ಬೆೆಳಗಾವಿ,ಡಿ.12– ವಿಧಾನಸಭೆ ಮತ್ತು ವಿಧಾನಪರಿಷತ್ನ ಉಭಯಸದನಗಳಲ್ಲೂ ಪಂಚ ಮಸಾಲಿಗಳ ಮೇಲೆ ನಡೆದ ಲಾಠಿಚಾರ್ಜ್ ವಿಷಯ ಪ್ರತಿಧ್ವನಿಸಿ ರಣಾಂಗಣವಾಗಿ ಮಾರ್ಪಟ್ಟಿತು.ವಿಧಾನಪರಿಷತ್ನ ಆರಂಭದಲ್ಲೇ ವಿರೋಧ ಪಕ್ಷಗಳು ಪಂಚಮಸಾಲಿಗಳ ಮೇಲೆ ನಡೆದ ಲಾಠಿ ಪ್ರಹಾರವನ್ನು ಮುಂದಿಟ್ಟು ಕೊಂಡು ವಾಗ್ದಾಳಿಗೆ ಮುಂದಾದವು.
ಈ ವೇಳೆ ಸಭಾಪತಿ ಬಸವರಾಜಹೊರಟ್ಟಿ ಸದಸ್ಯರನ್ನು ಸಮಾ ಧಾನಪಡಿಸಲು ಹರಸಾಹಸ ಪಟ್ಟರು. ಗೃಹಸಚಿವ ಡಾ.ಜಿ.ಪರಮೇಶ್ವರ್ ಘಟನೆ ಕುರಿತು ಸವಿಸ್ತಾರವಾದ ಮಾಹಿತಿ ನೀಡಿ ದರು. ಇತ್ತ ವಿಧಾನಸಭೆಯ ಅಧಿವೇಶನ ದಲ್ಲೂ ಪಂಚಮಸಾಲಿಗಳ ಮೇಲಿನ ಲಾಠಿ ಪ್ರಹಾರ ಘಟನೆ ಪ್ರತಿಧ್ವನಿಸಿ ಕೋಲಾಹಲ ಮೂಡಿಸಿತ್ತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಧಾನಸಭೆಯ ವಿರೋಧಪಕ್ಷದ ಸದಸ್ಯರು ಸರ್ಕಾರಕ್ಕೆ ಧಿಕ್ಕಾರ ಕೂಗಲಾರಂಭಿಸಿದರು.
ಸಭಾಧ್ಯಕ್ಷರು ಸಂತಾಪ ಸೂಚಕ ನಿರ್ಣಯವನ್ನು ಪ್ರಸ್ತಾಪಿಸಿದರು.ವಿರೋಧಪಕ್ಷದ ನಾಯಕ ಆರ್.ಅಶೋಕ್, ಅಶ್ವತ್ಥನಾರಾಯಣ, ಅರಗಜ್ಞಾನೇಂದ್ರ, ಸುನಿಲ್ಕುಮಾರ್ ಮತ್ತು ಇತರರು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು ಈ ಮನೆಯಲ್ಲಿ ನಮ ನಿಮ ಹಾಗೆ ಜನಸೇವೆ ಮಾಡಿದ್ದ ಇಬ್ಬರು ಶಾಸಕರಾದ ಜಯಣ್ಣ ಮತ್ತು ಆರ್.ನಾರಾಯಣ್ ಅವರು ನಮನ್ನು ಅಗಲಿದ್ದಾರೆ. ಅವರಿಗೆ ಮೊದಲು ಸಂತಾಪಸೂಚನೆ ಮಂಡಿಸಿ ಅವರ ಕುಟುಂಬದ ದುಃಖವನ್ನು ಕಡಿಮೆ ಮಾಡುವುದು ನಮ ಕರ್ತವ್ಯ. ಮೊದಲು ಅದಕ್ಕೆ ಅವಕಾಶ ಮಾಡಿಕೊಡಿ. ನಿಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.
ಇದು ಉತ್ಸಾಹ ಅಲ್ಲ. ನೋವು ಎಂದು ಬಿಜೆಪಿಯ ಸುನಿಲ್ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆ ನೋವಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ನ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿರುಗೇಟು ನೀಡಿದರು. ವಿರೋಧಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷರು ವಿರೋಧಪಕ್ಷಗಳು ಪ್ರಸ್ತಾಪಿಸುವ ವಿಷಯಕ್ಕೆ ಸಂತಾಪ ಸೂಚನೆ ಬಳಿಕ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ನಂತರ ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು.
ಅತ್ತ ವಿಧಾನಪರಿಷತ್ನಲ್ಲೂ ವಿರೋಧಪಕ್ಷಗಳು ಪಂಚಮಸಾಲಿಗಳ ಮೇಲೆ ನಡೆದ ಲಾಠಿಪ್ರಹಾರವನ್ನು ಪ್ರಸ್ತಾಪಿಸಿ ಕೋಲಾಹಲ ಮೂಡಿಸಿದವು.