಿದ್ದಾರೆ.
ಎಸ್ಎಂ ಕಷ್ಣ ಅವರು ಅನುಭವಿ ಸಂಸದೀಯ ಪಟು ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಶ್ರೇಷ್ಠ ನಾಯಕರಾಗಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರು ರಾಜ್ಯದ ಆರ್ಥಿಕತೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಅವರ ನಿಧನದೊಂದಿಗೆ ದೇಶವು ಸಮರ್ಥ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ನಿಮಗೆ ಭಗವಂತ ಕರುಣಿಸಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.