ಬೆಂಗಳೂರು,ಡಿ.16- ನಗರ ಸಂಚಾರಿ ಪೊಲೀಸರು ಒಂದು ವಾರಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರ ವಿರುದ್ಧ 52,834 ವಾಹನಗಳನ್ನು ಪರಿಶೀಲಿಸಿ 556 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಅತಿವೇಗ ಚಾಲನೆ:
ಅತಿವೇಗ ವಾಹನ ಚಾಲನೆ ಮಾಡುವವರ ವಿರುದ್ಧ ನಗರದ 50 ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ 133 ಪ್ರಕರಣಗಳನ್ನು ದಾಖಲಿಸಿಕೊಂಡು 1.33 ಲಕ್ಷ ರೂ. ದಂಡ ಸಂಗ್ರಹಿಸಿ ದ್ದಾರೆ.ರಸ್ತೆ ಸುರಕ್ಷತೆಗಾಗಿ ಇಂತಹ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ಸಹ ಹಮಿಕೊಳ್ಳಲಾಗುವುದೆಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
ಪೂರ್ವ ವಿಭಾಗ:
ಪೂರ್ವ ವಿಭಾಗ ಪೊಲೀಸರು ಠಾಣಾ ಸರಹದ್ದುಗಳಲ್ಲಿ ಮದ್ಯಪಾನ ಮಾಡಿ ವಾಹನ ಗಳನ್ನು ಚಾಲನೆ ಮಾಡುವ ಚಾಲಕ-ಸವಾರರ ವಿರುದ್ಧ ಡಿ.12ರಿಂದ 15ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ 10,847 ವಾಹನಗಳನ್ನು ತಪಾಸಣೆ ಮಾಡಿ 117 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಜೊತೆಗೆ ಚಾಲನಾ ಅನುಜ್ಞಾ ಪತ್ರಗಳನ್ನು ಜಪ್ತಿಪಡಿಸಿಕೊಂಡು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಮಾನತುಪಡಿಸಲು ಕಳುಹಿಸಿಕೊಡಲಾಗಿದೆ.ಇದೇ ವೇಳೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ ಆಯುಕ್ತ ಕುಲದೀಪ ಕುಮಾರ್ ಆರ್ ಜೈನ್ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.