Wednesday, January 8, 2025
Homeಮನರಂಜನೆಬಂಧನದಿಂದ ಬಿಡುಗಡೆಯಾದ ಬಳಿಕ ನಟ ಅಲ್ಲು ಅರ್ಜುನ್‌ ಹೇಳಿದ್ದೇನು..?

ಬಂಧನದಿಂದ ಬಿಡುಗಡೆಯಾದ ಬಳಿಕ ನಟ ಅಲ್ಲು ಅರ್ಜುನ್‌ ಹೇಳಿದ್ದೇನು..?

Allu Arjun says Sandhya Theatre fan death 'unfortunate' but 'has no connection to me':

ಹೈದರಾಬಾದ್‌, ಡಿ.14– ಕಾಲ್ತುಳಿತದಲ್ಲಿ ಅಭಿಮಾನಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಖ್ಯಾತ ಚಿತ್ರನಟ ಅಲ್ಲು ಅರ್ಜುನ್‌ ಅವರು ಬಿಡುಗಡೆಯಾಗಿದ್ದಾರೆ. ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್‌ ಅವರು ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾದ ನಂತರ ತಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ಮಾತ್ರವಲ್ಲ, ಕಾನೂನಿಗೆ ತಲೆಬಾಗುವುದಾಗಿ ಹೇಳಿದ್ದಾರೆ.

ಸಂಧ್ಯಾ ಚಿತ್ರಮಂದಿರದಲ್ಲಿ ತಮ ಅಭಿಮಾನಿ ಮೃತಪಟ್ಟಿರುವ ಘಟನೆ ಆಕಸಿಕವಾಗಿ ಸಂಭವಿಸಿದೆ. ಮತರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
ಜೈಲಿನಿಂದ ಇಂದು ಮುಂಜಾನೆ ರಿಲೀಸ್‌‍ ಆದ ಅವರು, ಪೊಲೀಸ್‌‍ ಭಧ್ರತೆಯೊಂದಿಗೆ ನೇರವಾಗಿ ಮನೆ ಸೇರಿದರು. ಅವರು ನಿವಾಸಕ್ಕೆ ಬಂದ ಬಳಿಕ ಮಾಧ್ಯಮಗಳಿಗೆ ರಿಯಾಕ್ಷನ್‌ ನೀಡಿದ್ದಾರೆ. ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸೋದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ. ನಾನು ತನಿಖೆಗೆ ಸಹಕರಿಸುತ್ತೇನೆ ಎಂದು ಅಲ್ಲು ಅರ್ಜುನ್‌ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಮತಪಟ್ಟ ರೇವತಿ ಕುಟುಂಬದವರ ಬಗ್ಗೆ ಮಾತನಾಡಲು ಮರೆತಿಲ್ಲ. ನಾನು ಮತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆಯಿತು. ಅದು ಅಚಾನಕ್ಕಾಗಿ ಆಗಿದ್ದು. ಅದೊಂದು ಅಪಘಾತ ಎಂದಿದ್ದಾರೆ ಅಲ್ಲು ಅರ್ಜುನ್‌.

ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ. ನನ್ನದು ಮಾತ್ರವಲ್ಲದೆ, ನನ್ನ ಅಂಕಲ್‌ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ.

30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್‌ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಅಲ್ಲು ಅರ್ಜುನ್‌ ಭರವಸೆ ನೀಡಿದ್ದಾರೆ.

ಆದರೆ, ನನ್ನ ಬಂಧನದ ಹಿಂದೆ ಯಾರಾದೋ ಕೈವಾಡ ಇದೆ ಎನ್ನುವ ಬಗ್ಗೆ ನನಗೆನೂ ಗೊತ್ತಿಲ್ಲ ಎಂದು ಅಲ್ಲು ಅರ್ಜುನ್‌ ಪ್ರತಿಕ್ರಿಯಿಸಿದ್ದಾರೆ. ಮನೆಗೆ ಬಂದ ಅಲ್ಲು ಅರ್ಜುನ್‌ ಅವರನ್ನು ಕಂಡ ಅವರ ಮಕ್ಕಳು ಓಡೋಡಿ ಬಂದ ತಂದೆಯನ್ನು ತಬ್ಬಿಕೊಂಡ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿದಂತೂ ಸತ್ಯ.

RELATED ARTICLES

Latest News