ಬೆಂಗಳೂರು,ಡಿ.15- ಕೃಷಿ ಹೊಂಡಾದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋಣ್ ಪ್ರತಾಪನ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಲಾಸ್ಟ್ ವಿಡಿಯೋ ಮಾಡುತ್ತಿದ್ದ ಕ್ಯಾಮೆರಾರಮೆನ್ ವಿನಯ್ ಹಾಗೂ ಸೋಡಿಯಂ ರಾಸಾಯನಿಕ ಕೊಡಿಸಿದ್ದ ಪ್ರಜ್ವಲ್ ಬಂಧಿತರು. ಡ್ರೋಣ್ ಪ್ರತಾಪ್ ಬ್ಲಾಸ್ಟ್ ಎಕ್‌್ಸಪಿರಿಮೆಂಟ್ ಮಾಡಲು ನಗರದ ಅವಿನ್ಯೂರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಸೋಡಿ ಯಂ ಲವಣ ಖರೀದಿಸಿದ್ದ .
ಈ ಹಿನ್ನಲೆಯಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು ತಡರಾತ್ರಿ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಇನ್ನು ಪ್ರಕರಣ ಸಂಬಂಧ ಡ್ರೋಣ್ ಪ್ರತಾಪ್ನನ್ನು ಮಧುಗಿರಿ ಜೆಂಎಂಎಫ್ಸಿ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕೃಷಿಹೊಂಡದ ಜಮೀನಿನ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಿಡಿಗೇಶಿ ಠಾಣೆ ಪೊಲೀಸರಿಂದ ಸು ಮೊಟೊ ಪ್ರಕರಣ ದಾಖಲಾಗಿದೆ.ಘಟನೆ ನಡೆದ ಸ್ಥಳ ಮಹಜರು ಮಾಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.