Friday, December 27, 2024
Homeರಾಷ್ಟ್ರೀಯ | Nationalಏಕ್‌ ಭಾರತ್‌, ಶ್ರೇಷ್ಠ ಭಾರತ ಕಲ್ಪನೆಗೆ ವಲ್ಲಭಭಾಯಿ ಪಟೇಲ್‌ ಸ್ಫೂರ್ತಿ ; ಯೋಗಿ

ಏಕ್‌ ಭಾರತ್‌, ಶ್ರೇಷ್ಠ ಭಾರತ ಕಲ್ಪನೆಗೆ ವಲ್ಲಭಭಾಯಿ ಪಟೇಲ್‌ ಸ್ಫೂರ್ತಿ ; ಯೋಗಿ

Sardar Patel inspires us to work for 'Ek Bharat, Shreshtha Bharat': UP CM

ಲಕ್ನೋ, ಡಿ.15 (ಪಿಟಿಐ) ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಘೋಷಣೆಗೆ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರೇ ಪ್ರೇರಣೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪುಣ್ಯತಿಥಿಯಂದು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಎಕ್‌್ಸ ಮಾಡಿರುವ ಅವರು ದೇಶವನ್ನು ಒಗ್ಗೂಡಿಸಲು ಸರ್ದಾರ್‌ ಪಟೇಲ್‌ ಅವರ ಪ್ರಯತ್ನಗಳು ಏಕ್‌ ಭಾರತ್‌, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡುವ ಹಿಂದಿನ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಆಧುನಿಕ ಭಾರತದ ವಾಸ್ತುಶಿಲ್ಪಿ, ರೈತ ಹಿತೈಷಿ, ಉಕ್ಕಿನ ಮನುಷ್ಯ ಭಾರತ ರತ್ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜಿ ಅವರ ಪುಣ್ಯತಿಥಿಯಂದು ನಮ್ರ ನಮನಗಳು!
ಭಾರತದ ಮೊದಲ ಉಪಪ್ರಧಾನಿ ಮತ್ತು ಗಹ ಸಚಿವರಾಗಿದ್ದ ಸರ್ದಾರ್‌ ಪಟೇಲ್‌ ಅವರು 15 ಡಿಸೆಂಬರ್‌ 1950 ರಂದು ಕೊನೆಯುಸಿರೆಳೆದರು.

1875 ರಲ್ಲಿ ಗುಜರಾತ್‌ನ ನಾಡಿಯಾಡ್‌ನಲ್ಲಿ ಜನಿಸಿದ ಪಟೇಲ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ಅಸಾಧಾರಣ ನಾಯಕತ್ವ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಮಣಿಯದ ಬದ್ಧತೆಗೆ ಹೆಸರುವಾಸಿಯಾದ ಅವರು ಭಾರತದ ಉಕ್ಕಿನ ಮನುಷ್ಯ ಎಂದು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.

ಅಕ್ಟೋಬರ್‌ 31, 2015 ರಂದು ಸರ್ದಾರ್‌ ಪಟೇಲ್‌ ಅವರ 140 ನೇ ಜನದಿನದಂದು ಕೇಂದ್ರ ಸರ್ಕಾರವು ಏಕ್‌ ಭಾರತ್‌‍, ಶ್ರೇಷ್ಠ ಭಾರತ ಉಪಕ್ರಮವನ್ನು ಘೋಷಿಸಿತು. ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವಿನ ಸಂವಹನವನ್ನು ಹೆಚ್ಚಿಸಲು ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

RELATED ARTICLES

Latest News