Saturday, December 28, 2024
Homeರಾಷ್ಟ್ರೀಯ | Nationalನಾಳೆ 'ಮಹಾ' ಸಂಪುಟ ರಚನೆ, 35 ಮಂದಿ ಸಚಿವರಾಗಿ ಪ್ರಮಾಣ ಸಾಧ್ಯತೆ

ನಾಳೆ ‘ಮಹಾ’ ಸಂಪುಟ ರಚನೆ, 35 ಮಂದಿ ಸಚಿವರಾಗಿ ಪ್ರಮಾಣ ಸಾಧ್ಯತೆ

Devendra Fadnavis finalises BJP’s 22 ministers for Maharashtra Cabinet

ಮುಂಬೈ,ಡಿ.13- ನಾಳೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ದೇವೇಂದ್ರ ಫಡ್ನವಿಸ್‌‍ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ವಾರ ಕಳೆದರೂ ಇದುವರೆಗೂ ಸಂಪುಟ ರಚನೆಯಾಗಿಲ್ಲ. ಹೀಗಾಗಿ ನಾಳೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ ಮಹಾಯುತಿ ಒಕ್ಕೂಟದ 35 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಪುಟಕ್ಕೆ ಸೇರುವ ಸಂಭಾವ್ಯರ ಪಟ್ಟಿ ಇಲ್ಲಿದೆ. ಬಿಜೆಪಿಗೆ 21 ಖಾತೆಗಳು, ಶಿವಸೇನೆ ಶಿಂಧೆ ಗುಂಪು 13 ಮತ್ತು ಎನ್‌ಸಿಪಿ ಅಜಿತ್‌ ಪವಾರ್‌ ಗುಂಪು 9 ಸಚಿವ ಸ್ಥಾನಗಳನ್ನು ಹೊಂದಿರುತ್ತದೆ.

ಮೊದಲ ಹಂತದಲ್ಲಿ 35 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ 17, ಶಿವಸೇನೆ 10 ಮತ್ತು ರಾಷ್ಟ್ರೀಯವಾದಿ ಅಜಿತ್‌ ಪವಾರ್‌ ಗುಂಪಿನ 7 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯವಾಗಿ ಹಣಕಾಸು ಮತ್ತು ಗಹ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಳ್ಳಲಿದೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ್‌ ಶಿಂಧೆ ಉಪಮುಖ್ಯಮಂತ್ರಿಯಾಗಬೇಕಿದ್ದ ಕಾರಣ ಶಿವಸೇನೆ ಪದೇ ಪದೇ ಗಹ ಸಚಿವ ಸ್ಥಾನ ಬೇಕು ಎಂದು ಹೇಳಿಕೊಳ್ಳುತ್ತಿತ್ತು.

ಮಾಹಿತಿ ಪ್ರಕಾರ ಈ ಖಾತೆ ದೇವೇಂದ್ರ ಫಡ್ನವಿಸ್‌‍ ಅವರ ಬಳಿಯೇ ಉಳಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಜಿತ್‌ ಪವಾರ್‌ ಹಣಕಾಸು ಖಾತೆಗಳನ್ನು ನಿರ್ವಹಿಸುವಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಶಿಂಧೆ ಸರ್ಕಾರದಲ್ಲಿ ಅಜಿತ್‌ ಪವಾರ್‌ ಕೂಡ ಹಣಕಾಸು ಸಚಿವರಾಗಿದ್ದರು. ಆದರೆ ಈಗ ಹಣಕಾಸು ಖಾತೆ ಫಡ್ನವಿಸ್‌‍ ಅವರ ಬಳಿಯೇ ಉಳಿಯಲಿದೆ ಎಂದು ತಿಳಿದುಬಂದಿದೆ.

ಏಕನಾಥ್‌ ಶಿಂಧೆ ಅವರು ನಗರಾಭಿವದ್ಧಿ ಮತ್ತು ಕಂದಾಯ ಖಾತೆಯನ್ನು ಹೊಂದಿರುತ್ತಾರೆ. ಅಜಿತ್‌ ಪವಾರ್‌ ಅವರು ವಸತಿ ಮತ್ತು ಸಾರ್ವಜನಿಕ ಕಾರ್ಯಗಳ ಪ್ರಮುಖ ಖಾತೆಗಳನ್ನು ಹೊಂದಿರುತ್ತಾರೆ. ಈ ವರ್ಷ ದೇವೇಂದ್ರ ಫಡ್ನವೀಸ್‌‍ ಅವರ ಸಂಪುಟದಲ್ಲಿ ಅನುಭವಿ ಸಚಿವರು ಇರಲಿದ್ದಾರೆ.

ಕೆಲವು ಹೊಸ ಮುಖಗಳಿಗೂ ಅವಕಾಶ ನೀಡಲಾಗುವುದು. ಶಿವಸೇನೆಯ ದೀಪಕ್‌ ಕೇಸಕರರ್‌, ಅಬ್ದುಲ್‌ ಸತ್ತಾರ್‌ ಮತ್ತು ತಾನಾಜಿ ಸಾವಂತ್‌ ಅವರುಗಳು ಸಚಿವರಾಗುವ ಸಾಧ್ಯತೆಗಳಿವೆ.

RELATED ARTICLES

Latest News