Thursday, December 12, 2024
Homeಮನರಂಜನೆ74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಜನಿ, ಶುಭಾಶಯಗಳ ಮಹಾಪೂರ

74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಜನಿ, ಶುಭಾಶಯಗಳ ಮಹಾಪೂರ

Rajinikanth turns 74

ಚೆನ್ನೈ , ಡಿ.12- ವಿಶ್ವದಾದ್ಯಂತ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ತಮ 74ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸಿನಿಮಾ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ತಲೈವಾನ ಹುಟ್ಟುಹಬ್ಬದ ಅಂಗವಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೂಡ ತಮ ಎಕ್ಸ್ ಖಾತೆಯ ಮೂಲಕ ಶುಭ ಹಾರೈಸಿದ್ದಾರೆ. `ನನ್ನ ಆಪ್ತ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಚಿತ್ರರಂಗದಲ್ಲಿ ನೀವು ಊಹೆಗೂ ನಿಲುಕದ ಎತ್ತರಕ್ಕೆ ಬೆಳೆದಿದ್ದೀರಿ, ಅಲ್ಲದೆ 6 ರಿಂದ 60 ವರ್ಷದ ಅಭಿಮಾನಿಗಳನ್ನು ಹೊಂದಿದ್ದೀರಿ.

ಈಗಾಗಲೇ ಹಲವು ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದು, ಈ ರಂಗದಲ್ಲಿ ನೀವು ಮತ್ತಷ್ಟು ಉತ್ತಮ ಚಿತ್ರಗಳನ್ನು ನೀಡುವ ಮೂಲಕ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿರಿ’ ಎಂದು ಶುಭ ಹಾರೈಸಿದ್ದಾರೆ. ತಮಿಳು ಚಿತ್ರರಂಗದ ಮೇರು ನಟ ಕಮಲಹಾಸನ್, ಶಿವ ಕಾರ್ತಿಕೇಯನ್ ಸೇರಿದಂತೆ ಹಲವು ನಟರುಗಳು ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವಾರು ಭಾಷಾ ಚಿತ್ರಗಳಲ್ಲಿ ನಟಿಸಿರುವ ರಜನಿಕಾಂತ್ ಅವರು ಸದ್ಯ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರ

RELATED ARTICLES

Latest News