Friday, December 27, 2024
Homeರಾಜ್ಯಸದನದಲ್ಲಿ ಹೆಚ್ಚು ಸಮಯ ಇದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚು : ಸಭಾಧ್ಯಕ್ಷ ಯು.ಟಿ.ಖಾದರ್‌

ಸದನದಲ್ಲಿ ಹೆಚ್ಚು ಸಮಯ ಇದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚು : ಸಭಾಧ್ಯಕ್ಷ ಯು.ಟಿ.ಖಾದರ್‌

Speaker U.T. Khader

ಬೆಳಗಾವಿ, ಡಿ.13- ಸದನದಲ್ಲಿ ಹೆಚ್ಚು ಸಮಯ ಇದ್ದವರು ಹೆಚ್ಚು ಬಾರಿ ಗೆಲುವು ಸಾಧಿಸುತ್ತಾರೆ ಹಾಗೂ ಉತ್ತಮ ರಾಜಕಾರಣಿಯಾಗಲು ಸಹಕಾರಿಯಾಗಲಿದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನಸಭೆಯಲ್ಲಿಂದು ತಿಳಿಸಿದರು.

ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ನಿನ್ನೆ ಸಕಾಲಕ್ಕೆ ಆಗಮಿಸಿದ ಶಾಸಕರು ಹಾಗೂ ರಾತ್ರಿ 10 ಗಂಟೆವರೆಗೂ ಸದನದಲ್ಲಿ ಹಾಜರಿದ್ದ ಶಾಸಕರ,ಸಚಿವರ ಹೆಸರುಗಳನ್ನು ವಾಚಿಸಿದರು.

ಸದನದಲ್ಲಿ ಗಮನಸೆಳೆಯುವ ಸೂಚನೆ ಮುಗಿದ ಕೂಡಲೇ ಶಾಸಕರು ಹೊರಹೋಗುವುದು ಸರಿಯಲ್ಲ. ಸದನದಲ್ಲಿ ಹೆಚ್ಚು ಕಾಲ ಇದ್ದು ಕಾರ್ಯ ಕಲಾಪಗಳಲ್ಲಿ ಭಾಗಿಯಾದರೆ ಅನುಭವವೂ ಹೆಚ್ಚಾಗಲಿದೆ ದೊಡ್ಡ ಸ್ಥಾನವೂ ಸಿಗಲಿದೆ ಎಂದರು.

ವೈದ್ಯರಿಗೆ ಮೆಡಿಕಲ್‌ ಕಾಲೇಜು, ವಕೀಲರಿಗೆ ಲಾ ಕಾಲೇಜುಗಳಿವೆ. ವೃತ್ತಿಪರರಿಗೆ ಸೂಕ್ತ ತರಬೇತಿ, ಆಯಾ ಸಂಸ್ಥೆಗಳಲ್ಲಿ ತರಬೇತಿ ಸಿಗುತ್ತದೆ. ಆದರೆ ರಾಜಕಾರಣಿಗಳಿಗೆ ತರಬೇತಿ ನೀಡುವ ಸಂಸ್ಥೆಗಳಿಲ್ಲ. ಹೀಗಾಗಿ ಸದನವೇ ಒಂದು ಅಕಾಡೆಮಿ ಇದ್ದಂತೆ.

ಇಲ್ಲಿ ಹೆಚ್ಚು ಕಾಲ ಕಲಾಪಗಳಲ್ಲಿ ಭಾಗಿಯಾದರೆ, ಹಿರಿಯರು ಹೇಳಿದ ಮಾತುಗಳನ್ನು ಕೇಳಿದರೆ ಉತ್ತಮ ರಾಜಕಾರಣಿಯಾಗಬಹುದು. ಹಿರಿಯ ಶಾಸಕರ ಮಾತುಗಳೇ ಪಾಠಗಳಾಗಿವೆ. ಹೇಗೆ ಸದನದಲ್ಲಿ ಭಾಗವಹಿಸುತ್ತೀರಿ ಎಂಬುದನ್ನು ನಾಡಿನ ಜನ ಗಮನಿಸುತ್ತಾರೆ. ಇದನ್ನು ಸದನಕ್ಕೆ ಯಾರು ಬಂದಿಲ್ಲವೋ ಅವರಿಗೆ ಹೇಳಿ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.

RELATED ARTICLES

Latest News