Friday, December 27, 2024
Homeಅಂತಾರಾಷ್ಟ್ರೀಯ | Internationalಅಮೆರಿಕದ 'ಡೀಪ್ ಸ್ಟೇಟ್'ಗೆ ಬ್ರೇಕ್ ಹಾಕ್ತಾರಾ ಕಾಶ್ ಪಟೇಲ್..?

ಅಮೆರಿಕದ ‘ಡೀಪ್ ಸ್ಟೇಟ್’ಗೆ ಬ್ರೇಕ್ ಹಾಕ್ತಾರಾ ಕಾಶ್ ಪಟೇಲ್..?

Will Kash Patel break the US 'Deep State'?

ವಾಷಿಂಗ್ಟನ್, ಡಿ.13- ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಆ ರಾಷ್ಟ್ರದ ಮುಂದಿನ ಎಫ್ಬಿಐ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಟ್ರಂಪ್ ನಿಷ್ಠರಾಗಿ ಗುರುತಿಸಿ ಕೊಂಡಿರುವ ಭಾರತೀಯ ಮೂಲದ ಕಾಶ್ ಪಟೇಲ್ ಅವರು FBI ಎಂಟು ವರ್ಷಗಳ ಹಿಂದೆ ಆರಂಭಿಸಿದ ಟ್ರಂಪ್ ಅಥವಾ ಅವರ ಸಹವರ್ತಿಗಳು ಮತ್ತು ರಷ್ಯಾ ನಡುವೆ ಆರೋಪಿತ ಸಂಬಂಧಗಳ ತನಿಖೆ ಒಂದು ಕುಟಿಲ ಕಾರಸ್ಥಾನವಾಗಿದ್ದು, ಅಮೆರಿಕದ ಕುಪ್ರಸಿದ್ಧ ವಾಟರ್ಗೇಟ್ ಹಗರಣವನ್ನೂ ಮೀರಿಸುತ್ತದೆ ಎಂದು ಹೇಳಿದ್ದಾರೆ.

ರಷ್ಯಾಗೇಟ್ ಎಂಬ ಸುಳ್ಳಿನ ಕಂತೆ ಹೆಣೆದಿರುವ ಅಮೆರಿಕದ ಮಾಜಿ ಅಧಿಕಾರಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ. ಮತ್ತು ತಥಾಕಥಿತ ಡೀಪ್ ಸ್ಟೇಟ್ ಗೆ ಬೆಂಬಲ ನೀಡಿದ್ದಕ್ಕಾಗಿ ಸಾವಿರಾರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಬೇಕಾಗುತ್ತದೆ. ಇದೊಂದು ಹಸ್ತಕ್ಷೇಪ ಮಾಡಲಾಗಿರುವ ದುರ್ನೀತಿಯಾಗಿದ್ದು ಚುನಾಯಿತ ನಾಯಕರನ್ನು ಕಡೆಗಣಿಸುವ ಮತ್ತು ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಒಳಸಂಚಾಗಿದೆ ಎಂದು ಪಟೇಲ್ ಕಿಡಿಕಾರಿದ್ದಾರೆ.

ಟ್ರಂಪ್ ಅವರ ಅಧಿಕಾರದ ಮೊದಲ ಅವಧಿಯಲ್ಲಿ ಸದನದ ಹಿರಿಯ ತನಿಖಾಧಿಕಾರಿಯಾಗಿದ್ದ ಪಟೇಲ್ ಅವರು ರಷ್ಯಾ ತನಿಖೆಯ ಬಗ್ಗೆ ವಿಚಾರಣೆ ನಡೆಸಲು ಸದನದ ರಿಪಬ್ಲಿಕನ್ ಸದಸ್ಯರಿಗೆ ನೆರವು ನೀಡಿದ್ದರು. ಇದು ಅವರು 2019ರಲ್ಲಿ ಟ್ರಂಪ್ ಆಡಳಿತಕ್ಕೆ ಸೇರ್ಪಡೆಗೊಳ್ಳಲು ನೆರವಾಗಿತ್ತು.

ಕಳೆದ ಡಿಸೆಂಬರ್ನಲ್ಲಿ ಟ್ರಂಪ್ನ ನಿಕಟವರ್ತಿ ಸ್ಟೀಲ್ ಬ್ಯಾನನ್ ಅವರ ಪಾಡ್ಕಾಸ್ಟ್ಗೆ ಹಾಜರಾದ ಪಟೇಲ್ ಅವರನ್ನು ಟ್ರಂಪ್ ಅವರ ಮುಂದಿನ ಆಡಳಿತಾವಧಿಯಲ್ಲಿ ಹಿರಿಯ ರಾಷ್ಟ್ರೀಯ ಭದ್ರತಾಧಿಕಾರಿಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ ಡೀಪ್ಸ್ಟೇಟ್ನ ದುಷ್ಕೃತ್ಯಗಳಿಗಾಗಿ ಪಿತೂರಿಗಾರರು ಉತ್ತರದಾಯಿಯಾಗಬೇಕಾಗುತ್ತದೆ. ಮತ್ತು ಗಂಭೀರ ತನಿಖೆ ಎದುರಿಸಬೇಕಾಗುತ್ತದೆ ಎಂದು ದೃಢವಾಗಿ ಪಟೇಲ್ ಹೇಳಿದ್ದರು.

ರಷ್ಯಾಗೇಟ್ ಕುರಿತು ಬಹುವಿಧ ಅಧಿಕಾರಿ ತನಿಖೆಗಳು ಟ್ರಂಪ್ ಅವರ ಅನುಯಾಯಿಗಳ ಪ್ರತಿಪಾದನೆಯ ವಿಧಿವಿಧಾನಗಳಿಗೆ ಪೂರಕವಾಗಿವೆ. ಆದರೆ ಪಟೇಲ್ ಎಫ್ಬಿಐ ನಿರ್ದೇಶಕರಾದರೆ ಮತ್ತು ನಿಜವಾಗಿಯೂ ಇಂಥ ತನಿಖೆಯನ್ನು ಪ್ರಾರಂಭಿಸಿದರೆ ಅವುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ? ಮತ್ತು ಅವರು ಯಾವ ವಿಧದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಮಹತ್ವದ ಪ್ರಶ್ನೆಯಾಗಿದೆ.

ಪಟೇಲ್ ಅವರ ಮಾಧ್ಯಮ ಸಂದರ್ಶನಗಳು, ಅವರ ಸಾರ್ವಜನಿಕ ಹೇಳಿಕೆಗಳು ಮತ್ತು ಕಳೆದ ವರ್ಷ ಅವರು ಬಿಡುಗಡೆ ಮಾಡಿದ ಗವರ್ನ್ಮೆಂಟ್ ಗ್ಯಾಂಗ್ಸ್ಟರ್ರಸ ಪುಸ್ತಕವನ್ನು ಡೀಪ್ಸ್ಟೇಟ್ ಆಡಳಿತಕ್ಕೆ ಚರಮಗೀತೆ ಹಾಡುವ ದಿಕ್ಪಥಗಳು ಮತ್ತು ಮಹತ್ವದ ಸುಳಿವುಗಳ ಆಗರ ಎಂದು ಟ್ರಂಪ್ ಬಣ್ಣಿಸಿದ್ದಾರೆ.

RELATED ARTICLES

Latest News